ಬಿಜೆಪಿ-ಬಿಆರ್‌ಎಸ್ ಭಯ<bha>;</bha> ತೆಲಂಗಾಣಕ್ಕೆ ಕಾಂಗ್ರೆಸ್ ಶಾಸಕರು

KannadaprabhaNewsNetwork |  
Published : Dec 03, 2023, 01:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಳ್ಳಾರಿತೆಲಂಗಾಣದಲ್ಲಿ ಬಿಜೆಪಿ ಹಾಗೂ ಬಿಆರ್‌ಎಸ್ ಪಕ್ಷದಿಂದ ಕಾಂಗ್ರೆಸ್ಸಿಗೆ ಭಯವಿದ್ದು, ಶನಿವಾರ ಸಂಜೆಯೊಳಗೆ ಚುನಾವಣೆಯಲ್ಲಿ ಭಾಗಿಯಾದ ಎಲ್ಲ ಶಾಸಕರು ತೆಲಂಗಾಣಕ್ಕೆ ತೆರಳಲು ಎಐಸಿಸಿ ಸೂಚನೆ ನೀಡಿದೆ ಎಂದು ಜಿಲ್ಲಾ ಸಚಿವ ಬಿ. ನಾಗೇಂದ್ರ ಹೇಳಿದರು.ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸುವುದು ಖಚಿತ. ಆದರೆ, ಬಿಜೆಪಿಯವರು ದೇಶದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಬಿಆರ್ ಎಸ್ ಹಾಗೂ ಬಿಜೆಪಿಯವರು ಸೇರಿ ಏನಾದರೂ ಮಾಡುತ್ತಾರೆ (ಆಪರೇಷನ್ ಕಮಲ) ಎಂಬ ಭಯವಿದೆ. ನಮ್ಮ ಶಾಸಕರಿಗೆ ಬೆದರಿಕೆ ಹಾಕುವ ಸಾಧ್ಯತೆಯೂ ಇದೆ. ಹೀಗಾಗಿ ನಮ್ಮ ಶಾಸಕರ ರಕ್ಷಣೆಗಾಗಿ ತೆಲಂಗಾಣಕ್ಕೆ ತೆರಳುತ್ತಿದ್ದೇವೆ ಎಂದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ತೆಲಂಗಾಣದಲ್ಲಿ ಬಿಜೆಪಿ ಹಾಗೂ ಬಿಆರ್‌ಎಸ್ ಪಕ್ಷದಿಂದ ಕಾಂಗ್ರೆಸ್ಸಿಗೆ ಭಯವಿದ್ದು, ಶನಿವಾರ ಸಂಜೆಯೊಳಗೆ ಚುನಾವಣೆಯಲ್ಲಿ ಭಾಗಿಯಾದ ಎಲ್ಲ ಶಾಸಕರು ತೆಲಂಗಾಣಕ್ಕೆ ತೆರಳಲು ಎಐಸಿಸಿ ಸೂಚನೆ ನೀಡಿದೆ ಎಂದು ಜಿಲ್ಲಾ ಸಚಿವ ಬಿ. ನಾಗೇಂದ್ರ ಹೇಳಿದರು.

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸುವುದು ಖಚಿತ. ಆದರೆ, ಬಿಜೆಪಿಯವರು ದೇಶದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಬಿಆರ್ ಎಸ್ ಹಾಗೂ ಬಿಜೆಪಿಯವರು ಸೇರಿ ಏನಾದರೂ ಮಾಡುತ್ತಾರೆ (ಆಪರೇಷನ್ ಕಮಲ) ಎಂಬ ಭಯವಿದೆ. ನಮ್ಮ ಶಾಸಕರಿಗೆ ಬೆದರಿಕೆ ಹಾಕುವ ಸಾಧ್ಯತೆಯೂ ಇದೆ. ಹೀಗಾಗಿ ನಮ್ಮ ಶಾಸಕರ ರಕ್ಷಣೆಗಾಗಿ ತೆಲಂಗಾಣಕ್ಕೆ ತೆರಳುತ್ತಿದ್ದೇವೆ ಎಂದರು.

ಚುನಾವಣೆ ಫಲಿತಾಂಶ ಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ಪರ ಬಂದಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿಯವರು ಏನಾದರೂ ಮಾಡುತ್ತಾರೆ ಎಂಬ ಸಂಶಯ ನಮ್ಮದು. ಈಗಾಗಲೇ ಅವರು ಕರ್ನಾಟಕ ಸೇರಿದಂತೆ ಕೆಲವು ಕಡೆ ತಂತ್ರಗಾರಿಕೆ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಇದಕ್ಕೆ ನಮ್ಮ ರಾಜ್ಯವೇ ಉದಾಹರಣೆ. ನಮ್ಮ ಶಾಸಕರನ್ನು ಕರೆದುಕೊಂಡು ಅಧಿಕಾರ ಮಾಡಿದರು. ತೆಲಂಗಾಣದಲ್ಲೂ ಈ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹೀಗಾಗಿಯೇ ಎಐಸಿಸಿ ತೆಲಂಗಾಣಕ್ಕೆ ತೆರಳುವಂತೆ ಸೂಚನೆ ನೀಡಿದೆ ಎಂದು ತಿಳಿಸಿದ ಸಚಿವ ನಾಗೇಂದ್ರ, ತೆಲಂಗಾಣದಲ್ಲಿ ನಾವು ಆಪರೇಷನ್ ಮಾಡಲ್ಲ. ನಮ್ಮ ತತ್ವ ಸಿದ್ಧಾಂತ ನಂಬಿ ಬಂದವರನ್ನು ಸ್ವಾಗತಿಸುತ್ತೇವೆ ಹೊರತು, ಬಿಜೆಪಿಯವರಂತೆ ಆಪರೇಷನ್ ಗೆ ಕೈ ಹಾಕಲ್ಲ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ಸಲ್ಲಿ ಸಚಿವ ಸ್ಥಾನಕ್ಕಾಗಿ ಹೆಚ್ಚಿದ ಕೂಗು!
ಬಂಧನವಿಲ್ಲದೆ ರಕ್ತದ ಮಾದರಿ ಸಂಗ್ರಹ ಕಾನೂನು ಬಾಹಿರ