)
ಎಂ.ಅಫ್ರೋಜ್ ಖಾನ್
ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸಲು ಮತ್ತು ಅವರ ಸ್ಥಾನಮಾನವನ್ನು ಸುಧಾರಿಸುವ ಧ್ಯೇಯೋದ್ದೇಶದಿಂದ ಜಾರಿಗೊಳಿಸಲಾಗಿದ್ದ ''''''''ಭಾಗ್ಯಲಕ್ಷ್ಮಿ'''''''' ಯೋಜನೆಯಡಿ ಜಿಲ್ಲೆಯಲ್ಲಿ ಮೊದಲ ಬಾರಿಗೆ 4,357 ಯುವತಿಯರು ಫಲಾನುಭವಿಗಳಾಗಿದ್ದಾರೆ.
ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿ 2006-2007ನೇ ಸಾಲಿನಲ್ಲಿ ಜಾರಿಗೊಂಡಿತ್ತು. ಈಗ 18 ವರ್ಷ ಪೂರ್ಣಗೊಂಡ ಹೆಣ್ಣು ಮಕ್ಕಳಿಗೆ ಹಣ ಪಾವತಿಸಲಾಗುತ್ತಿದೆ. 2024ರಲ್ಲಿ ಅವಧಿ ಮುಗಿದಿರುವ ಒಟ್ಟು ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವ ಪ್ರಕ್ರಿಯೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪ್ರಾರಂಭಿಸಿದೆ. ಇದು ಫಲಾನುಭವಿಗಳಿಗೆ ಶಿಕ್ಷಣ ಸೇರಿದಂತೆ ಹಲವು ಬರುತ್ತಿದೆ.18 ವರ್ಷಗಳ ಹಿಂದೆ ರಾಜ್ಯದಲ್ಲಿ ಜಾರಿಗೊಳಿಸಿದ್ದ ಈ ಯೋಜನೆಯ ಲಾಭ ಬರುವುದಕ್ಕೆ ಈಗ ಆರಂಭವಾಗಿದೆ. ಆಗ ತಮ್ಮ ಹೆಣ್ಣು ಮಕ್ಕಳ ಕುರಿತು ನೋಂದಣಿ ಮಾಡಿಸಿ ಬಾಂಡ್ ಪಡೆದಿದ್ದವರು ಪ್ರಯೋಜನ ಗಳಿಸುತ್ತಿದ್ದಾರೆ. 4357 ಯುವತಿಯರು ಪರಿಪಕ್ವ ಹಣವನ್ನು ತಮ್ಮದಾಗಿಸಿ ಕೊಳ್ಳುತ್ತಿದ್ದಾರೆ.
ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯು ಫಲಾನುಭವಿಗಳಿಗೆ ಹಣವನ್ನು ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಪಾವತಿಸುತ್ತಿದೆ. ಆಗ ಬಾಂಡ್ ಪಡೆದಿದ್ದವರಿಗೆ ಮೊದಲಿಗೆ 32 ಸಾವಿರವನ್ನು ಪಾವತಿಸಲಾಗುತ್ತಿದೆ. ಎಲ್ಲರ ಮಾಹಿತಿಯನ್ನೂ ಸಂಗ್ರಹಿಸಿ ದಾಖಲೆಗಳ ಸಹಿತ ನಿಗದಿತ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ, ಕುಟುಂಬ ಮತ್ತು ಸಮಾಜದಲ್ಲಿ ಹೆಣ್ಣು ಮಗುವಿನ ಘನತೆ ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಿದ್ದರು. 2006-07ರಲ್ಲಿ ನೋಂದಣಿ ಮಾಡಿಸಿದವರಿಗೆ 18 ವರ್ಷ ಪೂರೈಸಿದ ನಂತರ 32,351 ರು. ದೊರೆಯಲಿದೆ. 2008ರ ಆ.1ರಿಂದ 2020ರ ಮಾರ್ಚ್ ಅಂತ್ಯದವರೆಗಿನ ಅವಧಿಯಲ್ಲಿ ನೋಂದಾಯಿಸಿದವರಿಗೆ ಸಿಗುವ ಅಂದಾಜು ಮೊತ್ತವನ್ನು 1 ಲಕ್ಷಕ್ಕೆ ಏರಿಕೆ ಮಾಡಲಾಯಿತು. ಅದು ಪರಿಪಕ್ವಗೊಂಡಾಗ ಫಲಾನುಭವಿಗಳಿಗೆ ಹಣ ದೊರೆಯುತ್ತದೆ.
...ಬಾಕ್ಸ್....
2006-07ರಲ್ಲಿ ನೋಂದಾಯಿಸಿದ್ಧವರ ವಯಸ್ಸು ಈಗ 18 ವರ್ಷ ಪೂರ್ಣಗೊಂಡಿರುವುದರಿಂದ ಎಲ್‌ಐಸಿಯಿಂದ ಪರಿಪಕ್ವ ಮೊತ್ತ ಮಂಜೂರಾಗಿದೆ. 2020-2021 ರಿಂದ ''''''''ಭಾಗ್ಯಲಕ್ಷ್ಮಿ'''''''' ಯೋಜನೆಯು ''''''''ಸುಕನ್ಯಾ ಸಮೃದ್ಧಿ ಯೋಜನೆ''''''''ಯಾಗಿ ರೂಪಾಂತರಗೊಂಡಿತು. ಇದರಲ್ಲಿ ಖಾತೆ ತೆರೆದವರಿಗೆ 21 ವರ್ಷ ನಂತರ ಅಂದಾಜು 1.27 ಲಕ್ಷ ದೊರೆಯಲಿದೆ.
ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಖಾತೆ ಯೋಜನೆ (2020-21) 2006-07 ರಿಂದ 2019-20 ನೇ ಸಾಲಿನವರೆಗೆ ಭಾರತೀಯ ಜೀವ ವಿಮಾ ನಿಗಮವು ಪಾಲುದಾರ ಹಣಕಾಸುಸಂಸ್ಥೆಯಾಗಿದ್ದು, 2020-21ನೇ ಸಾಲಿನಿಂದ ಆಡಳಿತಾತ್ಮಕ ಕಾರಣಗಳಿಂದ ಭಾಗ್ಯಲಕ್ಷ್ಮಿ ಯೋಜನೆಯನ್ನು ಸರ್ಕಾರದ ಆದೇಶದಂತೆ ಅಂಚೆ ಯೋಜನೆಯ ಮೂಲಕ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆ ಅನುಷ್ಠಾನಗೊಳಿಲಾಗಿದೆ.
...ಬಾಕ್ಸ್ ....
2006 ಏಪ್ರಿಲ್ 1 ರಿಂದ 2025ರ ಡಿ.17ರವರೆಗೆ ಫಲಾನುಭವಿಗಳ ನೊಂದಣಿ ವಿವರತಾಲೂಕುಫಲಾನುಭವಿಗಳ ಸಂಖ್ಯೆ
ಚನ್ನಪಟ್ಟಣ21,322ಹಾರೋಹಳ್ಳಿ5,843
ಕನಕಪುರ16,408ಮಾಗಡಿ13,278
ರಾಮನಗರ18,537ಒಟ್ಟು75,388