ಪ್ಯಾಂಗಾಂಗ್‌ ಸರೋವರ ತಟದಲ್ಲಿ ವಚನಾನಂದ ಶ್ರೀ ಯೋಗ ದಿನಾಚರಣೆ

Published : Jun 21, 2025, 09:04 AM IST
Vachanananda shree

ಸಾರಾಂಶ

ಶ್ವಾಸಯೋಗ ಸಂಸ್ಥೆ ಕೇಂದ್ರ ಆಯುಷ್ ಇಲಾಖೆ, ಮಹಾಬೋಧಿ ಅಂತರಾಷ್ಟ್ರೀಯ ಧ್ಯಾನ ಕೇಂದ್ರದ ಸಹಯೋಗದಲ್ಲಿ ಶ್ವಾಸಗುರು ವಚನಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಲೇಹ್ ಲಡಾಕ್‌ನ ಪ್ಯಾಂಗಾಂಗ್ ಸರೋವರ ತಟದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.

 ಬೆಂಗಳೂರು : ಶ್ವಾಸಯೋಗ ಸಂಸ್ಥೆ ಕೇಂದ್ರ ಆಯುಷ್ ಇಲಾಖೆ, ಮಹಾಬೋಧಿ ಅಂತರಾಷ್ಟ್ರೀಯ ಧ್ಯಾನ ಕೇಂದ್ರದ ಸಹಯೋಗದಲ್ಲಿ ಶ್ವಾಸಗುರು ವಚನಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಲೇಹ್ ಲಡಾಕ್‌ನ ಪ್ಯಾಂಗಾಂಗ್ ಸರೋವರ ತಟದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.

ಕೊರೆಯುವ ಚಳಿಯಲ್ಲಿ ಶ್ವಾಸಗುರು ವಚನಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಮಾಜಿ ಲೆಫ್ಟಿನೆಂಟ್ ಗವರ್ನರ್ ಡಾ.ಕಿರಣ್‌ ಬೇಡಿ ಹಾಗೂ ಬಿಕ್ಕು ಸಂಘಸೇನಾ ಅವರು ಸೇರಿ ನೂರಾರು ಮಂದಿ ಯೋಗಪಟುಗಳು ಯೋಗಾಭ್ಯಾಸ ಮಾಡಿದರು.

ಈ ವೇಳೆ ವಚನಾನಂದಸ್ವಾಮೀಜಿ ಅವರೊಂದಿಗೆ ಸಂವಾದ ನಡೆಸಿದ ಕಿರಣ್‌ ಬೇಡಿ ಅವರು, ಈಶ್ವರ ಕೃಪೆಯಿಂದ ಇಂತಹ ಉತ್ತಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಎಲ್ಲರೂ ಸೇರಿ ಚಮತ್ಕಾರ ಹಾಗೂ ವಿಶ್ವದಾಖಲೆ ಸೃಷ್ಟಿಸಿದ್ದೇವೆ. ಯೋಗ ಇದಕ್ಕಿಂತಲೂ ಹೆಚ್ಚು ಪ್ರಚಾರವಾಗಬೇಕು.ನೀವು ಡಾಕ್ಯುಮೆಂಟರಿ ಮಾಡಿದ್ದೀರಿ. ನದಿ ತಟದಲ್ಲಿ ಅದ್ಭುತ ಯೋಗ ಕಾರ್ಯಕ್ರಮ ನಡೆಸಿದ್ದೀರಿ. ಇದು ಐತಿಹಾಸಿಕ. ಇಂತಹ ವಿಷಯಗಳು ಎಲ್ಲೆಡೆ ಹರಡಬೇಕು ಎಂದರು.

ಯೋಗ ಭಾರತೀಯ ಸಂಸ್ಕೃತಿಯ ಭಾಗ. ಯೋಗ ಅಭ್ಯಾಸದ ಬಗ್ಗೆ ಹಾಗೂ ಶಿಕ್ಷಣದ ಬಗ್ಗೆ ವೇದ ಉಪನಿಷತ್ತುಗಳಲ್ಲಿ ಉಲ್ಲೇಖವಿದೆ. ಇದು ಪ್ರಾರ್ಥನೆಯ ಹಬ್ಬ. ಈ ಶ್ರೀಮಂತಿಕೆ ಇನ್ನಷ್ಟು ಹೆಚ್ಚಾಗಬೇಕು ಎಂದು ಹೇಳಿದರು.

PREV
Read more Articles on

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ