ಕನ್ನಡಪ್ರಭ ವಾರ್ತೆ ಭದ್ರಾವತಿ
ಅವರು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ನಗರದ ಉಂಬ್ಳೆಬೈಲು ರಸ್ತೆ, ರೋಟರಿ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗದ ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದ ವಸುದೇವ ಭೂಪಾಳಂ ಅವರು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಅಪಾರವಾಗಿದ್ದು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರೊಂದಿಗೆ ಜೈಲಿನಲ್ಲಿದ್ದ ಸಂದರ್ಭದಲ್ಲಿ ಗಾಂಧೀಜಿಯವರಿಗೆ ಕನ್ನಡ ಓದಲು ಮತ್ತು ಬರೆಯಲು ಕಲಿಸಿದ್ದರು.ಜೈಲಿನಲ್ಲಿಯೇ ಕನ್ನಡದಲ್ಲಿ ಸಹಿ ಮಾಡಿದ ಪತ್ರವನ್ನು ಪಡೆದಿರುವುದು ಅವರಿಗೆ ಕನ್ನಡದ ಮೇಲಿನ ಪ್ರೀತಿ, ಅಭಿಮಾನ, ಬದ್ಧತೆ, ಆತ್ಮಸ್ಥೈರ್ಯ ಮತ್ತು ಮನೋಬಲಕ್ಕೆ ಸಾಕ್ಷಿಯಾಗಿದೆ ಎಂದರು.
ವಸುದೇವ ಭೂಪಾಳಂ ದತ್ತಿ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ರತ್ನಯ್ಯ, ವಸುದೇವ ಭೂಪಾಳಂ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗಮನಾರ್ಹವಾದ ಸೇವೆ ಸಲ್ಲಿಸಿರುವ ಬಹುಮುಖ ಪ್ರತಿಭೆಯ ಸಾಹಿತಿಯಾಗಿದ್ದರು. ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ವಾಸ ಅನುಭವಿಸಿದ್ದರು. ಹಲವಾರು ಕೃತಿ ರಚಿಸಿದ್ದು, ಅವುಗಳಲ್ಲಿ ‘ದೇವರು ಸತ್ತ’ ಎಂಬ ಲೇಖನ ಅತ್ಯಂತ ಗಮನಾರ್ಹವಾದುದು ಎಂದರು.
ವಚನ ಗಾಯನ ಸ್ಪರ್ಧೆ: ವಚನ ಗಾಯನ ಸ್ಪರ್ಧೆಯಲ್ಲಿ ಒಟ್ಟು 24 ತಂಡಗಳು ಭಾಗವಹಿಸಿ, ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದವು. ಅತ್ಯುತ್ತಮ ಮೊದಲ ಮೂರು ತಂಡಗಳಿಗೆ ಬಹುಮಾನ ನೀಡಲಾಯಿತು. ಪ್ರಥಮ ಬಹುಮಾನ ಡಾ. ವೀಣಾ ಭಟ್ ಅವರ ನೇತೃತ್ವದ ಹವ್ಯಕ ಮಹಿಳಾ ವೇದಿಕೆ ಮತ್ತು ದ್ವಿತೀಯ ಬಹುಮಾನ ಸುನಂದ ರವರ ನೇತೃತ್ವದ ಶಾಶ್ವತಿ ಮಹಿಳಾ ವೇದಿಕೆ ಹಾಗೂ ತೃತೀಯ ಬಹುಮಾನ ಸದಾಶಿವಪ್ಪರವರ ನೇತೃತ್ವದ ಭದ್ರಾ ಸುಗಮ ಸಂಗೀತ ತಂಡ ಪಡೆದುಕೊಂಡವು.
ತೀರ್ಪುಗಾರರಾಗಿ ಸಂಗೀತ ಶಿಕ್ಷಕಿ ಪುಷ್ಪಾ ಹಾಗೂ ಶ್ರೀನಿವಾಸ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದ ಆರಂಭದಲ್ಲಿ ರೇವಣಪ್ಪ, ದಿವಾಕರ, ಹರೀಶ, ಜಂಬೂಸ್ವಾಮಿ, ಲಕ್ಷ್ಮೀದೇವಿ ಜಂಬೂಸ್ವಾಮಿ, ಲಲಿತಾಂಬ ಹಾಗೂ ಸುಚಿತ್ರ ಅವರನ್ನೊಳಗೊಂಡ ತಂಡದಿಂದ ನಾಡಗೀತೆ ಹಾಡಲಾಯಿತು. ಪರಿಷತ್ ಸಂಘಟನಾ ಕಾರ್ಯದರ್ಶಿ ಬಿ. ಕಮಲಾಕರ ಸ್ವಾಗತಿಸಿ, ಡಿ. ನಾಗೋಜಿರಾವ್ ನಿರೂಪಿಸಿದರು. ತಾಲೂಕು ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಮೋಹನ್ ಕುಮಾರ್ ವಂದಿಸಿದರು.