ಜನೌಷಧಿ ಕೇಂದ್ರಗಳ ಮುಚ್ಚದಂತೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : May 31, 2025, 01:30 AM IST
ಜನೌಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರದ ವಿರುದ್ದ ಬಿಜೆಪಿಯಿಂದ ಮೌನ ಪ್ರತಿಭಟನೆರಾಜ್ಯದಲ್ಲಿ ಜನ ವಿರೋಧಿ ಸರಕಾರ : ನಾರಾಯಣಸಾ ಭಾಂಡಗೆ | Kannada Prabha

ಸಾರಾಂಶ

ಬಾಗಲಕೋಟೆಜನೌಷಧಿ ಕೇಂದ್ರಗಳನ್ನು ಮುಚ್ಚುವ ಆದೇಶ ಹಿಂಪಡೆಯಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜನೌಷಧಿ ಕೇಂದ್ರಗಳನ್ನು ಮುಚ್ಚುವ ಆದೇಶ ಹಿಂಪಡೆಯಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

ನವನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದಲ್ಲಿರುವುದು ಜನವಿರೋಧಿ ಸರಕಾರವಾಗಿದ್ದು, ಇದು ಮೇಡಿಕಲ್ ಮಾಫಿಯಾ ಗ್ಯಾಂಗ್ ಗೆ ಬಲಿಯಾಗಿದೆ. ಜನೌಔಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ರದ್ದು ಮಾಡಬೇಕು. ಈಗಾಗಲೇ ಚಾಲ್ತಿಯಲ್ಲಿರುವ ಪರವಾನಗಿ ಮುಂದುವರಿಸುವ ಮೂಲಕ ಬಡವರ ಪರವಾಗಿ ನಿಲ್ಲಬೇಕು, ಇಲ್ಲವಾದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಪ್ರಧಾನಮಂತ್ರಿ ಜನೌಷಧಿ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರದ ಬಡ.ಕೆಳವರ್ಗ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅತ್ಯಂತ ಕಾಳಜಿ ಹಾಗೂ ದೂರದರಷ್ಟಿಯಂದ ಜಾರಿಗೊಳಿದ್ದಾರೆ, ಆದರೆ ಕರ್ನಾಟಕ ಸರ್ಕಾರ ಮೆಡಿಕಲ್ ಮಾಫಿಯಾಗೆ ಬಲಿಯಾಗಿ ಜನೌಷಧಿ ಕೇಂದ್ರಗಳನ್ನು ಮುಚ್ಚುವ ತೀರ್ಮಾನ ತೆಗೆದುಕೋಂಡಿರುವುದು ದುರದುಷ್ಟಕರ ಸಂಗತಿ, ಕೂಡಲೇ ರಾಜ್ಯ ಸರ್ಕಾರ ಮುಚ್ಚುವ ಆದೇಶ ಹಿಂಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಹೇಳಿದರು.

ಮೌನ ಪ್ರತಿಭಟನೆಯಲ್ಲಿ ಡಾ.ಎಂ.ಎಸ್. ದಡ್ಡೆನ್ನವರ, ಗುಂಡುರಾವ ಶಿಂಧೆ, ಬಸಲಿಂಗಪ್ಪ ನಾವಲಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಬಸವರಾಜ ಯಂಕಂಚಿ, ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ, ಉಪಾಧ್ಯಕ್ಚೆ ಶೋಭಾ ರಾವ್, ಶಶಿಕಲಾ ಮಜ್ಜಗಿ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಪ್ರಭು ಹಡಗಲಿ, ಬಸವರಾಜ ಅವರಾದಿ, ಯಲ್ಲಪ್ಪ ನಾರಾಯಣಿ, ಶ್ರೀಧರ ನಾಗರಬೆಟ್ಟ, ಸುರೇಶ ಮಜ್ಜಗಿ, ಚೆನ್ನಯ್ಯ ಹಿರೇಮಠ, ಮಲ್ಲೇಶ ವಿಜಾಪುರ, ಕಲ್ಲಪ್ಪ ಭಗವತಿ, ವಿಜು ಅಂಗಡಿ, ಸತ್ಯನಾರಾಯಣ ಹೆಮಾದ್ರಿ, ವೀರಣ್ಣ ಹಳೆಗೌಡರ, ಮಹೇಶ ಅಂಗಡಿ, ವಿಜಯ ಕಣ್ಣೂರ, ಗುರು ಚಳ್ಳಿಮರದ, ಸುಭಾಸ ರಾಮೋಡಗಿ, ಮುತ್ತು ಸೀಮಿಕೇರಿ, ಮಂಜು ಗೌಡರ, ಉಮೇಶ ಲಮಾಣಿ, ಕೀರಣ ಬಾಗೇವಾಡಿ, ಆನಂದ ಕೋಟಗಿ, ಚಂದ್ರು ಸರೂರ, ಪರಮೇಶ್ವರ ಮದುರ, ಸಾಗರ ಬಂಡಿ, ವೀರಣ್ಣ ಶಿರಗನ್ನವರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ