ರಾಜ್ಯ ಟಿಡಿಆರ್‌ ಸರ್ಟಿಫಿಕೇಟ್‌ ಕೊಟ್ಟರೆ ಸಾಕು - ಸರ್ಕಾರದ ಖಜಾನೆಯಿಂದ 1 ಪೈಸೆ ಕೊಡೋದು ಬೇಡ : ಯದುವೀರ್‌

Published : Mar 01, 2025, 11:09 AM IST
yaduveer wadiyar

ಸಾರಾಂಶ

: ಟಿಡಿಆರ್‌ ಸಂಬಂಧ ನಮ್ಮ ಕುಟುಂಬಕ್ಕೆ ₹3400 ಕೋಟಿ ನೀಡಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದೇಶವನ್ನು ಪಾಲಿಸಬೇಕಾಗಿರೋದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಒಡೆಯರ್‌ ಹೇಳಿದ್ದಾರೆ.

  ಕುಶಾಲನಗರ(ಕೊಡಗು) : ಟಿಡಿಆರ್‌ ಸಂಬಂಧ ನಮ್ಮ ಕುಟುಂಬಕ್ಕೆ ₹3400 ಕೋಟಿ ನೀಡಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದೇಶವನ್ನು ಪಾಲಿಸಬೇಕಾಗಿರೋದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಒಡೆಯರ್‌ ಹೇಳಿದ್ದಾರೆ.

ಈ ಸಂಬಂಧ ಕುಶಾಲನಗರ ತಾಲೂಕಿನ ಕಣಿವೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಖಜಾನೆಯಿಂದ ಒಂದು ಪೈಸೆ ಕೊಡುವ ಅವಶ್ಯಕತೆ ಇಲ್ಲ, ಕೇವಲ ಒಂದು ಸರ್ಟಿಫಿಕೇಟ್ ಕೊಡಬೇಕಾಗಿದೆ. ಇಷ್ಟು ಟಿಡಿಆರ್‌ನ ಮಾಲೀಕರು ನಾವು ಅಂತ ಅಷ್ಟೇ. ಅದರ ಮೂಲಕ ರಸ್ತೆ ಅಭಿವೃದ್ಧಿ, ಅಗಲಿಕರಣ ಮಾಡಬಹುದು. 2009ರಲ್ಲಿ ಟಿಡಿಆರ್ ಕೊಡುತ್ತೇವೆ ಎಂದು ಸರ್ಕಾರ ನಿರ್ಣಯ ಕೈಗೊಂಡಿತ್ತು. ಅವತ್ತಿನಿಂದ ಇವತ್ತಿನ ವರೆಗೆ 15 ವರ್ಷ ಸುಪ್ರೀಂಕೋರ್ಟ್‌ನಲ್ಲಿ ವಾದ ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.

ಟಿಡಿಆರ್‌ ವಿಷಯವಾಗಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕಾದ ಬಗ್ಗೆ ಸುಪ್ರೀಂಕೋರ್ಟ್ ಬಹಳ ಸ್ಪಷ್ಟವಾಗಿ ಆದೇಶದಲ್ಲಿ ತಿಳಿಸಿದೆ. ಇದೀಗ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದ್ದು, ತಮಗೆ ₹3400 ಕೋಟಿ ನೀಡಲು ವಾರದ ಗಡುವು ನೀಡಿದ್ದಾರೆ. ಆದರೆ ನಮಗೆ ಇದು ಸಂತೋಷದ ವಿಚಾರ ಅಲ್ಲ. ಕಾನೂನು ನ್ಯಾಯವನ್ನು ಎತ್ತಿ ಹಿಡಿದಿದೆ ಅಷ್ಟೇ ಎಂದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ