;Resize=(412,232))
ಸುಬ್ರಹ್ಮಣ್ಯ: ಪಶ್ಚಿಮ ಬಂಗಾಳದಲ್ಲಿ ಗೂಂಡಾ ಸರ್ಕಾರ ಇದ್ದು ಅದನ್ನು ಜನ ಕಿತ್ತೊಗೆದರು. ಹಿಂದೂ ವಿರೋಧಿ ಸರ್ಕಾರವನ್ನು ಕಿತ್ತೊಗೆದರು. ಅಲ್ಲಿನ ಮಕ್ಕಳು ಕೂಡ ಜೈಶ್ರೀರಾಮ್ ಘೋಷಣೆ ಕೂಗಿರುವುದನ್ನು ನೋಡಿದರೆ ಅಲ್ಲಿನ ವಾಸ್ತವ ಅರ್ಥವಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಸುಬ್ರಹ್ಮಣ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿನ್ನ ಖರೀದಿಸಬೇಡಿ ಎಂದು ಮೋದಿ ಹೇಳಿರುವ ಬಗ್ಗೆ ಪತ್ರಕರ್ತರು ವ್ರಶ್ನಿಸಿದಾಗ ಇರಾನ್ ಅಮೆರಿಕದ ಯುದ್ದದಿಂದ ಆಗಿರುವ ತೊಂದರೆ ಅರ್ಥ ಮಾಡಿಕೊಳ್ಳಬೇಕು. ಮೋದಿ ವಾಸ್ತವಿಕವಾಗಿ ಹೇಳಿಕೆ ನೀಡಿದ್ಧಾರೆ. ಆದರೆ ಅದರ ವಾಸ್ತವಿಕತೆ ಕಾಂಗ್ರೆಸ್ ನ ಮೂರ್ಖರಿಗೆ ಅರ್ಥವಾಗುವುದಿಲ್ಲ ಆದ್ದರಿಂದ ಟೀಕಿಸುತ್ತಾರೆ ಎಂದರು.
ಉಪ ಚುನಾವಣೆ ಸೋಲು ಒಪ್ಪಿಕೊಳ್ಳತ್ತೇವೆ, 2028 ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಸುಬ್ರಹ್ಮಣ್ಯ ಬಿಜೆಪಿ ಅಧ್ಯಕ್ಷ ರಾಜೇಶ್ ಎನ್.ಎಸ್ ಉಪಸ್ಥಿತರಿದ್ದರು.