ಭಾಲ್ಕಿ ಅರ್ಬನ್‌ ಬ್ಯಾಂಕ್‌ ನಿರ್ದೇಶಕರ ಚುನಾವಣೆ

KannadaprabhaNewsNetwork |  
Published : Dec 26, 2024, 01:04 AM IST
ಚಿತ್ರ 24ಬಿಡಿಆರ್‌8ಭಾಲ್ಕಿಯ ಅರ್ಬನ್‌ ಬ್ಯಾಂಕ್‌ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಶೃತಿ ಸಂತೋಷ ಪಾಟೀಲ್‌ ಅವರು ಡಾ. ಗೀತಾ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ಸಿಹಿ ವಿತರಿಸಿದರು. ಪ್ರಿಯಾ ಓಂ ಜತೆಗಿದ್ದರು. | Kannada Prabha

ಸಾರಾಂಶ

ಸಚಿವ ಈಶ್ವರ ಖಂಡ್ರೆ ಬೆಂಬಲಿಗರಿಗೆ ಭರ್ಜರಿ ಜಯ

ಕನ್ನಡಪ್ರಭ ವಾರ್ತೆ ಭಾಲ್ಕಿ

ಇಲ್ಲಿನ ಅರ್ಬನ್‌ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಬೆಂಬಲಿಗರು ಭರ್ಜರಿ ಗೆಲುವು ಸಾಧಿಸಿದ್ದಾರೆ.

2024-29ರ ಅವಧಿಗೆ ಪಟ್ಟಣದ ಅರ್ಬನ್‌ ಸಹಕಾರ ಬ್ಯಾಂಕ್‌ನಲ್ಲಿ ಇತ್ತೀಚೆಗೆ ಮಹಿಳಾ ಕ್ಷೇತ್ರದ 02, ಸಾಮಾನ್ಯ ಕ್ಷೇತ್ರದ 07, ಪರಿಶಿಷ್ಟ ಜಾತಿ 01, ಪ್ರವರ್ಗ (ಎ) ಕ್ಷೇತ್ರದ 1 ಮತ್ತು ಪ್ರವರ್ಗ (ಬಿ) 1 ಕ್ಷೇತ್ರ ಸೇರಿ ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆಯಿತು.

ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಗರು 12 ಸ್ಥಾನ ಮತ್ತು ಬಿಜೆಪಿ ಬೆಂಬಲಿಗರು 09 ಸ್ಥಾನಗಳಿಗೆ ಸ್ಪರ್ಧಿಸಿದರೆ ಒಂದು ಸ್ಥಾನಕ್ಕೆ ಸ್ವತಂತ್ರ ಅಭ್ಯರ್ಥಿ ಕಣದಲ್ಲಿದ್ದರು.

ಹಾಗಾಗಿ ಈ ಚುನಾವಣೆ ಎರಡು ಪಕ್ಷಗಳ ಬೆಂಬಲಿಗರಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟಿತು. ಅಂತಿಮವಾಗಿ ಮತದಾರರು ಕಾಂಗ್ರೆಸ್‌ ಬೆಂಬಲಿಗರ ಪರವಾಗಿ ಮತ ಚಲಾಯಿಸಿದ್ದು 12 ಸ್ಥಾನಗಳ ಪೈಕಿ 11 ಸ್ಥಾನಗಳಲ್ಲಿ ಕಾಂಗ್ರೆಸ್‌ ಬೆಂಬಲಿಗರು ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ. ಒಂದು ಸ್ಥಾನದಲ್ಲಿ ಸ್ಪರ್ಧಿಸಿದ ಸ್ವತಂತ್ರ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ.

*ವಿಜೇತರ ವಿವರ:

ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿದ ಸೂರ್ಯಮತಿ ಚಂದ್ರಕಾಂತ ಮಡ್ಡೆ 422, ಮನಿಷಾ ಸಂಗಮೇಶ ವಾಲೆ 354 ಮತಗಳು ಪಡೆದು ಗೆಲುವು ಸಾಧಿಸಿದ್ದಾರೆ. ಪರಿಶಿಷ್ಟ ಜಾತಿ ಕ್ಷೇತ್ರದಿಂದ ಬಸವರಾಜ ಮಹಾಪು ಬೊರಡೆ 337 ಮತಗಳು ಪಡೆದು ವಿಜಯ ಶಾಲಿಯಾಗಿದ್ದು, ಸಾಮಾನ್ಯ ಕ್ಷೇತ್ರದಿಂದ ಚಂದ್ರಶೇಖರ ಬಾಬು ವಂಕೆ 549, ಅನಿಲಕುಮಾರ ಶಂಕರೆಪ್ಪ ಲೋಖಂಡೆ 477, ದಿಲೀಪಕುಮಾರ ಕಲ್ಯಾಣರಾವ್‌ ಸುಂಟೆ 451, ವಿಲಾಸ ಜಗನ್ನಾಥ ಬಕ್ಕಾ 440, ಜೀವನ ಗುರುಪಾದಪ್ಪ ಬಕ್ಕಾ 433, ನಿರಂಜನ ಶಾಂತಕುಮಾರ ಅಷ್ಟೂರೆ 407 ಮತ್ತು ಶಿವಕುಮಾರ ನಾಗಶೆಟ್ಟಿ ಕಲ್ಯಾಣೆ 371 ಮತ ಗಳಿಸಿ ಗೆಲುವು ಸಾಧಿಸಿದ್ದಾರೆ. ಪ್ರವರ್ಗ (ಬಿ) ಕ್ಷೇತ್ರದಿಂದ ಬಾಲಾಜಿ ಹಣಮಂತರಾವ್‌ ಬಾಮಣೆ 346, ಪ್ರವರ್ಗ(ಎ) ಕ್ಷೇತ್ರದಿಂದ ಶೃತಿ ಸಂತೋಷ ಪಾಟೀಲ್‌ 332 ಮತಗಳು ಪಡೆದು ಆಯ್ಕೆಯಾಗಿದ್ದಾರೆ. ಇನ್ನು ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಸಂಜೀವಕುಮಾರ ಗುಂಜರಗೆ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!