ಹುಬ್ಬಳ್ಳಿ:
ಆಸಾರ ಓಣಿಯಲ್ಲಿನ ಪುಷ್ಕರಣಿ ವಿವಾದವನ್ನು ಮುಂದಿಟ್ಟುಕೊಂಡು ನಗರದಲ್ಲಿ ಶಾಂತಿ ಭಂಗ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಇಂತಹ ಯತ್ನಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಾವು ಶಾಸಕರಾಗಿದ್ದ ವೇಳೆ ಇಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಿದಾಗ ವಿರೋಧ ವ್ಯಕ್ತಪಡಿಸದವರು ಇದೀಗ ವಿವಾದ ಸೃಷ್ಟಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. ಪಾಂಡುರಂಗ ಪಾಟೀಲ ಪಾಲಿಕೆ ಸದಸ್ಯರಾಗಿದ್ದ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಾಗಲೂ ಮೌನವಾಗಿದ್ದವರು. ಈಗ ರಾಜಕೀಯ ಕಾರಣಕ್ಕಾಗಿ ವಿಚಾರವನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ಅವರನ್ನು ಧಾರವಾಡ ಜಿಲ್ಲೆಯಿಂದ ಮಾತ್ರವಲ್ಲ ರಾಜ್ಯದಿಂದಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ನಾಯಕರಿಗೆ ಹಲವು ಪ್ರಶ್ನೆ ಮುಂದಿಟ್ಟ ಪ್ರತಿಭಟನಾಕಾರರು, ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ಜಾಗ ಒತ್ತುವರಿ, ಅಂಬೇಡ್ಕರ್ ಹಾಗೂ ಸಿದ್ದಪ್ಪ ಕಂಬಳಿ ಅವರು ಬಳಸಿದ್ದರೆಂದು ಹೇಳಲಾಗುವ ಬಾವಿಯ ಸಂರಕ್ಷಣೆ ಸೇರಿದಂತೆ ವಿವಿಧ ವಿಷಯಗಳಲ್ಲೂ ಪ್ರತಿಭಟನೆ ನಡೆಸಲಿ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಗುರುನಾಥ ಉಳ್ಳಿಕಾಶಿ, ಸದಾನಂದ ಡಂಗನವರ, ನಾಗರಾಜ ಗೌರಿ, ಶ್ರೀನಿವಾಸ ಬೆಳದಡಿ, ಪ್ರಕಾಶ ಕುರಹಟ್ಟಿ, ರಜತ್ ಉಳ್ಳಾಗಡ್ಡಿಮಠ, ಮಂಜುನಾಥ ಉಳ್ಳಿಕಾಶಿ, ಸಂದಿಲ್ ಕುಮಾರ, ಸುವರ್ಣ ಕಲಕುಂಟ್ಲ, ದೊರೆರಾಜ ಮಣಕುಂಟ್ಲ, ಸುನಿಲ ಕಠಾರೆ, ಪ್ರಭು ಪ್ರಭಾಕರ, ಮಾರುತಿ ದೊಡ್ಡಮನಿ, ಅಕ್ಕಮ್ಮ ಕಾಂಬಳೆ, ಚೇತನಾ ಲಿಂಗದಾಳ ಸೇರಿ ಹಲವರಿದ್ದರು.