ಚಿಕ್ಕಮಗಳೂರಿನಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನ
ಭಾರತಾಂಬೆಯ ಮೊದಲ ಮಗಳು ಕರುನಾಡ ಭುವನೇಶ್ವರಿ. ಆ ತಾಯಿ ಮಡಿಲಿನಲ್ಲಿ ಅಕ್ಕರೆಯಿಂದ ಸೇವೆ ಸಲ್ಲಿಸುತ್ತಿರುವ ಸಾಹಿತ್ಯ ಪರಿಷತ್ತಿನಲ್ಲಿ ಪ್ರತಿ ಹೆಣ್ಣಿಗೂ ಜಯವಾಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಹೇಳಿದರು.ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಮಹಿಳಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕನ್ನಡದ ಹಬ್ಬ ಅಥವಾ ಜಾತ್ರೆಗಳಲ್ಲಿ ಪಾಲ್ಗೊಳ್ಳಲು ಯಾವುದೇ ಆಹ್ವಾನದ ಅವಶ್ಯಕತೆ ಯಿಲ್ಲ. ಮುಕ್ತವಾಗಿ ಕನ್ನಡತಿಯರು ಪಾಲ್ಗೊಂಡರೆ ಕಾರ್ಯಕ್ರಮಕ್ಕೆ ಕಳೆಬಂದಂತೆ. ತಾವು ಮೂಲತಃ ಆಂಗ್ಲ ಭಾಷೆಯಲ್ಲಿ ವಿದ್ಯಾಭ್ಯಾಸ ಪೂರೈಸಿದರೂ ಅಪ್ಪಟ ಕನ್ನಡತಿ. ಇದೀಗ ಕಾರ್ಯನಿಮಿತ್ತ ಎಲ್ಲೆ ತೆರಳಿದರೂ ಕನ್ನಡ ಮಗಳೆನ್ನಲು ಬಹಳಷ್ಟು ಆತ್ಮಾಭಿಮಾನವಿದೆ ಎಂದು ನುಡಿದರು.
ಮಹಿಳೆಯ ಸಾಹಿತ್ಯ ಅಥವಾ ಸ್ವಾಭಿಮಾನದ ಹೋರಾಟ ಹಿಂದಿನಿಂದಲೂ ಇದೆ. ಗಂಡನ ಆಜ್ಞೆ ಹಾಗೂ ಮಕ್ಕಳ ಪಾಲನೆ ಮುಖ್ಯ ಜವಾಬ್ದಾರಿಯೊಂದಿಗೆ ಸಾಹಿತ್ಯ, ಸಂಗೀತ, ದೇಶ ರಕ್ಷಣೆ ಹಾಗೂ ಸಮಾಜದ ವಿವಿಧ ಸ್ಥರಗಳಲ್ಲಿ ತೊಡಗಿಸಿಕೊಂಡು ಕೌಟುಂಬಿಕ ಚಿಂತನೆಗಳ ನಡುವೆಯೂ ಮುಖ್ಯವಾಹಿನಿಯಲ್ಲಿ ಬೆಳಕು ತೋರುತ್ತಿರುವಳು ಎಂದು ಹೇಳಿದರು.ಮನೆಯ ಸಂಭ್ರಮ, ಊರಿನ ಜಾತ್ರೆ, ಪರಿಷತ್ತಿನ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೆಣ್ಣಿದ್ದರೆ ಅದಕ್ಕೊಂದು ಕಳೆ ಯಿದ್ದಂತೆ. ಭವ್ಯವಾಗಿ ಶೃಂಗಾರಗೊಂಡು ಇಡೀ ಹಬ್ಬದ ಸಂಭ್ರಮವನ್ನು ಮೆರಗು ತುಂಬುವವಳು ಹೆಣ್ಣೆಂದರೆ ತಪ್ಪಾಗ ಲಾರದು ಎಂದರು.ಸಾಹಿತಿ ದೀಪಾ ಹಿರೇಗುತ್ತಿ ಮಾತನಾಡಿ, ಮಹಿಳೆಯ ಸೌಂದರ್ಯವನ್ನು ನೋಡಿ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ಲಭಿಸಿಲ್ಲ. ಆಳವಾಗಿ ಅಧ್ಯಯನ ನಡೆಸಿ ರಚಿಸಿದ ಪುಸ್ತಕಗಳಿಗೆ ಪ್ರಶಸ್ತಿ ಬಂದಿದೆ. ಆ ಸಾಲಿನಲ್ಲಿ ಬಾನು ಮುಷ್ತಕ್ ಹಾಗೂ ದೀಪಾಬಾಸ್ತಿ ಸಾಧನೆಗೆ ಅಂತರಾಷ್ಟ್ರೀಯ ಬುಕರ್ ಪಶಸ್ತಿಗಳಿಸಿ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಹೇಳಿದರು.ಆಧುನಿಕತೆ ಜಗತ್ತಿನಲ್ಲಿ ಕೆಲವರು ಸಂವಿಧಾನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕಿಸುವ ಪ್ರವೃತ್ತಿ ಪ್ರಚಲಿತದಲ್ಲಿದೆ. ಆದರೆ, ಆ ಸಂವಿಧಾನದಿಂದಲೇ ಭಾರತದಲ್ಲಿ ಮಹಿಳೆಯೊಬ್ಬರು ರಾಷ್ಟ್ರಪತಿ ಹುದ್ದೆ ಸೇರಿದಂತೆ ಜನಪ್ರತಿನಿಧಿಗಳಾಗಲು ಸಾಧ್ಯವಾಗಿದೆ ಎಂಬ ಅರಿವು ಟೀಕೆ ಮಾಡುವವರಿಗಿಲ್ಲ ಎಂದರು.
ಪೂರ್ವಿಕರು ಕಟ್ಟಿದ ಜಾನಪದ ಸಮಾಜಕ್ಕೆ ತಾಯಿ: ಮೋಟಮ್ಮ
ಮನುಷ್ಯನ ನಡೆ, ನುಡಿ ಎಲ್ಲವೂ ಜಾನಪದ ಮೂಲಬೇರಿನಿಂದಲೇ ಬಂದಿವೆ. ಆದರೆ ತಾಂತ್ರಿಕ ಜಗತಿನಲ್ಲಿ ಎಲ್ಲವೂ ನಶಿಸಿ ಹೋಗುತ್ತಿವೆ. ಇಂದಿನ ಯುವ ಸಮೂಹ ಸಿನಿರಂಗ ಸೇರಿದಂತೆ ಅತಿಹೆಚ್ಚು ಮೊಬೈಲ್ ಹಾಗೂ ಟಿವಿಗಳಿಗೆ ಮಾರುಹೋಗಿ ಜಾನಪದದ ಮೌಲ್ಯ ಕಣ್ಮರೆಯಾಗುತ್ತಿದೆ ಎಂದು ವಿಷಾದಿಸಿದರು.15 ಕೆಸಿಕೆಎಂ 4--