ಸುಳ್ಳು ಭರವಸೆ ಮೇಲೆ ಜನರನ್ನು ಮೋಸಗೊಳಿಸುವ ತಂತ್ರದಲ್ಲಿರುವ ಬಿಜೆಪಿ

KannadaprabhaNewsNetwork |  
Published : Apr 27, 2024, 01:16 AM IST
ಫೋಟೊ:೨೪ಎಚ್‌ಎನ್‌ಎಲ್೨ | Kannada Prabha

ಸಾರಾಂಶ

ಬಿಜೆಪಿ ನೀಡಿದ ಯಾವುದೇ ಭರಸವಸೆಗಳು ಈಡೇರದೇ ಕೇವಲ ಘೋಷಣೆಗಳಾಗಿದ್ದು, ಸುಳ್ಳು ಭರವಸೆಯ ಮೇಲೆ ಜನರನ್ನು ಮೋಸಗೊಳಿಸುವ ತಂತ್ರದಲ್ಲಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಹಾನಗಲ್ಲ: ಬಿಜೆಪಿ ನೀಡಿದ ಯಾವುದೇ ಭರವಸೆಗಳು ಈಡೇರದೇ ಕೇವಲ ಘೋಷಣೆಗಳಾಗಿದ್ದು, ಸುಳ್ಳು ಭರವಸೆಯ ಮೇಲೆ ಜನರನ್ನು ಮೋಸಗೊಳಿಸುವ ತಂತ್ರದಲ್ಲಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ ಆರೋಪಿಸಿದರು.ಹಾನಗಲ್ಲ ತಾಲೂಕಿನ ಹುಣಸಿಕಟ್ಟೆ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದದೇವರಮಠ ಅವರ ಪರ ಮತ ಯಾಚಿಸಿದ ಅವರು, ಬಿಜೆಪಿ ನೀಡಿದ ಯಾವುದೇ ಭರವಸೆಗಳನ್ನೂ ಜಾರಿಗೊಳಿಸದೇ ಜನತೆಗೆ ಮೋಸ ಮಾಡಿದೆ. ಬಿಜೆಪಿಗೆ ಬರೀ ಸುಳ್ಳು ಹೇಳುವುದು ಅಭ್ಯಾಸವಾಗಿದೆ. ಸುಳ್ಳು ಮಾತನಾಡುವುದು ಬಿಜೆಪಿಯ ಕುಲದೈವವಾಗಿದೆ. ರಾಜ್ಯಕ್ಕೆ ಸಿಗಬೇಕಿದ್ದ ನ್ಯಾಯಸಮ್ಮತ ಅನುದಾನ, ಬರ ಪರಿಹಾರ ಬಿಡುಗಡೆ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ರಾಜ್ಯಕ್ಕೆ ಅನ್ಯಾಯ ಮಾಡಿದ್ದರೂ ಕೂಡ ಬಿಜೆಪಿ ಮತ್ತೆ ಸುಳ್ಳು ಹೇಳುತ್ತಿದೆ. ವಾಸ್ತವದ ಕುರಿತು ಚರ್ಚಿಸಲು ಆಹ್ವಾನಿಸಿದರೂ ಆಗಮಿಸುತ್ತಿಲ್ಲ ಎಂದರು.ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಮುಖಂಡರಾದ ಲಕ್ಷ್ಮಣ ಸಂಶಿ, ಕುಮಾರ ಸಂಶಿ, ನಿಂಗಪ್ಪ ಪ್ಯಾಟಿ, ಸದಾ ದ್ಯಾಮಣ್ಣನವರ, ಮುತ್ತಪ್ಪ ದ್ಯಾಮಣ್ಣನವರ, ದ್ಯಾಮಣ್ಣ ದ್ಯಾಮಣ್ಣನವರ ಮೊದಲಾದವರು ಶಾಸಕ ಶ್ರೀನಿವಾಸ ಮಾನೆ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಮುಖಂಡರಾದ ಮಲ್ಲಪ್ಪ ಅಂಗಡಿ, ಗಂಗಾಧರ ಪ್ಯಾಟಿ, ಶಂಕ್ರಪ್ಪ ಸಂಶಿ, ಮಹೇಶ ಕುಲಕರ್ಣಿ, ಶಿವಪ್ಪ ಮಣೆಗಾರ, ಆನಂದಪ್ಪ ಪ್ಯಾಟಿ ಈ ಸಂದರ್ಭದಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕ್ಷೇತ್ರ ಘೋಷಿಸಿದ ನಿಖಿಲ್
ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ಚುರುಕು