ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ನಂತರ ಈ ಎಲ್ಲಾ ಅಶಾಂತಿಗೆ ಕಾರಣವಾಗಿದೆ. ಬಿ.ವೈ.ವಿಜಯೇಂದ್ರ ಅವರದು ಏಕಪಕ್ಷೀಯ ನಿರ್ಧಾರವಾಗಿದೆ. ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ. ಸಾಮೂಹಿಕ ನಾಯಕತ್ವ ಇತ್ತು. ಆದರೆ ಈಗ ಅದು ಇಲ್ಲ. ಸ್ವಜನ ಪಕ್ಷಪಾತವೇ ಮುಖ್ಯವಾಗುತ್ತಿದೆ. ಹೊಂದಾಣಿಕೆ ರಾಜಕಾರಣ ಎದ್ದು ಕಾಣುತ್ತಿದೆ. ಇದು ಇಲ್ಲಿಗೆ ಮುಗಿಯಬೇಕು ಎಂದರು.
ಸಭೆ ನಡೆಸಿದವರು ಅನುಭವಿಗಳು, ಪಕ್ಷವನ್ನು ಕಟ್ಟಿದವರು. ಅವರು ಆಗಸ್ಟ್ 17ರಿಂದ ಕೂಡಲಸಂಗಮದಿಂದ ಬಳ್ಳಾರಿಗೆ ಪಾದಯಾತ್ರೆ ಮಾಡುವುದಾಗಿ ಹೇಳಿದ್ದಾರೆ. ಆದರೆ, ಅವರು 12 ಜನರಿದ್ದಾರೋ, ಇನ್ನೂ ಹೆಚ್ಚಿದ್ದಾರೋ ಗೊತ್ತಿಲ್ಲ. ಈ ಪಾದಯಾತ್ರೆ ನಡೆದರೆ ರಾಜ್ಯದ ಎಲ್ಲಾ ತಾಲೂಕಿನಲ್ಲೂ ಎರಡೆರಡು ಪಾರ್ಟಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ವಿಜಯೇಂದ್ರ ಅಧ್ಯಕ್ಷರಾದ ನಂತರ ರಾಜ್ಯದಲ್ಲಿ ಲೋಕಸಭಾ 25 ಸ್ಥಾನ 17ಕ್ಕೆ ಕುಸಿಯಿತು. ಅದೇ ವಿಧಾನಸಭೆಯಲ್ಲಿ 66ಕ್ಕೆ ಕುಸಿಯಿತು. ಮೋದಿ ಹೆಸರು ಮತ್ತು ಬೆಂಬಲವಿದ್ದರೂ ಈ ಪರಿಸ್ಥಿತಿ ಎದುರಾಯಿತು. ಜೆಡಿಎಸ್ ಜೊತೆ ಸಖ್ಯ ಮಾಡಿದ ನಂತರ ಇಷ್ಟಾದರೂ ಸ್ಥಾನ ಸಿಕ್ಕಿದೆ. ಇಲ್ಲದಿದ್ದರೆ ಇಷ್ಟೂ ಸಿಟ್ ಬರ್ತಿರಲಿಲ್ಲ. ಒಂದೇ ಕುಟುಂಬದ ಕೈಗೆ ಅಧಿಕಾರ ಕೊಟ್ಡಿದ್ದೇ ಇದಕ್ಕೆ ಕಾರಣ ಎಂದು ಆರೋಪಿಸಿದರು.
ಇಂದು ನಗರದಲ್ಲಿ ಪ್ರತಿಭಟನೆ : ಎಲ್ಲಾ ಬಡವರಿಗೂ ಸೂರು ನೀಡಬೇಕು, ಗೋವಿದಪುರ ಆಶ್ರಯ ಬಡಾವಣೆಯ ಮನೆಗಳನ್ನು ಪೂರ್ಣಗೊಳಿಸಿ ತಕ್ಷಣವೇ ಹಂಚಬೇಕು. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ತಕ್ಷಣ ಮರುಪಡೆದು ಅನುದಾನಗಳಿಗೆ ಉಪಯೋಗಿಸಬೇಕು, ಪಾಲಿಕೆಗೆ ಶೀಘ್ರವೇ ಚುನಾವಣೆ ನಡೆಯಬೇಕು ಎಂಬುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಆ.13ರಂದು ಬೆಳಿಗ್ಗೆ 11ಕ್ಕೆ ದೈವಜ್ಞ ಕಲ್ಯಾಣ ಮಂದಿರದ ಆವರಣದಿಂದ ಮಹಾನಗರ ಪಾಲಿಕೆ ಆವರಣದವರೆಗೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಬಿಜೆಪಿಯ ಅಸಮಾಧಾನಿತ 12 ಹಿರಿಯ ಮುಖಂಡರು ಸಭೆ ನಡೆಸಿ ಪಾದಯಾತ್ರೆಗೆ ನಿರ್ಧರಿಸಿದ್ದಾರೆ. ಸಭೆಯಲ್ಲಿ ಚರ್ಚಿಸಿರುವ ಬಗ್ಗೆ ಬಹಿರಂಗವಾಗಿ ಹೇಳುತ್ತಿಲ್ಲ. ಅನುಭವಿಗಳು, ಪಕ್ಷ ಕಟ್ಟಿದವರು, ನೋವು ಅನುಭವಿಸುತ್ತಿರುವವರು ಈ ಸಭೆ ನಡೆಸಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಈ ಎಲ್ಲಾ ಅಸಮಾಧಾನಗಳಿಗೆ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬವೇ ಪ್ರಮುಖ ಕಾರಣ ಎಂದು ನೋವಿನಿಂದ ಇರುವ ನಾಯಕರು ಮತ್ತು ಕಾರ್ಯಕರ್ತರು ಹೇಳುತ್ತಿದ್ದಾರೆ. ಯತ್ನಾಳ್, ಅರವಿಂದ ಲಿಂಬಾವಳಿ, ರಮೇಶ್ ಜಾರಕಿ ಹೊಳಿ, ಸಿದ್ದೇಶ್, ಶಶಿಕಲಾ ಜೊಲ್ಲೆ, ಕುಮಾರ ಬಂಗಾರಪ್ಪ ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಬಿಜೆಪಿ ನಾಯಕರು ಈ ನಿರ್ಧಾರ ತಾಳಿದ್ದಾರೆ. ಕೇಂದ್ರ ನಾಯಕರಿಗೆ ಬಿ.ಎಸ್.ಯಡಿಯೂರಪ್ಪ ಕುಟುಂಬದ ಮೇಲೆ ಯಾಕಿಷ್ಟು ಮೋಹ ಎಂದೇ ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಲಿ
ಭಾರತದಲ್ಲೂ ಈ ರೀತಿಯ ಘಟನೆ ಆಗಬಹುದು ಎಂದು ಕಾಂಗ್ರೆಸ್‌ನ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ. ಹೀಗಾದರೆ ಹಿಂದೂಗಳು ಸುಮ್ಮನಿರುತ್ತಾರಾ, ಮುಸ್ಲಿಮರ ಪರಿಸ್ಥಿತಿ ಕಷ್ಟಕರವಾಗುತ್ತದೆ ಎಂದರು.