ಸಿದ್ದಾಪುರ: ಪತ್ರಕರ್ತೆ, ಬರಹಗಾರ್ತಿ ಭಾರತಿ ಹೆಗಡೆ ಅವರಿಗೆ ಕರ್ನಾಟಕ ಸಂಭ್ರಮ ೫೦- ಸುವರ್ಣ ಮಹೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.
ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕೃಷಿ ವಿವಿಯ ಕೃಷಿ ಪುಸ್ತಕ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ, ಚರಕ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳು ದೊರಕಿವೆ. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತಿ ಹೆಗಡೆ ಅವರ ತಂದೆ ದಿ. ಗಜಾನನ ಶಾಸ್ತ್ರಿ ಐನಕೈ, ತಾಯಿ ಮೀನಾಕ್ಷಿ ಶಾಸ್ತ್ರಿ. ಪತಿ ವಿಶ್ವನಾಥ ಹೆಗಡೆ ಶೇಡಿದಂಟ್ಕಲ್.ಶ್ರೀವತ್ಸ ಶಾಂಡಿಲ್ಯಗೆ ಸುವರ್ಣ ಮಹೋತ್ಸವ ಪ್ರಶಸ್ತಿ
ಕಾರವಾರ: ಅಂಕೋಲಾದ ಮೂಲದ ಬೆಂಗಳೂರಿನಲ್ಲಿ ಪ್ರಸಿದ್ಧ ಫೋಟೋಗ್ರಾಫರ್ ಆಗಿರುವ ಶ್ರೀವತ್ಸ ಶಾಂಡಿಲ್ಯ ಅವರಿಗೆ ಕರ್ನಾಟಕ ಸಂಭ್ರಮ 50, ಸುವರ್ಣ ಮಹೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಚಲನಚಿತ್ರ, ಮ್ಯಾಗಜಿನ್ ಗಳ ಪ್ರಸಿದ್ಧ ಫೋಟೋಗ್ರಾಫರ್ ಆಗಿರುವ ಇವರು ಫಿಲ್ಮಸ್ಟಾರ್ಸ್‌ಗಳ ಫೋಟೋಗಳನ್ನು ಅತ್ಯುತ್ತಮವಾಗಿ ಸೆರೆಹಿಡಿಯುವ ಖ್ಯಾತಿ ಹೊಂದಿದ್ದಾರೆ. ಶಾಸ್ತ್ರೀಯ ಸಂಗೀತ, ನೃತ್ಯವನ್ನು ದೇಶಾದ್ಯಂತ ಪ್ರದರ್ಶಿಸುತ್ತಿದ್ದಾರೆ. ವಿಶ್ವದ ಮೊದಲ ಮಂಗಳಮುಖಿಯರ ಕಲಾ ಉತ್ಸವ, ವಿಶ್ವದ ಮೊದಲ ಮಹಿಳಾ ಹರಿಕಥಾ ಉತ್ಸವಗಳನ್ನು ಸಂಘಟಿಸಿದ ಹೆಮ್ಮೆ ಇವರದ್ದು.ಅಂಕೋಲಾದ ಶಿರಕುಳಿ ಇವರ ಮೂಲ ಊರು. ಇವರ ತಾತ ಗುರುಮಠದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪ್ರತಿವರ್ಷ ಒಮ್ಮೆಯಾದರೂ ಅಂಕೋಲಾಕ್ಕೆ ಬರುತ್ತಾರೆ. ಉತ್ತರ ಕನ್ನಡದ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದಾರೆ.