ಬಿಜೆಪಿ ಭಾರತೀಯರ ಭರವಸೆಯ ಪಕ್ಷ: ತೋಟಪ್ಪ ಕುರಡಗಿ

KannadaprabhaNewsNetwork |  
Published : Apr 07, 2026, 02:15 AM IST
ಬಿಜೆಪಿ ಸಂಸ್ಥಾಪನಾ ದಿನದಂಗವಾಗಿ ಧ್ವಜಾರೋಹಣವನ್ನು ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರಡಗಿ ನೆರವೇರಿಸಿದರು. | Kannada Prabha

ಸಾರಾಂಶ

ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ದೃಢಸಂಕಲ್ಪ ಮೊದಲು ದೇಶ, ಆಮೇಲೆ ಪಕ್ಷ, ಕೊನೆಯಲ್ಲಿ ತಾನು ಎಂಬ ಧ್ಯೇಯದೊಂದಿಗೆ ಬಿಜೆಪಿ ಸದೃಢವಾಗಿದೆ.

ಗದಗ: ಕಾರ್ಯಕರ್ತರ ಪರಿಶ್ರಮ, ಜನತೆಯ ಆಶೀರ್ವಾದ, ಶ್ರೇಷ್ಠ ನಾಯಕರ ನೇತೃತ್ವ, 1980ರಲ್ಲಿ ಇಬ್ಬರು ಸದಸ್ಯರಿಂದ ಪ್ರಾರಂಭವಾದ ಬಿಜೆಪಿ ಪಯಣ, ಇಂದು ವಿಶ್ವದ ಬೃಹತ್ ರಾಜಕೀಯ ಶಕ್ತಿಯಾಗಿ ಪರಿವರ್ತನೆಗೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರಡಗಿ ತಿಳಿಸಿದರು.

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ನಡೆದ ಪಕ್ಷದ 46ನೇ ಸಂಸ್ಥಾಪನಾ ದಿನದಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಸತತ 3 ಬಾರಿ ಕೇಂದ್ರದಲ್ಲಿ ಸರ್ಕಾರ ರಚನೆ, ಇಂದಿಗೆ 21 ರಾಜ್ಯಗಳಲ್ಲಿ ಎನ್‌ಡಿಎ ಆಡಳಿತದ ಮೂಲಕ ಬಿಜೆಪಿ ಇಂದು ಭಾರತೀಯರ ಭರವಸೆಯಾಗಿದೆ ಎಂದರು.

ಇದು ಕೇವಲ ರಾಜಕೀಯ ಪಯಣವಲ್ಲ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದೊಂದಿಗೆ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಭಾರತದ ವಿಕಾಸದ ಪಯಣ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ದೃಢಸಂಕಲ್ಪ ಮೊದಲು ದೇಶ, ಆಮೇಲೆ ಪಕ್ಷ, ಕೊನೆಯಲ್ಲಿ ತಾನು ಎಂಬ ಧ್ಯೇಯದೊಂದಿಗೆ ಬಿಜೆಪಿ ಸದೃಢವಾಗಿದೆ ಎಂದರು.

ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ರಾಷ್ಟ್ರ ಸೇವೆಯ ಪವಿತ್ರ ಧ್ಯೇಯದೊಂದಿಗೆ ಸ್ಥಾಪನೆಯಾದ ಬಿಜೆಪಿ ಇಂದು ದೇಶದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಶಕ್ತಿಯಾಗಿ ಬೆಳೆಯುತ್ತಿರುವುದು ಹೆಮ್ಮೆಗೆ ಕಾರಣವಾಗಿದೆ. ನಿಸ್ವಾರ್ಥ ಪರಿಶ್ರಮದಿಂದ ಪಕ್ಷವನ್ನು ಕಟ್ಟಿದ ನಮ್ಮ ಎಲ್ಲ ಹಿರಿಯ ನಾಯಕರು, ಕಾರ್ಯಕರ್ತರನ್ನು ಸ್ಮರಿಸೋಣ ಹಾಗೂ ಪಕ್ಷವನ್ನು ಮತ್ತಷ್ಟು ಸಂಘಟಿಸೋಣ ಎಂದರು.

ದೇಶಕ್ಕಾಗಿ ದುಡಿಯೋಣ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ ಅವರ ದೃಢ ನಾಯಕತ್ವ ಮತ್ತು ದೀರ್ಘದೃಷ್ಟಿಯ ಫಲವಾಗಿ ಬೆಳೆದ ಈ ಮಹಾನ್ ಸಂಘಟನೆ, ಇಂದು ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬ ಸಂಕಲ್ಪದೊಂದಿಗೆ ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಅಹೋರಾತ್ರಿ ಶ್ರಮಿಸುತ್ತಿದೆ. ಪಕ್ಷದ ಲಕ್ಷಾಂತರ ಕಾರ್ಯಕರ್ತರ ತ್ಯಾಗ, ಸಮರ್ಪಣೆ ಮತ್ತು ಶ್ರಮವೇ ಬಿಜೆಪಿ ಬಲವಾಗಿದೆ ಎಂದರು.ಹಿರಿಯ ಮುಖಂಡ ಎಂ.ಎಸ್. ಕರೀಗೌಡ್ರ ಮಾತನಾಡಿ, ಸಾಮಾನ್ಯ ಜನರ ಆಶಯಗಳನ್ನು ನೆರವೇರಿಸುವ ದಿಸೆಯಲ್ಲಿ ಬಿಜೆಪಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥಾಪನಾ ದಿನದ ಸಂದರ್ಭದಲ್ಲಿ, ನಾವು ಎಲ್ಲರೂ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಇನ್ನಷ್ಟು ಸಮರ್ಪಿತವಾಗಿ ತೊಡಗಿಸಿಕೊಂಡು, ಭಾರತದ ಪ್ರಗತಿಗೆ ನಮ್ಮ ಕೊಡುಗೆಯನ್ನು ಹೆಚ್ಚಿಸೋಣ ಎಂದರು.ಈ ವೇಳೆ ಮುಖಂಡರಾದ ಶ್ರೀಪತಿ ಉಡುಪಿ, ಜಗನ್ನಾಥಸಾ ಭಾಂಡಗೆ, ಬಿ.ಎಚ್. ಲದ್ವಾ, ಎಂ.ಎಂ. ಹಿರೇಮಠ, ಲಿಂಗರಾಜ ಪಾಟೀಲ, ನಿರ್ಮಲಾ ಕೊಳ್ಳಿ, ಸಿದ್ದು ಪಲ್ಲೇದ, ರವಿ ದಂಡಿನ, ಶಂಕರ ಕಾಕಿ, ಸುರೇಶ ಚಿತ್ತರಗಿ, ಅನೀಲ ಅಬ್ಬಿಗೇರಿ, ಶಶಿಧರ ದಿಂಡೂರ, ಸಂತೋಷ ಅಕ್ಕಿ, ರಮೇಶ ಸಜ್ಜಗಾರ, ನಾಗರಾಜ ತಳವಾರ, ದೇವೆಂದ್ರಪ್ಪ ಹೂಗಾರ, ರವಿ ಮಾನ್ವಿ, ವಿಶ್ವನಾಥ ಟೆಂಗಿನಕಾಯಿ, ಕೇಶವ ಕೋಟ್ನಿಕಲ್, ವಿಜಯಲಕ್ಷ್ಮೀ ಮಾನ್ವಿ, ಪದ್ಮಿನಿ ಮುತ್ತಲದಿನ್ನಿ, ಪುಷ್ಪಾ ಪೂಜಾರ, ರೇಖಾ ಗವಳಿ, ಕಮಲಾಕ್ಷಿ ತಕ್ಕಲಕೋಟಿ, ಸುಮಂಗಲಾ ಕೊನೆವಾಲ, ಶಿವಲೀಲಾ ಉಮಚಗಿ, ಯೋಗೇಶ್ವರಿ ಭಾವಿಕಟ್ಟಿ, ಶ್ರೀದೇವಿ ಲಖಮಾಪೂರ, ನೇತ್ರಾವತಿ ಜೋಗಿನ್, ಸಂಕೇತಾ ಶಿದ್ಲಿಂಗ್, ಎಸ್.ಪಿ. ಹೊಂಬಳ, ಆರ್.ಬಿ. ಹಾದಿಮನಿ, ಬಸವರಾಜ ನರೇಗಲ್, ವೀರೇಶಪ್ರಭು ಗದಗಿನ, ಮಂಜುನಾಥ, ವಿನೋದ ಹಂಸನೂರ ಹಾಗೂ ಪ್ರಮುಖರು ಇದ್ದರು. ಸ್ವಾತಿ ಅಕ್ಕಿ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐದು ವರ್ಷವಾದರೂ ಮುಗಿಯದ ರಸ್ತೆ ಕಾಮಗಾರಿ
ನಿರ್ಮಾಣ ಕಾಮಗಾರಿಗೆ ಮರಳಿಲ್ಲದೆ ಪರದಾಟ