ಮಳೆ ಮಾರುತಗಳು ಸೃಷ್ಟಿ - ಇಂದಿನಿಂದ ಒಂದು ವಾರ ರಾಜ್ಯದಲ್ಲಿ ಮಳೆ ಸಾಧ್ಯತೆ : ಹವಾಮಾನರ ಮಾಹಿತಿ

ಸಾರಾಂಶ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರದಿಂದ ಒಂದು ವಾರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರದಿಂದ ಒಂದು ವಾರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಬಿಸಿಲು ಹೆಚ್ಚಾಗುತ್ತಿರುವ ಜತೆಗೆ, ಬಂಗಾಳಕೊಲ್ಲಿ ಹಾಗೂ ಶ್ರೀಲಂಕಾ ಭಾಗದಲ್ಲಿ ಮಳೆ ಮಾರುತಗಳು ಸೃಷ್ಟಿಯಾಗಿರುವುದರಿಂದ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಶುಕ್ರವಾರ ಅಲ್ಲಲ್ಲಿ ಮಳೆಯಾಗಲಿದೆ. ಮಾ.23 ಹಾಗೂ 24 ರಂದು ಹೆಚ್ಚಿನ ಪ್ರದೇಶದಲ್ಲಿ ಮಳೆಯಾಗುವ ಲಕ್ಷಣ ಇದೆ. ಮುಂಗಾರು ಅವಧಿಯಂತೆ ಎಲ್ಲೆಡೆ ಮಳೆಯಾಗುವುದಿಲ್ಲ. ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ತಜ್ಞ ಶ್ರೀನಿವಾಸ್‌ ರೆಡ್ಡಿ ಮಾಹಿತಿ ನೀಡಿದ್ದಾರೆ.

ಇನ್ನು ರಾಜಧಾನಿ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ರಾತ್ರಿ ಹಾಗೂ ಬೆಳಗಿನ ಜಾವದಲ್ಲಿ ಒಂದು ದಿನ ಸೆಕೆಯ ವಾತಾವರಣ, ಮತ್ತೊಂದು ದಿನ ಸಣ್ಣ ಪ್ರಮಾಣ ಚಳಿಯ ವಾತಾವರಣ ಇರಲಿದೆ. ಉತ್ತರ ದಿಕ್ಕಿನಿಂದ ಗಾಳಿ ಬೀಸಿದ ವೇಳೆ ಸೆಕೆ ವಾತಾವರಣ, ದಕ್ಷಿಣ ದಿಕ್ಕಿನಿಂದ ಗಾಳಿ ಬೀಸಿದ ದಿನ ಚಳಿಯ ಅನುಭವ ಆಗಲಿದೆ ಎಂದು ವಿವರಿಸಿದ್ದಾರೆ.

ಸಂಜೆ ಬಜಗೋಳಿ, ಮಾಳ ಮಿಯ್ಯಾರು, ನೆಲ್ಲಿಕಾರು ಹೊಸ್ಮಾರು, ಈದು, ಕೆರುವಾಶೆ, ಮಾಳ, ಶಿರ್ಲಾಲು, ರೆಂಜಾಳ, ಮರ್ಣೆಯಲ್ಲಿ ಮಳೆಯಾಗಿದೆ. ಹೆಬ್ರಿ ತಾಲೂಕು ಅಂಡಾರು, ಮುನಿಯಾಲು, ಮುಟ್ಲುಪಾಡಿಗಳಲ್ಲಿ ಉತ್ತಮ ಮಳೆ ಸುರಿದಿದೆ.

Share this article