ಶಿಕ್ಷಣ ಪಡೆದು ನಮ್ಮ ಹಕ್ಕುಗಳಿಗಾಗಿ ಹೋರಾಡುವುದು ಇಂದು ಅನಿವಾರ್ಯ. ಎಲ್ಲ ದಲಿತ ಜನಾಂಗದವರು ಒಂದಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು.
ಕನ್ನಡಪ್ರಭ ವಾರ್ತೆ ಯಮಕನಮರಡಿ
ಹಲವಾರು ವರ್ಷಗಳಿಂದ ಮೇಲ್ವರ್ಗದವರು ದಲಿತರನ್ನು ಶೋಷಿಸಿ ಸಮಾಜದಿಂದ ದೂರ ತಳ್ಳುತ್ತಾ ಬಂದಿರುವ ಸಂಗತಿ ಇತಿಹಾಸವು ಹೇಳುತ್ತದೆ. ಭೀಮಾ ಕೋರೆಗಾಂವ ಯುದ್ದವು ಸ್ವಾಭಿಮಾನಕ್ಕಾಗಿ ನಡೆದ ಯುದ್ದ. ಈ ಯುದ್ದದಲ್ಲಿ ಮಡಿದ ಹುತಾತ್ಮರನ್ನು ಸ್ಮರಣೆ ಮಾಡಿ ಗೌರವಿಸುವುದು ನಮ್ಮ ಕರ್ತವ್ಯ ಎಂದು ಬೆಳಗಾವಿ ಜಿಲ್ಲಾ ಎಸ್ಸಿ.ಎಸ್ಟಿ. ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಕರೆಪ್ಪಾ ಗುಡೆನ್ನವರ ಹೇಳಿದರು.ಅವರು ಬುಧವಾರ ಹಿಡಕಲ್ ಡ್ಯಾಮಿನ ರಾಷ್ಟ್ರೀಯ ದಲಿತ ಸೇನಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಭೀಮಾಕೊರೆಗಾಂವ ವಿಜಯೋತ್ಸವ ಮತ್ತು ಸಾವಿತ್ರಿಬಾಯಿಪುಲೆ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಪಡೆದು ನಮ್ಮ ಹಕ್ಕುಗಳಿಗಾಗಿ ಹೋರಾಡುವುದು ಇಂದು ಅನಿವಾರ್ಯ. ಎಲ್ಲ ದಲಿತ ಜನಾಂಗದವರು ಒಂದಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.ಮಾನವ ಬಂದುತ್ವ ವೇದಿಕೆಯ ಸಂಚಾಲಯಕ ವಿಠ್ಠಲ ಮಾದರ ಮಾತನಾಡಿ, ದೇವರುಗಳ, ಜಾತ್ರೆಗಳ ಹೆಸರಿನಲ್ಲಿ ದುಂದು ವೆಚ್ಚಗಳನ್ನು ಮಾಡದೇ ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸಬೇಕು. ಸಾವಿತ್ರಿ ಭಾಯಿಪುಲೆಯವರ ಜಯಂತಿಯಂದು ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖಾಂತರ ಸಾವಿತ್ರಿಭಾಯಿ ಪುಲೆಯವರ ಆದರ್ಶಮಯ ಜೀವನ ಅವರು ಶಿಕ್ಷಣಕ್ಕಾಗಿ ಶ್ರಮಿಸಿದ ಸೇವೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.ಈ ವೇಳೆಯಲ್ಲಿ ಅಬಕಾರಿ ಇಲಾಖೆ ನಿವೃತ್ತ ಪಿಎಸ್‌ಐ ಸಿದ್ದಪ್ಪಾ ಹೊಸಮನಿ, ರಾಷ್ಟ್ರೀಯ ದಲಿತ ಸೇನಾ ಹುಕ್ಕೇರಿ ತಾಲೂಕಾಧ್ಯಕ್ಷ ಬಂಡೆಪ್ಪಾ ಮಾದರ, ಉಪಾಧ್ಯಕ್ಷ ಶ್ರೀಕಾಂತ ಹರಿಜನ, ಬಾಳಪ್ಪ ಹಾರನಕೊಳ್ಳ, ಯಲ್ಲಪ್ಪ ಕಡೆನ್ನವರ, ಬಸವರಾಜ ಕರಗುಪ್ಪಿ, ಪ್ರದೀಪ ಮಾಂಗ, ಪ್ರಶಾಂತ ಮಾಂಗ, ಮಲ್ಲೇಶ ಹರಿಜನ, ಅಡಿವೆಪ್ಪ ಕರೆನ್ನವರ, ಪ್ರಕಾಶ ಹರಿಜನ, ಸುರೇಶ ಗುಟಗುದ್ದಿ, ಲಗಮಣ್ಣಾ ಸನದಿ, ಬಸವರಾಜ ಹರಿಜನ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.