ಕನ್ನಡಪ್ರಭ ವಾರ್ತೆ ಕೋಲಾರಬಿಜೆಪಿಯ ಜನಾಕ್ರೋಶ ರ್‍ಯಾಲಿಗೆ ಬುಧವಾರ ಬೆಳಗ್ಗೆ ೧೧ ಗಂಟೆಗೆ ನಗರದ ಸರ್ವಜ್ಞ ಉದ್ಯಾನವನ ಸಮೀಪದ ಪ್ರಭಾತ್ ಟಾಕೀಸ್ ರಸ್ತೆಯಲ್ಲಿ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಬಿಜೆಪಿ ಪಕ್ಷದ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜೇಂದ್ರ, ಮುಖಂಡರಾದ ಛಲವಾದಿ ನಾರಾಯಣಸ್ವಾಮಿ, ಅಶೋಕ್, ಅಶ್ವಥ್ ನಾರಾಯಣಗೌಡ, ರವಿ ಕುಮಾರ್, ಶ್ರೀರಾಮುಲು, ಗೋವಿಂದಕಾರ ಜೋಳ, ಬೈರತಿ ಬಸವರಾಜ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.ವ್ಯಾಪಕ ಭ್ರಷ್ಟಾಚಾರ
ಗ್ಯಾರಂಟಿಗಳ ಆಶ್ವಾಸನೆ ಮೇಲೆ ಬಂದಿರುವ ಸರ್ಕಾರವು ವ್ಯಾಪಾಕವಾದ ಭ್ರಷ್ಟಚಾರ, ಇಲಾಖೆಗಳ ಅಭಿವೃದ್ದಿ ಹಣವನ್ನು ಗ್ಯಾರಂಟಿಗಳಿಗೆ ದುರ್‍ಬಳಕೆ ಮಾಡುತ್ತಿದೆ. ಓಟ್ ಬ್ಯಾಂಕ್‌ಗಾಗಿ ಒಂದು ಸಮುದಾಯವನ್ನು ತುಷ್ಟೀಕರಣ ಮಾಡಲಾಗುತ್ತಿರುವ ಕುರಿತು ರಾಜ್ಯದಲ್ಲಿ ಇತರೆ ಸಮುದಾಯಗಳು ತೀವ್ರವಾಗಿ ಆಕ್ಷೇಸಿವೆ. ಹಿಂದು ನಾಯಕರನ್ನು ಸರಣಿಯಂತೆ ಹತ್ಯೆ ಮಾಡಲಾಗುತ್ತಿದೆ. ದಲಿತರ ಹಣ ಲೂಟಿ ಹೊಡೆಯಲಾಗಿದೆ. ಜನರ ನೋವಿನ ಅಕ್ರೋಶದ ಹಿನ್ನೆಲೆಯಲ್ಲಿ ಬಿಜೆಪಿಯು ಜನಾಕ್ರೋಶದ ರ್‍ಯಾಲಿ ಕೈಗೆತ್ತಿಕೊಂಡಿದೆ ಎಂದರು,ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ಎರಡು ವರ್ಷದಲ್ಲಿಯೇ ಇಷ್ಟೊಂದು ವಿರೋಧವನ್ನು ಜನರು ಎಂದೂ ವ್ಯಕ್ತಪಡಿಸಿರುವುದನ್ನು ನಾವು ಕಂಡಿರಲಿಲ್ಲ. ರೈತರ ಪರ, ಜನರ ಬರ, ಬಡವರ ಎಂದು ಹೇಳಿಕೊಂಡು ಅಧಿಕಾರ ಹಿಡಿದ ಸರ್ಕಾರವು ಎಲ್ಲರನ್ನೂ ಮೂರಾಬಟ್ಟೆ ಮಾಡಿದೆ ಎಂದು ದೂರಿದರು. ರ್‍ಯಾಲಿಯಿಂದ ಕಾಂಗ್ರೆಸ್‌ಗೆ ಪಾಠ
ವೇದಿಕೆ ಕಾರ್ಯಕ್ರಮವು ಬೆಳಗ್ಗೆ ೧೧ ಗಂಟೆಗೆ ಪ್ರಾರಂಭವಾಗಲಿದೆ. ನಗರದ ಜನತೆಯ ಅಪೂತಪೂರ್ವವಾದ ಬೆಂಬಲ ಸಿಕ್ಕಿದೆ. ಜನಾಕೋಶ್ರ ರ್‍ಯಾಲಿಯ ಯಶಸ್ಸು ಕಾಂಗ್ರೆಸ್ ಪಕ್ಷಕ್ಕೆ ಒಂದು ಪಾಠವಾಗಲಿದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಪ್ರವೀಣ್ ಗೌಡ, ವಿಜಯ ಕುಮಾರ್, ಸಾ.ಮಾ.ಅನಿಲ್, ಅಪ್ಪಿರಾಜು, ಬಾಲಾಜಿ, ರಾಜೇಶ್ ಸಿಂಗ್, ಕಪಾಲಿ ಶಂಕರ್, ಶಿವಕುಮಾರ್, ತೇಜಸ್ಸ್, ಮು.ರಾಘವೇಂದ್ರ, ಸತೀಶ್, ಮಂಜುನಾಥ್, ಬಿಂದು ಮಾಧವ್ ಇದ್ದರು.