ಕನ್ನಡಪ್ರಭ ವಾರ್ತೆ ತಾಳಿಕೋಟೆಈ ಜಿಲ್ಲೆಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿ ಕೊಡುಗೆ ಶೂನ್ಯವಾಗಿದ್ದು, ಬಡವರ ಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಮತದಾರರು ಬೆಂಬಲಿಸಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಮನವಿ ಮಾಡಿದರು.
ಸ್ವಾಮೀಜಿಗಳಿಗೆ ಗೌರವ ಕೊಡದ, ಬಡವರ ಹಸಿವನ್ನು ಅಣಕಿಸುವ ಬುದ್ಧಿ ಈ ದೇಶದ ಪ್ರಧಾನಿಯದ್ದಾಗಿದೆ. ಬಿಜೆಪಿ ಸರ್ಕಾರದಲ್ಲಿರುವ ನಾಯಕರು ಹೇಳುತ್ತಿರುವುದೆಲ್ಲ ಬರೀ ಸುಳ್ಳಿನ ಕಂತೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಮಾತನಾಡಿ, ಬಡವರ ಪರವಾದ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಕೊಟ್ಟಿದೆ. ಕೋಮುವಾದಿ ಬಿಜೆಪಿಯನ್ನು ತಿರಸ್ಕರಿಸಿ ಜಿಲ್ಲೆಯಲ್ಲಿ ಪ್ರಜ್ಞಾವಂತ ವ್ಯಕ್ತಿಯಾಗಿರುವ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರನ್ನು ಆಯ್ಕೆ ಮಾಡಲು ಮತದಾರರು ತಮ್ಮ ಆಶೀರ್ವಾದ ಮಾಡಬೇಕು ಎಂದು ಕೋರಿದರು.ನಿವೃತ್ತ ಡಿವೈಎಸ್‌ಪಿ ಎಸ್.ಎಸ್.ಹುಲ್ಲೂರ, ಕಾಂಗ್ರೆಸ್ ಮುಖಂಡ ವೈ.ಎಚ್.ವಿಜಯಕರ್ ಮಾತನಾಡಿದರು.ಕಾಂಗ್ರೆಸ್ ಮುಖಂಡರಾದ ಕಾಶೀಮ ಪಟೇಲ್, ಗುತ್ತಿಗೆದಾರ ಎಚ್.ಎಂ.ನಾಯಕ, ಗಣ್ಯರಾದ ಬಸನಗೌಡ ಮೇಟಿ, ರಾಜು ರಾಯಗೊಂಡ, ನೀಲಮ್ಮ ಪಾಟೀಲ, ವೀರೇಶ ಬಾಗೇವಾಡಿ, ಮಹೆಬೂಬ ಚೋರಗಸ್ತಿ, ಇಬ್ರಾಹಿಂ ಮನ್ಸೂರ, ಬಸನಗೌಡ ಬಗಲಿ, ವಿವೇಕಾನಂದ ದ್ಯಾಪೂರ, ಸೋಮನಗೌಡ ಹಡಲಗೇರಿ, ಜಿ.ಜಿ.ಅಸ್ಕಿ, ಗುರಣ್ಣ ಹತ್ತೂರ, ಸಂಜೀವಪ್ಪ ನಾಯ್ಕೋಡಿ, ಬಂದುಸಾಬ ಕಡಕೋಳ, ರೇಣುಕಾ ಮಾದರ, ತಿಪ್ಪಣ್ಣ ದೊಡಮನಿ, ಬಸಪ್ಪ ಸಿರಕನಳ್ಳಿ, ತಿಪ್ಪಣ್ಣ ಬಡಿಗೇರ, ಮಹೆಬೂಬ ಸಾಲಿ, ರಹೀಂಸಾಬ ಅವಟಿ, ಮಹೆಬೂಬ್ ಗೊಳಸಂಗಿ, ಯಲ್ಲಪ್ಪ ಮಾದರ, ದ್ಯಾಮಣ್ಣ ಸೋಮನಾಳ, ಮಹ್ಮದರಫೀಕ ಶಿರೋಳ, ಜೈಭೀಮ್ ಮುತ್ತಗಿ, ವೀರೇಶಗೌಡ ಅಸ್ಕಿ, ಶಿವನಗೌಡ ತಾಳಿಕೋಟಿ, ಕುಮಾರ ಐನಾಪೂರ, ಪ್ರಶಾಂತ ಜಲಪೂರ, ರಮೇಶ ಕೊಟಗಿ, ಅಶೋಕ(ಎಲ್‌ಐಸಿ), ಅಶೋಕ ಕೇಂಭಾವಿ, ಮಹ್ಮದ ವಾಲಿಕಾರ, ಬುಡ್ಡೇಸಾಬ ಟಕ್ಕಳಕಿ, ಶ್ರೀಕಾಂತ ಚಲವಾದಿ ಮೊದಲಾದವರು ಪಾಲ್ಗೊಂಡಿದ್ದರು.
---ಕೋಟ್
ಇಂಡಿಯಾ ಒಕ್ಕೂಟದಲ್ಲಿ ನಾಯಕರಿಗೆ ಬರವಿಲ್ಲ. ಕಾಂಗ್ರೆಸ್‌ನ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಸ್ಟಾಲಿನ್, ಮಮತಾ ಬ್ಯಾನರ್ಜಿ ಸೇರಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಧಾನಿ ಆಗುವ ಅರ್ಹತೆ ಹೊಂದಿದ್ದಾರೆ. ಬಿಜೆಪಿ ಹೇಳುವ ಸುಳ್ಳುಗಳಿಗೆ ಕಿವಿಗೊಡಬೇಡಿ.- ಸಿ.ಎಸ್.ನಾಡಗೌಡ ಅಪ್ಪಾಜಿ, ಶಾಸಕರು
----------