ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಧರ್ಮಸ್ಥಳಕ್ಕೆ ಬೈಕ್ ಜಾಥಾ: ಅಂಜನ್ ಕುಮಾರ್

KannadaprabhaNewsNetwork |  
Published : Nov 01, 2026, 02:15 AM IST
೩೧ಶಿರಾ೧: ಶಿರಾ ನಗರದ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಶಿರಾದಿಂದ ಧರ್ಮಸ್ಥಳಕ್ಕೆ ಕನ್ನಡಾಭಿಮಾನದ ಬೈಕ್ ಜಾಥಾ ಪ್ರಾರಂಭವಾಯಿತು. | Kannada Prabha

ಸಾರಾಂಶ

ಶಿರಾ ಯುವಕರು ವಿಭಿನ್ನವಾಗಿ ಪರಿಸರ ಜಾಗೃತಿ ಮೂಡಿಸಲು ಧರ್ಮಸ್ಥಳದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ ಸಂಗತಿಯಾಗಿದ್ದು, ಧರ್ಮಸ್ಥಳಕ್ಕೆ ಹಮ್ಮಿಕೊಂಡಿರುವ ಬೈಕ್ ರ‍್ಯಾಲಿ ಯಶಸ್ವಿಯಾಗಲಿ.

ಶಿರಾ: ಕನ್ನಡ ನಾಡು, ನುಡಿ, ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಸಾರುವ ಉದ್ದೇಶದಿಂದ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ನಗರದ ಯುವಕರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸತತ ಎರಡನೇ ಬಾರಿ ಕನ್ನಡ ರಾಜ್ಯೋತ್ಸವ ಆಚರಿಸಲು ಹೊರಟಿದ್ದೇವೆ ಎಂದು ಆಯೋಜಕರಾದ ಅಂಜನ್ ಕುಮಾರ್ ಹೇಳಿದರು.

ಅವರು ನಗರದ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಶಿರಾದಿಂದ ಧರ್ಮಸ್ಥಳಕ್ಕೆ ಕನ್ನಡಾಭಿಮಾನದ ಬೈಕ್ ಜಾಥಾ ಪ್ರಾರಂಭ ಮಾಡಿ ಮಾತನಾಡಿದರು. ಧರ್ಮಸ್ಥಳದಲ್ಲಿ ಸತತ ಎರಡನೇ ಬಾರಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಶಿರಾ ಯುವಕರು ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿದ್ದು, ಸಂತಸ ತಂದಿದೆ. ಈ ಬಾರಿ ಬೈಕ್ ರ‍್ಯಾಲಿ ಸಂದರ್ಭದಲ್ಲಿ ರಸ್ತೆಯ ಉದ್ದಕ್ಕೂ ಸುಮಾರು ೨೦ ಸಾವಿರ ಸೀಡ್‌ಬಾಲ್‌ಗಳನ್ನು ಹಾಕಲಾಗುವುದು ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುಗುವುದು ಎಂದು ತಿಳಿಸಿದರು.

ಜೀನಿ ಸಂಸ್ಥೆ ಮಾಲೀಕ ದಿಲೀಪ್‌ಕುಮಾರ್ ಮಾತನಾಡಿ, ಶಿರಾ ಯುವಕರು ವಿಭಿನ್ನವಾಗಿ ಪರಿಸರ ಜಾಗೃತಿ ಮೂಡಿಸಲು ಧರ್ಮಸ್ಥಳದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ ಸಂಗತಿಯಾಗಿದ್ದು, ಧರ್ಮಸ್ಥಳಕ್ಕೆ ಹಮ್ಮಿಕೊಂಡಿರುವ ಬೈಕ್ ರ‍್ಯಾಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಬೈಕ್ ರ‍್ಯಾಲಿಗೆ ಹೊರಟಿದ್ದವರಿಗೆ ನಗರದ ಗಣೇಶ್ ಮೋಟರ್ಸ್‌ನ ತೇಜು ಅವರು ಸುಮಾರು ೭೦ ಯುವಕರಿಗೆ ಹೆಲ್ಮೆಟ್ ವಿತರಿಸಿದರು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಅಂಜಿನಪ್ಪ, ಸದಸ್ಯರಾದ ಸಂತೇಪೇಟೆ ನಟರಾಜ್, ಮುಖಂಡರಾದ ಬಾಂಬೆ ರಾಜಣ್ಣ, ಲಿಂಗದಹಳ್ಳಿ ಸುಧಾಕರ್ ಗೌಡ, ವಿಜಯರಾಜ್, ನರೇಶ್ ಗೌಡ, ಮಂಜೇಶ್, ರಂಗನಾಥ್, ನಾಗೇಶ್, ಹೇಮಂತ್ ಗೌಡ, ಪ್ರವೀಣ್ ನಾಯ್ಕ ಸೇರಿ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಗೆ ರಾತ್ರಿ 8-10ರ ವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ
ವೈದ್ಯರ ನಿರ್ಲಕ್ಷ್ಯದಿಂದ 1 ವರ್ಷದ ಮಗು 3 ತಿಂಗಳಿಂದ ಕೋಮಾದಲ್ಲಿ: ಆರೋಪ