ಮಡಲ್‌ ಮೀನು ವೀಕ್ಷಣೆಗೆ ಮುಗಿಬಿದ್ದ ಜನತೆ

KannadaprabhaNewsNetwork |  
Published : Jan 26, 2026, 04:15 AM IST
ಡಾ. ಸಣ್ಣವಂಡ ಕಾವೇರಪ್ಪ                                                           ಭಾರತೀಯ ಕಾಫಿ ಮಂಡಳಿ, ಮಾಜಿ ಉಪಾಧ್ಯಕ್ಷ. ನಾಪೋಕ್ಲು ವ್ಯಾಪ್ತಿಯ ಕಾಫಿತೋಟಳಲ್ಲಿ  ಕಾಫಿ ಹೂಗಳು ಅರಳಿರುವ ಸುಂದರ ನೋಟ..ಮಲ್ಲಿಗೆಯನ್ನು ಕೂಡಿಸಿ ದಂತೆ ಕಾಣುವ ಕಾಫಿ ಹೂಗಳು. | Kannada Prabha

ಸಾರಾಂಶ

ಉಜಿರೆ ಚಾರ್ಮಾಡಿ ರಸ್ತೆಯಲ್ಲಿ ನಾಗೇಶ್ ಕೋಟ್ಯಾನ್ ಮಾಲೀಕತ್ವದ ತಾಜಾ ಮೀನು ಅಂಗಡಿಗೆ ಶನಿವಾರ 550 ಕೆಜಿ ತೂಕದ ಅಪರೂಪದ ಮಡಲ್ ಮೀನು ಬಂದಿದ್ದು ವೀಕ್ಷಣೆಗೆ ಜನ ಮುಗಿಬಿದ್ದರು

ಬೆಳ್ತಂಗಡಿ: ಉಜಿರೆ ಚಾರ್ಮಾಡಿ ರಸ್ತೆಯಲ್ಲಿ ನಾಗೇಶ್ ಕೋಟ್ಯಾನ್ ಮಾಲೀಕತ್ವದ ತಾಜಾ ಮೀನು ಅಂಗಡಿಗೆ ಶನಿವಾರ 550 ಕೆಜಿ ತೂಕದ ಅಪರೂಪದ ಮಡಲ್ ಮೀನು ಬಂದಿದ್ದು ವೀಕ್ಷಣೆಗೆ ಜನ ಮುಗಿಬಿದ್ದರು. ಮಲ್ಪೆ ಶ್ರೀ ವೀರಾಂಜನೇಯ ಬೋಟ್ ನವರಿಗೆ ಶುಕ್ರವಾರ ತಡರಾತ್ರಿ ಮೀನು ದೊರೆತಿತ್ತು. ಬೆಳಿಗ್ಗೆ ಮೀನು ಈ ಅಂಗಡಿಗೆ ಬರುತ್ತಿದೆ ಎಂಬ ಮಾಹಿತಿ ಸಿಕ್ಕಿದ ತಕ್ಷಣ ಜನ ಮುಗಿಬಿದ್ದಿದ್ದರು. ಕಾರ್ಯಕ್ರಮ ನಿಮಿತ್ತ ತೆರಳುತ್ತಿದ್ದ ಮಾಜಿ ಸಚಿವ ಬಿ ರಮಾನಾಥ ರೈ ಕಾರು ನಿಲ್ಲಿಸಿ ಮೀನನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಪ್ರಮುಖದ ಜಯಪ್ರಕಾಶ್ ಶೆಟ್ಡಿ ಉಜಿರೆ, ಪ್ರವೀಣ್ ಹಳ್ಳಿಮನೆ ಪತ್ರಕರ್ತ ದಿನೇಶ್ ಕೋಟ್ಯಾನ್ ಸೇರಿದಂತೆ ನೂರಾರುಮಂದಿ ಮಾಹಿತಿ ಪಡೆದರು. ಒಂದು ಗಂಟೆಯೊಳಗೆ ಮೀನು ಮಾಂಸ ಖಾಲಿಯಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ