ಮುಂಡಗೋಡ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭಿವೃದ್ಧಿ ಮತ್ತು ಗ್ಯಾರಂಟಿ ಕಾರ್ಡ್ ಸಾಧನೆ ಮೇಲೆ ಮತಯಾಚಿಸಿದರೆ, ಬಿಜೆಪಿ ಧರ್ಮ ಮತ್ತು ದೇವರನ್ನು ಚುನಾವಣಾ ಸಾಮಗ್ರಿಯಾಗಿ ಉಪಯೋಗಿಸುತ್ತಿರುವುದು ವಿಷಾದಕರ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ ಆರೋಪಿಸಿದರು.
ಕ್ಷೇತ್ರಾದ್ಯಂತ ಕಾಂಗ್ರೆಸ್ ಪರ ಉತ್ತಮ ವಾತಾವರಣ ಇದೆ ಎಂದ ಅವರು, ಬಿಜೆಪಿ ಕೇವಲ ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ಮತವನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿರುವುದು ಖಂಡನಾರ್ಹ. ಈ ಬಾರಿ ಬಿಜೆಪಿ ಇದರಲ್ಲಿ ಯಶಸ್ಸಾಗದು ಎಂದರು.ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆ ಸಭೆ
ಯಲ್ಲಾಪುರ: ಪಟ್ಟಣದ ಚರ್ಚ್ ರಸ್ತೆಯಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆಯ ಸಭೆಯನ್ನು ಏ. ೨೭ರಂದು ಹಮ್ಮಿಕೊಳ್ಳಲಾಗಿತ್ತು. ಗ್ಯಾರಂಟಿ ಸಮಿತಿಯ ತಾಲೂಕಾಧ್ಯಕ್ಷ ಉಲ್ಲಾಸ ಶಾನಭಾಗ, ಸಮಿತಿ ಜಿಲ್ಲಾ ಉಪಾಧ್ಯಕ್ಷ ಡಿ.ಎನ್. ಗಾಂವ್ಕರ, ಸದಸ್ಯರಾದ ನುಶ್ರತ್ ಶೇಕ್, ಬಿಸಿಸಿ ಕಾರ್ಯದರ್ಶಿ ಅನಿಲ ಮರಾಠೆ, ಜಿಲ್ಲಾ ಮಹಿಳಾ ಸಂಘಟನಾ ಕಾರ್ಯದರ್ಶಿ ಸರಸ್ವತಿ ಗುನಗಾ, ಮಹಿಳಾ ಮೋರ್ಚಾ ತಾಲೂಕಾಧ್ಯಕ್ಷೆ ಪೂಜಾ ನೇತ್ರೇಕರ, ಬೂತ್ ಅಧ್ಯಕ್ಷ ಜಾನಿ ಅಲ್ಫಾಂಸೋ, ಪಪಂ ಮಾಜಿ ಅಧ್ಯಕ್ಷ ಎಂ.ಜಿ. ಮುಲ್ಲಾ, ಸಿದ್ದು ಉಣಕಲ್, ಅಕ್ಷಯ ರೇವಣಕರ, ಬಾಬಾ ಶೇಕ್, ಶಕೀರ್ ಶೇಕ್ ಮತ್ತಿತರರು ಉಪಸ್ಥಿತರಿದ್ದರು.