ಹುಬ್ಬಳ್ಳಿ: ಇಲ್ಲಿನ ಅಶೋಕ ನಗರದ ಕನ್ನಡ ಭವನದಲ್ಲಿ ನವಶ್ರೀ ಕಲಾಚೇತನ ಸಂಸ್ಥೆ ವತಿಯಿಂದ ನ. 4ರಂದು ಮಧ್ಯಾಹ್ನ 3 ಗಂಟೆಗೆ ಭಕ್ತಿ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನವಶ್ರೀ ಕಲಾಚೇತನ ಸಂಸ್ಥೆಯ ಅಧ್ಯಕ್ಷೆ ಸಂಗೀತಾ ದೇವದಾಸ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಿನ ಮಕ್ಕಳಿಗೆ ದೇವರ ಕುರಿತು ತಿಳಿವಳಿಕೆ ನೀಡುವುದು, ಮಕ್ಕಳಿಗೆ ವಿಷ್ಣುವಿನ ದಶಾವತಾರಗಳ ಬಗ್ಗೆ ಅರಿವು ಮೂಡಿಸುವುದು, ಗೋಂದಳಿಯಲ್ಲಿ ದೇವಿಯ ಅವತಾರಗಳ ಕುರಿತು ನೃತ್ಯ ನಾಟಕದ ಮೂಲಕ ತಿಳಿಸುವುದು, ದಶವತಾರದ ವೇಷ-ಭೂಷಣ, ಹೆಣ್ಣು ಮಕ್ಕಳಿಗೆ ನವದುರ್ಗೆಯರ ಅವತಾರದ ವೇಷಭೂಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ದೇವಿಯ ಕುರಿತಾಗಿ ಮಹಿಳೆಯರಿಗೆ ಗ್ರೂಫ್ ಸಾಂಗ್ಸ್ ಹಾಗೂ ಗ್ರೂಫ್ ಡ್ಯಾನ್ಸ್ ಇರಲಿದ್ದು, ವಿಶೇಷವಾಗಿ ಅಂಗವಿಕಲರಿಂದ ಭಕ್ತಿ ಗೀತೆಗಳು ಇರಲಿವೆ ಎಂದು ಮಾಹಿತಿ ನೀಡಿದರು. ಈ ವೇಳೆ ಲತಾ ಪಾಟೀಲ್, ಗೀತಾ ಹೊಸಮನಿ, ರೇಖಾ ಕಾಲವಾಡ, ಪ್ರೇಮಾ ಪೂಜಾರ, ಅನುಪಮಾ ಹೊಸಮನಿ, ಮಂಜುಳಾ ಬೆಣ್ಣಿ ಸೇರಿದಂತೆ ಹಲವರಿದ್ದರು.