ಆಯುರ್ವೇದದಿಂದ ಉತ್ತಮ ಆರೋಗ್ಯ: ಡಾ. ವಿವೇಕ ವಾಗಲೆ

KannadaprabhaNewsNetwork |  
Published : Oct 30, 2024, 12:41 AM IST
30ವೈಎಲ್ ಬಿ1:ಯಲಬುರ್ಗಾ ತಹಸ್ಹೀಲ್ ಕಚೇರಿಯಲ್ಲಿ ಜಿಲ್ಲಾ ಆಡಳಿತ,ಜಿಪಂ ಪಂಚಾಯತ,ಆಯುಷ್ ಇಲಾಖೆ,ತಾಲೂಕಾ ಸರಕಾರಿ ಆಯುಷ್ಮಾನ ಆರೋಗ್ಯ ಮಂದಿರ ಬಂಡಿ ಸಹಯೋಗದಲ್ಲಿ ನಡೆದ ಆಯುರ್ವೇದ ದೇವರು ಧನ್ವಮತರಿ ಜಯಂತಿ ಪ್ರಯುಕ್ತ ೯ನೇ ಅಂತರಾಷ್ಟ್ರೀಯ ಆಯುರ್ವೇದ ದಿನಾಚರಣೆ ೨೦೨೪-ಎಂಬ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ಸ್ವಸ್ಥ ಸಮಾಜದ ರಕ್ಷಣೆಯಲ್ಲಿ ಆಯುರ್ವೇದದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಬ್ಬರು ಆಯುರ್ವೇದ ಬಳಸುವ ಮೂಲಕ ಉತ್ತಮ ಆರೋಗ್ಯ ಪಡೆದುಕೊಳ್ಳಬೇಕು.

ಅಂತಾರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಸ್ವಸ್ಥ ಸಮಾಜದ ರಕ್ಷಣೆಯಲ್ಲಿ ಆಯುರ್ವೇದದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಬ್ಬರು ಆಯುರ್ವೇದ ಬಳಸುವ ಮೂಲಕ ಉತ್ತಮ ಆರೋಗ್ಯ ಪಡೆದುಕೊಳ್ಳಬೇಕು ಎಂದು ಹೋಮಿಯೋಪತಿ ವೈದ್ಯಾಧಿಕಾರಿ ಡಾ. ವಿವೇಕ ವಾಗಲೆ ಹೇಳಿದರು.

ಪಟ್ಟಣದ ತಹಸೀಲ್ದಾರ ಕಚೇರಿ ಸಭಾಂಗಣದಲ್ಲಿ ಜಿಪಂ, ಆಯುಷ್ ಇಲಾಖೆ, ತಾಲೂಕಾ ಸರ್ಕಾರಿ ಆಯುಷ್ಮಾನ ಆರೋಗ್ಯ ಮಂದಿರ ಬಂಡಿ ಸಹಯೋಗದಲ್ಲಿ ನಡೆದ ಧನ್ವಂತರಿ ಜಯಂತಿ ಪ್ರಯುಕ್ತ ೯ನೇ ಅಂತಾರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಆಯುರ್ವೇದವು ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯಾಗಿದೆ. ಆಯುರ್ವೇದ ಔಷಧವು ಮಾನವ ದೇಹವು ಪ್ರಕೃತಿಯೊಂದಿಗೆ ಸಮತೋಲನದಲ್ಲಿದೆ ಎಂದು ಪರಿಗಣಿಸುತ್ತದೆ ಎಂದು ಹೇಳಿದರು.

ಯೋಗ ತರಬೇತಿದಾರ ಲೋಕೇಶ ಲಮಾಣಿ ಮಾತನಾಡಿ, ಗರ್ಭೀಣಿಯರು ಮತ್ತು ತಾಯಂದಿರು ಧ್ಯಾನದ ಮಹತ್ವ ಮತ್ತು ಮುದ್ರೆಗಳ ಉಪಯೋಗ ಪಡೆದುಕೊಳ್ಳಬೇಕು ಎಂದರು.

ತಜ್ಞ ವೈದ್ಯಧಿಕಾರಿ ಡಾ. ಶಿಲ್ಪಾ ಬಾಚಲಾಪೂರ ಹಾಗೂ ವೈದ್ಯಾಧಿಕಾರಿ ಡಾ. ವಿ.ಆರ್. ತಾಳಿಕೋಟಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ತಪಾಸಣೆ ಮಾಡಿ ಪೌಷ್ಠಿಕಾಂಶಗಳ ಬಗ್ಗೆ ತಿಳುವಳಿಕೆ ನೀಡಿ ಔಷಧಿ ವಿತರಿಸಿದರು.

ಗ್ರೇಡ್-೨ ತಹಸೀಲ್ದಾರ ವಿ.ಎಚ್. ಹೊರಪೇಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಶಿಬಿರದ ಅನುಷ್ಠಾನ ಅಧಿಕಾರಿ ಡಾ. ಜ್ಯೋತಿ ಕಟ್ಟಿ, ಉಪ ತಹಸೀಲ್ದಾರ ವಿಜಯಕುಮಾರ ಗುಂಡೂರ, ಆಹಾರ ಇಲಾಖೆ ಅಧಿಕಾರಿ ಮಲ್ಲಿಕಾರ್ಜನಯ್ಯ ಶಾಸ್ತ್ರೀಮಠ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!