ಎಂಟಿಬಿ ಮೌಂಟೆನ್ ಸೈಕ್ಲಿಂಗನಲ್ಲಿ ಬೆಂಗಳೂರು ತಂಡ ಸಮಗ್ರ ವೀರಾಗ್ರಣಿ, ಗದಗ ರನ್ನರ್ ಅಪ್‌

KannadaprabhaNewsNetwork |  
Published : Aug 10, 2026, 02:30 AM IST
 | Kannada Prabha

ಸಾರಾಂಶ

ಪುರುಷ ವಿಭಾಗ: 18 ವರ್ಷದೊಳಗಿನ 4 ರೌಂಡ್ಸ್‌ನಲ್ಲಿ ಬೆಂಗಳೂರು ಧನುಷ ಪ್ರಶಾಂತ ಪ್ರಥಮ, ಬೆಂಗಳೂರು ಪ್ರಣವ ಕೆ. ದ್ವಿತೀಯ, ಬೆಂಗಳೂರು ರೆಹಾನ ರೋಷನ್ ತೃತೀಯ ಸ್ಥಾನ.

ಮುಳಗುಂದ: ಕರ್ನಾಟಕ ರಾಜ್ಯ ಹಾಗೂ ಗದಗ ಜಿಲ್ಲಾ ಅಮೇಚೂರ್‌ ಸೈಕ್ಲಿಂಗ್ ಸಂಸ್ಥೆಯಿಂದ ಜರುಗಿದ 21ನೇ ರಾಜ್ಯ ಮಟ್ಟದ ಮೌಂಟೆನ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ಎಲೀಟ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರು.

ಪುರುಷ ವಿಭಾಗ: 18 ವರ್ಷದೊಳಗಿನ 4 ರೌಂಡ್ಸ್‌ನಲ್ಲಿ ಬೆಂಗಳೂರು ಧನುಷ ಪ್ರಶಾಂತ ಪ್ರಥಮ, ಬೆಂಗಳೂರು ಪ್ರಣವ ಕೆ. ದ್ವಿತೀಯ, ಬೆಂಗಳೂರು ರೆಹಾನ ರೋಷನ್ ತೃತೀಯ ಸ್ಥಾನ.ಎಲಿಟ್ ವಿಭಾಗ: 3.8 ಕಿಮೀ 6 ರೌಂಡ್ಸ್‌ನಲ್ಲಿ ಪ್ರಥಮ, ಮೈಸೂರಿನ ವೈಶಾಕ್ ದ್ವಿತೀಯ, ಮೈಸೂರಿನ ಚರಿತ್ ಗೌಡ ತೃತೀಯ, ಯಾದಗಿರಿಯ ರಮೇಶ ಮಾಳಗುಂಡಿ.

ಬಾಲಕರ 14 ವರ್ಷದೊಳಗಿನ ಒಂದು ಲ್ಯಾಂಪ್ ಪ್ರಥಮ, ಬೆಂಗಳೂರಿನ ಸಮೃತ್ ರಾಜೇಶ ದ್ವಿತೀಯ, ತೃತೀಯ ಸ್ಥಾನವನ್ನು ಬೆಂಗಳೂರಿನ ಶಿವರಾಮಕೃಷ್ಣ ಬೆಂಗಳೂರಿನ ಅನ್ವಿತ್ ಜೆ. ಪಡೆದರು.16 ವರ್ಷದೊಳಗಿನ 3.8 ಕಿಮೀ 3 ರೌಂಡ್ಸ್: ಬೆಂಗಳೂರಿನ ಸ್ನೇಹೊರಾಮ್ ಪ್ರಥಮ, ಬೆಂಗಳೂರಿನ ನಂದನದಾಸ್ ದ್ವಿತೀಯ, ಗದುಗಿನ ಪುಟ್ಟರಾಜ ಮರ್ಚಪ್ಪನವರ ತೃತೀಯ. ಮಹಿಳೆಯರು: 18 ವರ್ಷದೊಳಗಿನ 3.8 ಕಿಮೀ 4 ರೌಂಡ್ಸ್: ಬಾಗಲಕೋಟೆಯ ಗಾಯತ್ರಿ ಕಿತ್ತೂರ ಪ್ರಥಮ, ಬೆಂಗಳೂರಿನ ಕಿಯಾನ ಬರೂಹ ದ್ವಿತೀಯ, ಬೆಳಗಾವಿಯ ಶ್ರೇಯಾ ಚೌಗಲೆ ತೃತೀಯ.

ಎಲಿಟ್ ವಿಭಾಗದ 3.8 ಕಿಮೀ 4 ರೌಂಡ್ಸ್‌ನಲ್ಲಿ ಧಾರವಾಡದ ಭೀಮವ್ವ ಪ್ರಥಮ, ಬೆಳಗಾವಿಯ ಪೂಜಾ ಮಠಪತಿ ದ್ವಿತೀಯ, ಬೆಳಗಾವಿಯ ಭಾವನಾ ಪಾಟೀಲ ತೃತೀಯ.

ಬಾಲಕಿಯರ 14 ವರ್ಷದೊಳಗಿನ 3.8 ಕಿಮೀ ಒಂದು ರೌಂಡ್‌ನಲ್ಲಿ ಬೆಂಗಳೂರಿನ ಐರಾ ಸರನ್ ಪ್ರಥಮ, ಗದಗದ ಪ್ರತಿಭಾ ಕೌಜಲಗಿ ದ್ವಿತೀಯ, ಗದುಗಿನ ಕೀರ್ತನಾ ಅವರೆಡ್ಡಿ ತೃತೀಯ ಸ್ಥಾನ ಗಳಿಸಿದರು.16 ವರ್ಷದೊಳಗಿನ 3.8 ಕಿಮೀ 2 ರೌಂಡ್ಸ್‌ನಲ್ಲಿ ಗದುಗಿನ ಪ್ರಿಯಾಂಕಾ ಲಮಾಣಿ ಪ್ರಥಮ, ಗದುಗಿನ ಭಾಗ್ಯ ಮೇಲ್ಮನಿ ದ್ವಿತೀಯ, ವಿಜಯಪುರದ ಸೌಂದರ್ಯ ಅಂತಪುರ ತೃತೀಯ. 18 ವರ್ಷದೊಳಗಿನ ಬಾಲಕಿಯರ 4 ರೌಂಡ್ಸ್‌ನಲ್ಲಿ ಬೆಂಗಳೂರಿನ ಕಿಯಾನಾ ಬರುಹಾ ಪ್ರಥಮ, ಬಾಗಲಕೋಟೆಯ ಗಾಯತ್ರಿ ಕಿತ್ತೂರ ದ್ವಿತೀಯ, ಪಲ್ಲವಿ ಕುರಿ ತೃತೀಯ ಸ್ಥಾನ ಗಳಿಸಿದರು. 18 ವರ್ಷದೊಳಗಿನ ಬಾಲಕರ 5 ರೌಂಡ್ಸ್‌ನಲ್ಲಿ ಧನುಷ್ ಪ್ರಶಾಂತ ಪ್ರಥಮ, ಪ್ರಣವ ಕೆ. ದ್ವಿತೀಯ, ಕರಿಯಪ್ಪ ಹೆಗಡೆ ತೃತೀಯ ಸ್ಥಾನ ಪಡೆದರು. 23 ವರ್ಷದೊಳಗಿನ ಬಾಲಕಿಯರ 3 ರೌಂಡ್ಸ್‌ನಲ್ಲಿ ಗದುಗಿನ ಪವಿತ್ರಾ ಕುರ್ತಕೋಟಿ ಪ್ರಥಮ, ಮೈಸೂರಿನ ನಾಗಶಿರಿ ದ್ವಿತೀಯ, ಮೈಸೂರಿನ ಕರೇನ್ ಮಾರ್ಷಲ್ ತೃತೀಯ.

ಮಹಿಳೆಯರ 8 ರೌಂಡ್ಸ್‌ನಲ್ಲಿ ಧಾರವಾಡ ಭೀಮವ್ವ ಪ್ರಥಮ, ಬೆಳಗಾವಿಯ ಪೂಜಾ ಮಠಪತಿ ದ್ವಿತೀಯ, ಬೆಳಗಾವಿಯ ಭಾವನಾ ಪಾಟೀಲ್ ತೃತೀಯ ಸ್ಥಾನ. ಪುರುಷರ್ 5 ರೌಂಡ್ಸನಲ್ಲಿ ಮೈಸೂರಿನ ವೈಶಾಖ ಕೆ.ವಿ. ಪ್ರಥಮ, ಮೈಸೂರು ಚರಿತ್ ಗೌಡ ದ್ವಿತೀಯ, ಮಂಡ್ಯದ ಕಮಲರಾಜ ಎನ್. ತೃತೀಯ.

23 ವರ್ಷದೊಳಗಿನ ಬಾಲಕರ 8 ರೌಂಡ್ಸ್‌ನಲ್ಲಿ ಮೈಸೂರಿನ ಧನಂಜಯ ಎಸ್.ಟಿ. ಪ್ರಥಮ, ಭಾಗಲಕೋಟೆಯ ನಿತಿನ ಎಸ್. ಸರಾವರಿ ದ್ವಿತೀಯ, ಗದುಗಿನ ಉದಯ ಹಂಡಿ ತೃತೀಯ ಸ್ಥಾನ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಮುಖ್ಯವಾಹಿನಿಗೆ ಬರಲು ಸಂಘಟನೆ ಮುಖ್ಯ: ವಿಜಯಕುಮಾರ ಪಾಟೀಲ
ಪ್ರತಿಭಾ ಪುರಸ್ಕಾರ ಮಕ್ಕಳ ಸಾಧನೆ ಜವಾಬ್ದಾರಿ ಹೆಚ್ಚಿಸುವುದು-ಶಾಸಕ ಬಸವರಾಜ