ಕನ್ನಡಪ್ರಭ ವಾರ್ತೆ ಅಫಜಲಪುರ
ಅವರು ಶ್ರೀಗುರು ಮಳೇಂದ್ರ ಶಿವಾಚಾರ್ಯರ ಸಂಸ್ಥಾನ ಹಿರೇಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಉಡಿತುಂಬುವ ಕಾರ್ಯಕ್ರಮ ಹಾಗೂ ಸಾಧಕರಿಗೆ ‘ಮಳೇಂದ್ರ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಮಠಕ್ಕೆ ಪಟ್ಟಾಧಿಕಾರಿಯಾಗಿ 25 ವರ್ಷ ಪೂರ್ಣಗೊಳ್ಳುತ್ತಿದೆ. ಅವರು ತಮ್ಮ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಬಡ ಮಕ್ಕಳಿಗೆ ಶಿಕ್ಷಣ, ಕಲ್ಯಾಣ ಮಂಟಪ ನಿರ್ಮಾಣ, ನಿರಂತರ ಅನ್ನದಾಸೋಹ ಮೂಲಕ ಭಕ್ತಾದಿಗಳನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ’ ಎಂದರು.
ಸಿಂದಗಿ ಶಾಸಕ ಅಶೋಕ ಮನಗೂಳಿ ಮಾತನಾಡಿ, ‘ಮಠಗಳಿಂದಾಗಿ ಸಮಾಜದಲ್ಲಿ ಶಾಂತಿ ನೆಲೆಸಿದೆ. ಒಳ್ಳೆಯ ಸಂಸ್ಕಾರ, ಶಿಕ್ಷಣ ನೀಡುವ ಮಠಗಳು ನಮ್ಮ ನಿತ್ಯ ಬದುಕಿನ ದಾರಿದೀಪ ಎಂದು ಹೇಳಿದರು.ಮಾಜಿ ಸಚಿವ ಸಿದ್ಧರಾಮ ಮೇತ್ರೆ ಮಾತನಾಡಿ, ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಈ ಭಾಗದಲ್ಲಿ ನಿರಂತರ ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಗಳನ್ನು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ರೇಣುಕಾ ಸಕ್ಕರೆ ಕಾರ್ಖಾನೆಯ ಯುನಿಟ್ ಮುಖ್ಯಸ್ಥ ಜಾಕೀರ್ ಅಹ್ಮದ್ ಶೇಕ್, ವ್ಯವಸ್ಥಾಪಕ ಸಂಜುಕುಮಾರ ಬಲಿಯಾನ್, ಕೆನರಾ ಬ್ಯಾಂಕ್‌ನ ಶ್ರೀಕಾಂತ ಹಾಗೂ ರಿಜನಲ್ ಮುಖ್ಯಸ್ಥ ಎಂ. ಮಹೇಶ್ವರಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ಮುಕ್ಬುಲ ಪಟೇಲ, ಶಾಂತಾಬಾಯಿ ಸಿದ್ದಯ್ಯ ಹಿರೇಮಠ, ಶೈಲಾ ಸಂಗ್ರಾಮಗೌಡ ಪಾಟೀಲ, ಜ್ಯೋತಿ ಅರುಣಕುಮಾರ ಪಾಟೀಲ, ವಿಜಯಲಕ್ಷ್ಮಿ ಭೀಮಾಶಂಕರ ತೆಗ್ಗಳ್ಳಿ, ವಿಜಯಲಕ್ಷ್ಮಿ ಖಾಸಗಿ, ಚಂದ್ರಶೇಖರ ಕರಜಗಿ, ಪ್ರಕಾಶ ಜಮಾದಾರ, ಸಿದ್ಧಾರ್ಥ ಬಸರಿಗಿಡದ, ರಮೇಶ ಪೂಜಾರಿ, ಶಿವಾನಂದ ಗಾಡಿ ಸಾಹುಕಾರ ಇದ್ದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿವೃತ್ತ ಪ್ರಾಚಾರ್ಯ ಈರಣ್ಣ ಮುರಿಗೆಪ್ಪ ಗುಣಾರಿ, ಪುರಸಭೆ ಮಾಜಿ ಅಧ್ಯಕ್ಷ ಸಿದ್ದರಾಮ ಗಣಾಚಾರಿ, ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ಮುಕ್ಬುಲ್ ಪಟೇಲ, ತಾಲೂಕು ಕೋಲಿ ಸಮಾಜದ ಮಾಜಿ ಅಧ್ಯಕ್ಷ ಶಂಕರ ಮ್ಯಾಕೇರಿ, ವೈದ್ಯ ಡಾ.ಬಸವರಾಜ ಬಡದಾಳ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ಎಸ್.ಪಾಟೀಲ ಅವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.