ನೂರಾರು ಶಾಲೆಗಳು, ಕೆರೆ-ಕಟ್ಟೆಗಳ ಜೀರ್ಣೋದ್ಧಾರಕ್ಕೆ ಶ್ರಮಿಸಿದ್ದ ಬಿಳಿಗೌಡರು: ಶಿವಾನಂದಮೂರ್ತಿ

KannadaprabhaNewsNetwork |  
Published : Nov 10, 2026, 12:45 AM IST
9ಕೆಎಂಎನ್ ಡಿ15 | Kannada Prabha

ಸಾರಾಂಶ

ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಬಿಳಿಗೌಡರು ಮಹಾತ್ಮ ಗಾಂಧೀಜಿ ಅನುಯಾಯಿಯಾಗಿ ಸರ್ವೋದಯ ತತ್ವವನ್ನು ಅಳವಡಿಸಿಕೊಂಡು ಅದರ ನೆನಪಿಗಾಗಿ ಸರ್ವೋದಯ ಪ್ರೌಢಶಾಲೆಯನ್ನು ಆರಂಭಿಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪ್ರೌಢ ಶಿಕ್ಷಣ ಕೊಡುವಲ್ಲಿ ಸಹಕಾರಿಯಾಗಿದ್ದರು.

ಕನ್ನಡಪ್ರಭ ವಾರ್ತೆ ಮದ್ದೂರು

ಮಾಜಿ ಶಾಸಕ ಎ.ಡಿ.ಬಿಳಿಗೌಡರು ತಮ್ಮ ಅಧಿಕಾರದ ಅವಧಿಯಲ್ಲಿ ನೂರಾರು ಶಾಲೆಗಳು, ಕೆರೆ ಕಟ್ಟೆಗಳ ಜೀರ್ಣೋದ್ಧಾರಕ್ಕೆ ಶ್ರಮಿಸಿದ್ದರು ಎಂದು ನಿಕಟಪೂರ್ವ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವನಂದಮೂರ್ತಿ ಶ್ಲಾಘಿಸಿದರು.

ತಾಲೂಕಿನ ಕೊಪ್ಪದ ಸರ್ವೋದಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಎ.ಡಿ.ಬಿಳಿಗೌಡರ 22ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಬಿಳಿಗೌಡರು ಮಹಾತ್ಮ ಗಾಂಧೀಜಿ ಅನುಯಾಯಿಯಾಗಿ ಸರ್ವೋದಯ ತತ್ವವನ್ನು ಅಳವಡಿಸಿಕೊಂಡು ಅದರ ನೆನಪಿಗಾಗಿ ಸರ್ವೋದಯ ಪ್ರೌಢಶಾಲೆಯನ್ನು ಆರಂಭಿಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪ್ರೌಢ ಶಿಕ್ಷಣ ಕೊಡುವಲ್ಲಿ ಸಹಕಾರಿಯಾಗಿದ್ದರು ಎಂದು ಸ್ಮರಿಸಿದರು.

ಶಾಸಕರಾಗಿ ನೂರಾರು ಶಾಲೆಗಳು, ಕೆರೆಕಟ್ಟೆಗಳ ಜೀರ್ಣೋದ್ಧಾರಕ್ಕೆ ವಿಶೇಷವಾಗಿ ಬೋಳಾರೆ ಕೆರೆಯ ನವೀಕರಣ ಮಾಡಿದ ಕೀರ್ತಿ ಎ.ಡಿ.ಬಿಳಿಗೌಡರಿಗೆ ಸಲ್ಲುತ್ತದೆ. ಅಲ್ಲದೇ, ಜಿಲ್ಲೆಯ ರೈತರ ಜೀವನಾಡಿ ಮೈಷುಗರ್ ಕಂಪನಿ ಅಧ್ಯಕ್ಷರಾಗಿ ನೂರಾರು ನೌಕರರಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದರು ಎಂದರು.

ತಾವು ಕಟ್ಟಿದ ಸರ್ವೋದಯ ಸಂಸ್ಥೆಯಲ್ಲಿ ವಿದ್ಯೆ ಪಡೆದ ಸಾವಿರಾರು ವಿದ್ಯಾರ್ಥಿಗಳು ನೂರಾರು ಉದ್ಯೋಗ ಆಕಾಂಕ್ಷಿಗಳು ಬದುಕು ನಡೆಸಿ ಗೌಡರ ಸ್ಮರಣೆಯಲ್ಲಿ ಜೀವನ ನಡೆಸಿದ್ದಾರೆ. ಇಂತಹ ಸಾಧಕರ ಸ್ಮರಣೆ ಸದಾಕಾಲ ಇಂದಿನ ಯುವ ಜನತೆಗೆ ಆದರ್ಶ ಪ್ರಾಯವಾಗಿದ್ದಾರೆ ಎಂದರು.

ಸಮಾರಂಭದಲ್ಲಿ ಸಂಸ್ಥೆ ಅಧ್ಯಕ್ಷ ಬಿ.ವಿವೇಕಾನಂದ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಡಿ.ಪಿ.ಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ ತಗ್ಗಳ್ಳಿ ಬಿಳಿಗೌಡ, ನಿವೃತ್ತ ಮುಖ್ಯ ಶಿಕ್ಷಕ ಅರಗಿನಬೆಳೆ ರಾಮಕೃಷ್ಣಯ್ಯ, ಪ್ರಾಂಶುಪಾಲ ಹನುಮಂತರಾಯಪ್ಪ, ಮುಖ್ಯ ಶಿಕ್ಷಕ ಮಹಾಂತೇಶ್ ಇತರರು ಇದ್ದರು. ಕಾರ್ಯಕ್ರಮಕ್ಕೆ ಮೊದಲು ಉರುಗಲವಾಡಿ ರಾಮಯ್ಯ ಅವರ ತಂಡ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ