ಹಿಂದೂಗಳ ಸುರಕ್ಷತೆಗಾಗಿ ಸ್ಥಾಪನೆಗೊಂಡ ಪಕ್ಷ ಬಿಜೆಪಿ : ದೇವರಾಜ್‌

KannadaprabhaNewsNetwork |  
Published : Apr 07, 2025, 12:35 AM IST
ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಾರ್ಯಾಲಯದ ಹೊರ ಭಾಗದಲ್ಲಿ ಭಾನುವಾರ ಪಕ್ಷದ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು | Kannada Prabha

ಸಾರಾಂಶ

ಚಿಕ್ಕಮಗಳೂರು, ಭವ್ಯ ಭಾರತ ವಿಭಜನೆಗೊಂಡ ಬಳಿಕ ನೆರೆ ದೇಶದಲ್ಲಿ ಸಿಲುಕಿಕೊಂಡ ಸಮಗ್ರ ಹಿಂದೂ ಅಣ್ಣ ತಮ್ಮಂದಿರು ಹಾಗೂ ಮಾತೆಯರ ಸುರಕ್ಷತೆಗಾಗಿ ಮೊಟ್ಟ ಮೊದಲು ಸ್ಥಾಪನೆಗೊಂಡ ಪಕ್ಷ ಭಾರತೀಯ ಜನತಾ ಪಾರ್ಟಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ್‌ ಶೆಟ್ಟಿ ಹೇಳಿದರು.

ಚಿಕ್ಕಮಗಳೂರಿನಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಭವ್ಯ ಭಾರತ ವಿಭಜನೆಗೊಂಡ ಬಳಿಕ ನೆರೆ ದೇಶದಲ್ಲಿ ಸಿಲುಕಿಕೊಂಡ ಸಮಗ್ರ ಹಿಂದೂ ಅಣ್ಣ ತಮ್ಮಂದಿರು ಹಾಗೂ ಮಾತೆಯರ ಸುರಕ್ಷತೆಗಾಗಿ ಮೊಟ್ಟ ಮೊದಲು ಸ್ಥಾಪನೆಗೊಂಡ ಪಕ್ಷ ಭಾರತೀಯ ಜನತಾ ಪಾರ್ಟಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ್‌ ಶೆಟ್ಟಿ ಹೇಳಿದರು.ನಗರದ ಪಾಂಚಜನ್ಯ ಕಚೇರಿಯಲ್ಲಿ ನಗರ ಬಿಜೆಪಿ ಮಂಡಲದಿಂದ ಭಾನುವಾರ ಏರ್ಪಡಿಸಿದ್ಧ ಭಾರತೀಯ ಜನತಾ ಪಾರ್ಟಿ 45ನೇ ಸಂಸ್ಥಾಪನ ದಿನದ ಪ್ರಯುಕ್ತ ದ್ವಜಾರೋಹಣ ನೆರವೇರಿಸಿ ಹಾಗೂ ಪಕ್ಷಕ್ಕಾಗಿ ದುಡಿದ ಮಹಾನಾಯಕರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ರಾಷ್ಟ್ರ ಹಿತಕ್ಕಾಗಿ ಶ್ಯಾಮ್ ಪ್ರಕಾಶ್ ಮುಖರ್ಜಿ ಅವರು ನೆಹರು ಮಂತ್ರಿ ಮಂಡಲದ ಸ್ಥಾನ ತ್ಯಜಿಸಿ ಭಾರತಾಂಭೆಯ ಜೀವನ ಸೇವೆಗೆ ಮುಡಿಪಿಟ್ಟರು. ಸ್ವಾತಂತ್ರ್ಯ ಪೂರ್ವದಲ್ಲಿ ಪಶ್ಚಿಮ ಬಂಗಾಳ ರಾಜ್ಯವನ್ನು ಪಾಕಿಸ್ತಾನಕ್ಕೆ ಬಿಡಬೇಕೆಂಬ ನಿರ್ಧಾರ ಕೈ ಗೊಂಡಾಗ, ಸಾರಾ ಸಗಟಾಗಿ ವಿರೋಧಿಸಿ ರಾಷ್ಟ್ರದ ನೆಲವನ್ನು ಭಾರತೀಯರಿಗೆ ಉಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ಹಿಂದೂರಾಷ್ಟ್ರ ಕಲ್ಪನೆಯೊಂದಿಗೆ ಜನಸಂಘ ರಾಷ್ಟ್ರದಲ್ಲಿ ಹೆಮ್ಮರವಾಗಿ ಬೆಳೆಯಿತು. ಅಂದಿನ ಕಾಂಗ್ರೆಸ್ ಸರ್ಕಾರ ಈ ಬೆಳವಣಿಗೆ ಸಹಿಸದೇ ಅನೇಕ ತೊಂದರೆ ನೀಡಿದ್ದನ್ನು ಮನಗಂಡು ಜನಸಂಘ ವಿಸರ್ಜಿಸಿ ಮುಂಚೂಣಿ ನಾಯಕರಾದ ವಾಜಪೇಯಿ, ಅಡ್ವಾಣಿ ಸಾರಥ್ಯದಲ್ಲಿ 1980ರಲ್ಲಿ ಬಿಜೆಪಿ ಪಕ್ಷ ಉಗಮಗೊಂಡು ರಾಷ್ಟ್ರ ರಾಜಕಾರಣಕ್ಕೆ ಸಂಸದರನ್ನು ಕೊಡುಗೆ ನೀಡಿತು ಎಂದು ಹೇಳಿದರು.ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ ಮಾತನಾಡಿ, ರಾಷ್ಟ್ರದ ಅಸ್ಮಿತೆ ಉಳಿವಿಗೆ ವೈಚಾರಿಕತೆಯಡಿ ಭಾರತೀಯ ಜನತಾ ಪಾರ್ಟಿ ಸ್ಥಾಪಿಸಿ ಕಾರ್ಯಕರ್ತರನ್ನು ಸಂಘಟಿಸಿತು. ವ್ಯಕ್ತಿಗಿಂತ ರಾಷ್ಟ್ರ ಮುಖ್ಯ, ದೇಶದ ಹಿತವೇ ಸ್ವಹಿತ ಎಂಬ ತತ್ವವನ್ನು ಸಾರಿದ ಮೊದಲ ಪಕ್ಷ ಬಿಜೆಪಿ ಎಂದರು. ಬಿಜೆಪಿ ಅಧಿಕಾರಕ್ಕೆ ಜೋತು ಬೀಳದೇ ಸ್ವಾತಂತ್ರ್ಯ ಹೋರಾಟಗಾರ ಮೊರಾರ್ಜಿ ದೇಸಾಯಿ ಅವರನ್ನು ದೇಶದ ಪ್ರಧಾನಿ ಯಾಗಿ ಸೂಚಿಸಿತು. ಬಳಿಕ ಪ್ರಧಾನಮಂತ್ರಿ ಹುದ್ದೆಗೂ ವಾಜಪೇಯಿ ಹಾಗೂ ಅಡ್ವಾಣಿ ಆಸೆಪಟ್ಟಿಲ್ಲ. ಈ ಮಹಾನೀಯರ ಸೌಹಾರ್ದತೆ, ಆದರ್ಶ ಇಂದಿನ ರಾಜಕೀಯ ಮುಖಂಡರು ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ಬಿಜೆಪಿ ಆರಂಭದಲ್ಲಿ ಅನೇಕ ಸವಾಲು, ಸಂಕಷ್ಟವನ್ನು ಧೈರ್ಯದಿಂದ ಎದುರಿಸಿದ ಕಾರಣ ಇಂದು ರಾಷ್ಟ್ರದಲ್ಲೇ ಹೆಚ್ಚು ಲೋಕಸಭಾ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರನ್ನು ಒಳಗೊಂಡಿದೆ. ಅಲ್ಲದೇ ಹೆಚ್ಚಿನ ಸದಸ್ಯತ್ವ ನೋಂದಾಯಿಸಿ ಪ್ರಪಂಚದ ದೊಡ್ಡ ಪಕ್ಷವಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಹಿಂದುಳಿದ ವರ್ಗ ಮೋರ್ಚಾದ ರಾಜ್ಯ ಕಾರ್ಯ ದರ್ಶಿ ಬಿ.ರಾಜಪ್ಪ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್, ಮಾಜಿ ಅಧ್ಯಕ್ಷೆ ಕವಿತಾ ಶೇಖರ್, ಉಪಾಧ್ಯಕ್ಷೆ ಅನು ಮಧುಕರ್, ನಗರಸಭೆ ಸದಸ್ಯರಾದ ಮಧುಕುಮಾರ್, ರೂಪ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಮುಖಂಡರಾದ ಜಸಂತಾ ಅನಿಲ್‌ಕುಮಾರ್, ವೀಣಾ, ಎಚ್.ಕೆ. ಕೇಶವಮೂರ್ತಿ, ಸಚ್ಚಿನ್‌ಗೌಡ, ದಿನೇಶ್, ಪ್ರದೀಪ್ ಉಪಸ್ಥಿತರಿದ್ದರು. 6 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಾರ್ಯಾಲಯದ ಹೊರ ಭಾಗದಲ್ಲಿ ಭಾನುವಾರ ಪಕ್ಷದ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''