ಭಜನೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ: ಶ್ರೀಧರ ನಾಯ್ಕ

KannadaprabhaNewsNetwork |  
Published : Nov 17, 2025, 01:30 AM IST
ಫೋಠೊ ಪೈಲ್ : 16ಬಿಕೆಲ್2 | Kannada Prabha

ಸಾರಾಂಶ

ಪಟ್ಟಣದ ಆಸರಕೇರಿ ಗುರುಮಠ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಕಾರ್ತಿಕ ಮಾಸದ ಭಜನಾ ಪ್ರಯುಕ್ತ ಹಮ್ಮಿಕೊಂಡ ಭಜನಾ ಕುಣಿತ ಸ್ಪರ್ಧೆಯಲ್ಲಿ ಹಾರ್ಸಿಕಾನ ಶ್ರೀ ಯಕ್ಷೆ ದೇವತಾ ಭಜನಾ ತಂಡ ಪ್ರಥಮ ಸ್ಥಾನ ಪಡೆಯಿತು.

ಆಸರಕೇರಿಯಲ್ಲಿ ಕಾರ್ತಿಕ ಮಾಸದ ಭಜನೆ ಸಂಪನ್ನ

ಕನ್ನಡಪ್ರಭ ವಾರ್ತೆ ಭಟ್ಕಳ

ಪಟ್ಟಣದ ಆಸರಕೇರಿ ಗುರುಮಠ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಕಾರ್ತಿಕ ಮಾಸದ ಭಜನಾ ಪ್ರಯುಕ್ತ ಹಮ್ಮಿಕೊಂಡ ಭಜನಾ ಕುಣಿತ ಸ್ಪರ್ಧೆಯಲ್ಲಿ ಹಾರ್ಸಿಕಾನ ಶ್ರೀ ಯಕ್ಷೆ ದೇವತಾ ಭಜನಾ ತಂಡ ಪ್ರಥಮ ಸ್ಥಾನ ಪಡೆಯಿತು.

ದ್ವಿತಿಯ ಬಹುಮಾನವನ್ನು ಕಾನಮದ್ಲುವಿನ ಶ್ರೀ ದುರ್ಗಾಪರವೇಶ್ವರಿ ಭಜನಾ ತಂಡ ತೃತೀಯ ಬಹುಮಾನವನ್ನು ಅಳ್ವೇಕೊಡಿಯ ರಾಮಾಂಜನೇಯ ಬಜನಾ ತಂಡ ಪಡೆಯಿತು. ಸಮಾಧಾನಕರ ಬಹುಮಾನವನ್ನು ಆಸರಕೇರಿ ವೆಂಕಟೇಶ್ವರ ಭಜನಾ ತಂಡ ಹಾಗೂ ಬಿಟ್ಟಿಬೆಳ್ಳುವಿನ ಶ್ರೀ ನಾಗಯಕ್ಷೆ ಭಜನಾ ತಂಡ ಪಡೆಯಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆಸರಕೇರಿ ಭಜನಾ ತಂಡದ ಪ್ರಮುಖರಾದ ಶ್ರೀಧರ ನಾಯ್ಕ ಮಾತನಾಡಿ, ದೇವರನ್ನು ನಮ್ಮಲ್ಲಿ ಒಲಿಸಿಕೊಳ್ಳಲು ಭಜನೆಯು ಒಂದು ಪ್ರಮುಖ ಸಾಧನೆಯಾಗಿದೆ. ಭಕ್ತಿಯ ಭಜನೆಯ ಮೂಲಕ ನಾವು ಭಗವಂತನನ್ನು ಒಲಿಸಿಕೊಳ್ಳಬಹದು ಎಂದ ಅವರು, ಭಜನೆಯು ನಮ್ಮ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ನಮ್ಮ ದೇವಸ್ಥಾನದ ಕಾರ್ತಿಕ ಮಾಸದ ಭಜನೆಗೆ ೧೫೦ ಕ್ಕೂ ಅಧಿಕ ವರ್ಷದ ಇತಿಹಾಸವಿದೆ. ಈ ಹಿಂದೆ ಕಷ್ಟಕರ ಪರಿಸ್ಥಿತಿಯಲ್ಲೂ ನಮ್ಮ ಹಿರಿಯರು ಭಜನೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಇಂದಿನ ಯುವಕಕರು ಸಹ ಮಳೆ ಗಾಳಿಯನ್ನು ಲೆಕ್ಕಿಸದೇ ಸತತ ೨೪ ದಿನ ಕಾರ್ತಿಕ ಮಾಸದಲ್ಲಿ ಭಜನೆಯ ಮೆರವಣಿಗೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಈ ಹಿಂದೆ ಪ್ರತಿ ಮನೆಯಲ್ಲೂ ಭಜನೆಯ ತಾಳದ ಶಬ್ದ ಕೇಳಿಸುತ್ತಿತ್ತು. ಇಂದು ನಾವು ನಮ್ಮ ಧರ್ಮದ ಸಂಸ್ಕಾರದ ಪ್ರತೀಕವಾದ ಭಜನೆಯನ್ನು ಮರೆಯುತ್ತಿದ್ದೇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುರುಮಠದ ಅಧ್ಯಕ್ಷ ಅರುಣ್ ನಾಯ್ಕ ಮಾತನಾಡಿ, ಆಸರಕೇರಿಯ ಗ್ರಾಮಸ್ಥರು ಹಲವಾರು ವರ್ಷಗಳಿಂದ ಪ್ರತಿ ವರ್ಷದ ಕಾರ್ತಿಕ ಮಾಸದಲ್ಲಿ ೨೪ ದಿನದ ಭಜನೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇವರ ಕಾಯಕ್ಕೆ ನಿಜಕ್ಕೂ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ನಾಮಧಾರಿ ಅಬಿವೃದ್ಧಿ ಸಂಘದ ಉಪಾಧ್ಯಕ್ಷ ಎಂ.ಕೆ. ನಾಯ್ಕ, ಗುರುಮಠದ ಗೌರವಾಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ಗುರುಮಠದ ಕಾರ್ಯದರ್ಶಿ ಡಿ.ಎಲ್. ನಾಯ್ಕ, ಯುವಕ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ, ಮತ್ತಿತರರಿದ್ದರು. ಶ್ರೀಕಾಂತ ನಾಯ್ಕ ಹಾಗೂ ಪಾಂಡುರಂಗ ನಾಯ್ಕ ನಿರ್ವಹಿಸಿದರು. ಶಿಕ್ಷಕ ನಾರಾಯಣ ನಾಯ್ಕ, ಜಗದೀಶ ನಾಯ್ಕ ಹಾಗೂ ವೀನಾ ರಾಮಚಂದ್ರ ನಾಯ್ಕ ಭಜನಾ ಕುಣಿತ ಸ್ಪರ್ಧೆಗೆ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

PREV

Recommended Stories

ಕೆಎಲ್ಇ ಶಿಕ್ಷಣ ಜತೆಗೆ ಸಂಸ್ಕಾರ ನೀಡಿದ ಸಂಸ್ಥೆ
ಸಾಲುಮರದ ತಿಮ್ಮಕ್ಕನವರ ಪ್ರಕೃತಿ ಪ್ರೇಮ ಎಲ್ಲರಿಗೂ ಆದರ್ಶ: ಶಾಸಕಿ ಅನ್ನಪೂರ್ಣ