ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಚಾಮುಲ್ ಮಾಜಿ ನಿರ್ದೇಶಕ ಕನ್ನೇಗಾಲ ಸ್ವಾಮಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ೧೦ ಕ್ಷೇತ್ರಕ್ಕೆ ಚುನಾವಣೆ ನಡೆದು ೧೦ ಕ್ಷೇತ್ರದಲ್ಲೂ ಬಿಜೆಪಿ ಬೆಂಬಲಿಗರು ಗೆಲುವು ಸಾಧಿಸಿದರೆ, ಬಿಜೆಪಿ ಬೆಂಬಲಿತ ಕನ್ನೇಗಾಲದ ಸಿದ್ದರಾಜಚಾರಿ ಹಾಗೂ ಕಾಂಗ್ರೆಸ್ ಬೆಂಬಲಿತ ಕನ್ನೇಗಾಲದ ದೊಡ್ಡನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸಾಲಗಾರರ ಕ್ಷೇತ್ರದಲ್ಲಿ ಕನ್ನೇಗಾಲಸ್ವಾಮಿ (ಡಿ.ಮಾದಪ್ಪ), ಗೋಪಾಲಪುರ ಮಾದಪ್ಪ, ಜಿ.ಡಿ.ಶಂಕರಪ್ಪ, ಜಿ.ಎಂ.ಶಿವಕುಮಾರ್, ಗೋಪಾಲಪ್ಪ ಆಲಿಯಾಸ್ ಸ್ವಾಮಿ, ಜಿ.ಪಿ.ರಾಜೇಶ್, ರತ್ನಮ್ಮ, ಕನ್ನೇಗಾಲದ ಬಸವಯ್ಯ, ಅಂಬಿಕಾ ಗೆಲುವು ಸಾಧಿಸಿದ್ದಾರೆ. ಸಾಲಗಾರರಲ್ಲದ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಿ.ಪಿ.ಗವಿಯಪ್ಪ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಸಹಕಾರ ಅಭಿವೃದ್ಧಿ ಅಧಿಕಾರಿ ಪದ್ಮನಾಭ ಘೋಷಿಸಿದರು.
ಬಿಜೆಪಿ ಬೆಂಬಲಿತ ನಿರ್ದೇಶಕರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿ ಬಿಜೆಪಿಗೆ ಜೈಕಾರ ಕೂಗಿದರು. ಈ ಸಮಯದಲ್ಲಿ ಬಿಜೆಪಿ ಮುಖಂಡರಾದ ಗೋಪಾಲಪುರ ಪಿ.ಗುರುಸ್ವಾಮಿ,ಗೌಡಿಕೆ ನಾಗಪ್ಪ,ಜಿ. ಗೋಪಾಲಪ್ಪ, ಸಿದ್ದಪ್ಪ, ಬಸವರಾಜಪ್ಪ, ಪ್ರಭು, ನಾಗುಸ್ವಾಮಿ, ಸಿದ್ದಪ್ಪ, ಶಿವಪ್ಪ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.ಚಾಮುಲ್‌ನಲ್ಲಿ ಸೋತ್ರು, ಫ್ಯಾಕ್ಸ್‌ನಲ್ಲಿ ಗೆದ್ರು!