ಭಗತ್ ಸಿಂಗ್, ಸರ್‌ ಎಂ. ವಿಶ್ವೇಶ್ವರಯ್ಯ ಅಪ್ರತಿಮರು: ಮಲ್ಲಿಕಾರ್ಜುನ

KannadaprabhaNewsNetwork |  
Published : Oct 01, 2026, 01:15 AM IST
 ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದಿಂದ ನಡೆದ ನಗರದ ಗಾಂಧಿ ಚೌಕ್  ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಮಾತನಾಡಿದರು. | Kannada Prabha

ಸಾರಾಂಶ

ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಕಾರಿ ಭಗತ್ ಸಿಂಗ್ ಧೈರ್ಯದ‌ ಪ್ರತೀಕವಾದರೆ, ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರು ಜ್ಞಾನದ ಪ್ರತೀಕ‌ವಾಗಿದ್ದಾರೆ. ಈ ಇಬ್ಬರು ಮಹನೀಯರು ದೇಶದ ಎರಡು ಕಣ್ಣುಗಳಿದ್ದಂತೆ ಎಂದು ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರ ಹೇಳಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಕಾರಿ ಭಗತ್ ಸಿಂಗ್ ಧೈರ್ಯದ‌ ಪ್ರತೀಕವಾದರೆ, ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರು ಜ್ಞಾನದ ಪ್ರತೀಕ‌ವಾಗಿದ್ದಾರೆ. ಈ ಇಬ್ಬರು ಮಹನೀಯರು ದೇಶದ ಎರಡು ಕಣ್ಣುಗಳಿದ್ದಂತೆ ಎಂದು ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರ ಹೇಳಿದರು.ಕ್ರಾಂತಿಕಾರಿ ಭಗತ್ ಸಿಂಗ್ ಹಾಗೂ ಸರ್ ವಿಶ್ವೇಶ್ವರಯ್ಯ ಅವರ ಸ್ಮರಣಾರ್ಥ ಇಲ್ಲಿನ ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದಿಂದ ಆಯೋಜಿಸಿದ್ದ ನಗರದ ಗಾಂಧಿ ಚೌಕ್ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬ್ರಿಟಿಷರು ದೇಶದ ಮೇಲೆ ನಡೆಸಿದ ದಾಳಿ‌ಯಿಂದ ಅನೇಕರ ಸಾವು ನೋವು ಕಂಡಿದ್ದಾರೆ. ಗದ್ದೆಗಳಲ್ಲಿ ಭತ್ತ ಬೆಳೆಯುವದಕ್ಕಿಂತ ಬಂದೂಕು ಬೆಳೆಯಬೇಕು. ಅದರಿಂದ ಬ್ರಿಟಿಷರನ್ನು ಸದೆ‌ಬಡೆಯಲು ಸಹಕಾರಿಯಾಗಲಿದೆ ಎಂದು ಭಗತ್‌ ಸಿಂಗ್‌ ಹೇಳಿದ್ದರು. ಬಾಲಕನಿರುವಾಗಲೆ‌ ಆಂಗ್ಲರ ವಿರುದ್ಧ ಗುಡುಗಿದ್ದ ಭಗತ್ ಸಿಂಗ್ ಮುಂದೆ‌ ಜಲಿಯನ್‌ವಾಲಾ‌ ಘಟನೆಯಲ್ಲಿ ನೂರಾರು ಜನರನ್ನು ಬಲಿ ತೆಗೆದುಕೊಂಡಿರುವದನ್ನು ಕಂಡಿದ್ದರು. ಬ್ರಿಟಿಷರನ್ನು ಒದ್ದು ಓಡಿಸಬೇಕು‌, ನಮ್ಮ ದೇಶ ಸ್ವಾತಂತ್ರ್ಯ ಆಗುವವರೆಗೂ ಬಿಡುವದಿಲ್ಲವೆಂದು ಕ್ರಾಂತಿಕಾರಿ ಹೋರಾಟಕ್ಕೆ‌ ಧುಮುಕುತ್ತಾರೆ. ಯುವಕನ ವೀರಾವೇಶ ನೋಡಿ ಆಂಗ್ಲ‌ ಅಧಿಕಾರಿಗಳು ದಂಗಾಗಿದ್ದಾರು. ಮಹನೀಯರ ಆದರ್ಶಗಳನ್ನು ಮಕ್ಕಳೆಲ್ಲರು ಅಳವಡಿಸಿಕೊಳ್ಳಬೇಕು ಎಂದರು.

ಕನ್ನಡ ಜಾಗೃತಿ ಸಮಿತಿ ಸದಸ್ಯ ಬಸವರಾಜ ಸಿನ್ನೂರ ಮಾತನಾಡಿ, ಕಟ್ಟಡ ಕಾರ್ಮಿಕ ಸಂಘ ಪ್ರತಿವರ್ಷ ಬಡ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡುತ್ತಿರುವದು ಶ್ಲಾಘನೀಯ ಕಾರ್ಯ ಎಂದರು.

ಮುಖ್ಯಶಿಕ್ಷಕಿ ಅರುಂಧತಿ ಕುಲಕರ್ಣಿ ಮಾತನಾಡಿ, ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘ ಈ ಬಾರಿ ನಮ್ಮ ಶಾಲೆಯನ್ನು ಗುರುತಿಸಿ ಮಕ್ಕಳಿಗೆ ನೋಟ್ ವಿತರಿಸಿರುವದಕ್ಕೆ ಅಭಿನಂದನೆಗಳು. ಸಂಘ ಸಂಸ್ಥೆಗಳು ಸಂಘಟನಾತ್ಮಕವಾಗಿ ರಚನಾತ್ಮಕ ಕಾರ್ಯಗಳನ್ನು ಕೈಗೊಂಡಲ್ಲಿ ಸಂಘದ ಜತೆಗೆ ಅವರು ಬೆಳೆಯಲಿದ್ದಾರೆ.‌ ಉತ್ತಮ ಕೆಲಸ ಉತ್ತಮ‌ ಫಲವೇ ದೊರೆಯಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಭಗತ್ ಸಿಂಗ್ ಅವರ ಚಿತ್ರ‌ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ,‌ ದ್ವಿತೀಯ ಹಾಗೂ ತೃತೀಯ ಸ್ಥಾನ‌ಪಡೆದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಸಂಘದ ಅಧ್ಯಕ್ಷ‌ ಪ್ರದೀಪ ಅಣಬಿ ಅಧ್ಯಕ್ಷತೆ ವಹಿಸಿದ್ದರು. ಡಾ.ದೇವಿಂದ್ರಪ್ಪ ಸಗರ, ಸೋಪಣ್ಣ ಸಗರ, ಉರ್ದು ಶಾಲೆ ಮುಖ್ಯಶಿಕ್ಷಕ ಆರೀಫ ಅಹ್ಮದ್‌, ಮರೇಶ ಶಿರವಾಳ,‌ ಭೋಜಪ್ಪ ಮುಂಡಾಸ‌ ಇತರರು ಇದ್ದರು. ಶಿಕ್ಷಕ ಇಮಾನ್ವೆಲ್ ವಿಜಯರಾಜ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಲಿತರಿಗೆ ದೇಗುಲ ಪ್ರವೇಶ ನಿರ್ಬಂಧ: ತಹಸೀಲ್ದಾರ್ ಭೇಟಿ
ಗ್ಯಾರಂಟಿ ಬಡವರ ಬದುಕಿನಲ್ಲಿ ಹೊಸ ಚೈತನ್ಯ ನೀಡಿವೆ: ಶಿವು ಚಂಗಾವರ