ಕನ್ನಡಪ್ರಭ ವಾರ್ತೆ ವಿಜಯಪುರ
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಪಶ್ಚಿಮ ಬಂಗಾಳ, ಪುದಚೇರಿ, ಆಸ್ಸಾಂನಲ್ಲಿ ಭರ್ಜರಿ ಗೆಲುವನ್ನು ಬಿಜೆಪಿ ದಾಖಲಿಸಿದೆ. ಜನತೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಪಾರ ಒಲವು ಹೊಂದಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಮಮತಾ ಬ್ಯಾನರ್ಜಿ ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಪೋಷಿಸಿದರು. ಆದರೆ, ಅಲ್ಲಿನ ಮತದಾರರು ತಕ್ಕಪಾಠ ಕಲಿಸಿದ್ದಾರೆ, ದರ್ಪದಿಂದ ಮೆರೆಯುತ್ತಿದ್ದ ಮಮತಾ ಬ್ಯಾನರ್ಜಿ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ ಎಂದರು.
ಮುಖಂಡರಾದ ವಿಜುಗೌಡ ಪಾಟೀಲ, ಡಾ.ಸುರೇಶ ಬಿರಾದಾರ, ಮಳುಗೌಡ ಪಾಟೀಲ, ಉಮೇಶ ಕೊಳಕೂರ, ಭೀಮಾಶಂಕರ ಹದನೂರ, ರಾಜು ಮಗಿಮಠ, ರಾಜು ಬಿರಾದಾರ, ಮಹಿಳಾ ಜಿಲ್ಲಾಧ್ಯಕ್ಷೆ ಸ್ವಪ್ನಾ ಕಣಮುಚನಾಳ, ಈರಣ್ಣ ರಾವೂರ, ಶಿಲ್ಪಾ ಕುದುರಗೊಂಡ, ಸಂದೀಪ ಪಾಟೀಲ, ಕೃಷ್ಣಾ ಗುನ್ಹಾಳಕರ, ಭರತ ಕೋಳಿ, ವಿಜಯ ಜೋಶಿ, ಪಾಪುಸಿಂಗ ರಜಪೂತ, ರಾಜೇಶ ತಾವಸೆ ಪಾಲ್ಗೊಂಡಿದ್ದರು.