ಕನ್ನಡಪ್ರಭ ವಾರ್ತೆ ಲೋಕಾಪುರ
ಬಳಿಕ ಮಾತನಾಡಿದ ಸಚಿವ ತಿಮ್ಮಾಪುರ ಅವರು, ಭಂಟನೂರ ಗ್ರಾಮದ ಜನರಿಗೆ ಉತ್ತಮ ರಸ್ತೆ ಸಂಪರ್ಕ ಮತ್ತು ಸಾಮಾಜಿಕ ಸೌಲಭ್ಯಗಳು ದೊರೆಯುವುದು ಅಭಿವೃದ್ಧಿಯ ಮೂಲ ಅಗತ್ಯವಾಗಿದೆ. ₹೧.೫ ಕೋಟಿ ವೆಚ್ಚದ ಲೋಕಾಪುರ ಒಳ ರಸ್ತೆಯ ನಿರ್ಮಾಣದಿಂದ ಗ್ರಾಮದ ಸಂಚಾರ ಸೌಲಭ್ಯ ಗಣನೀಯವಾಗಿ ಸುಧಾರಣೆಯಾಗಲಿದೆ. ಪಾಂಡುರಂಗ ಮತ್ತು ಮಾರುತೇಶ್ವರ ದೇವಸ್ಥಾನಗಳ ಹತ್ತಿರ ನಿರ್ಮಾಣವಾಗುತ್ತಿರುವ ಸಮುದಾಯ ಭವನಗಳು ಸಮುದಾಯದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗೆ ಉತ್ತಮ ವೇದಿಕೆಯಾಗಲಿವೆ. ನಮ್ಮ ಸರ್ಕಾರ ಗ್ರಾಮೀಣ ಮೂಲಸೌಕರ‍್ಯಗಳು, ಸಮುದಾಯ ಭವನಗಳು ಮತ್ತು ದೇವಸ್ಥಾನಗಳ ಸುತ್ತಮುತ್ತಲಿನ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದು, ಇಂತಹ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಶೀಘ್ರವಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಈ ಮೂರು ಕಾಮಗಾರಿಗಳು ಭಂಟನೂರ ಗ್ರಾಮದ ಸಮಗ್ರ ಪ್ರಗತಿಗೆ ಮಹತ್ವದ ಕೊಡುಗೆಯಾಗಲಿವೆ ಎಂದು ಹೇಳಿದರು.
ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ವಿಮುಲ್ ಕೆಎಂಎಫ್ ನಾಮನಿರ್ದೇಶತ ಸದಸ್ಯರಾದ ಲಕ್ಷ್ಮಣ ಮಾಲಗಿ, ಕಾಂಗ್ರೆಸ್ ಮುಖಂಡರಾದ ಮೋಹನ ಸೊನ್ನದ, ಲಕ್ಷ್ಮಣ ಬಸುನಾಯಕ, ಲಕ್ಷ್ಮಣ ಸೊನ್ನದ, ಈರಪ್ಪ ಸೊನ್ನದ, ಯಲ್ಲಪ್ಪ ಬಸುನಾಯಕ, ಸಂಗಪ್ಪ ಕಟ್ಟಗೇರಿ, ಹನುಮಂತ ಅಮಲಜೇರಿ, ರಾಜು ಕಾಡರಕೊಪ್ಪ, ರಂಗಪ್ಪ ಬಸುನಾಯಕ, ಯಮನಪ್ಪ ಹಿರಕನ್ನವರ, ಗಿರಿಯಪ್ಪ ಹುಡ್ಡೆದ, ಸುಭಾಸ ಚಿತ್ತರಗಿ, ಗಿರಿಯಪ್ಪ ಪಚ್ಚನ್ನವರ ಸೇರಿದಂತೆ ಪಕ್ಷದ ಕಾರ್ಯಕರ್ತರು, ಸ್ಥಳೀಯ ಗಣ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.