ಕನ್ನಡಪ್ರಭ ವಾರ್ತೆ ಹಲಗೂರು
ದೇಶವನ್ನು ವಿಭಜನೆ ಮಾಡಿದ ದಿನ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಗುರುವಾರ ಸಂಜೆ ಮೌನ ಪ್ರತಿಭಟನೆ ನಡೆಸಿದರು.ಹಲಗೂರು ವೃತ್ತದಿಂದ ಪ್ರಮುಖ ರಸ್ತೆಯಲ್ಲಿ ಮೌನ ಮೆರವಣಿಗೆ ಮಾಡಿಕೊಂಡು ಬಂದು ನಂತರ ಪ್ರಕೋಷ್ಠಗಳ ಜಿಲ್ಲಾ ಸಂಯೋಜಕ ಬಿ.ಎನ್.ಕೃಷ್ಣೇಗೌಡ ಮಾತನಾಡಿ, 1947 ಆಗಸ್ಟ್ 8ರಂದು ನಮ್ಮ ರಾಷ್ಟ್ರ ನಾಯಕರು ಪೂರ್ವ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನ ಎಂದು ದೇಶವನ್ನು ವಿಭಜನೆ ಮಾಡಿದರು ಎಂದರು.
ಇಂತಹ ದುರಂತ ತಂದಿಟ್ಟ ದಿನ ಅಂಗವಾಗಿ ಇಂದು ನಮ್ಮ ರಾಷ್ಟ್ರೀಯ ನಾಯಕರು ದೇಶಾದ್ಯಂತ ಈ ದಿನವನ್ನು ವಿಭಜನೆ ವಿಭೀಷಣ ಸ್ಮೃತಿ ದಿನವೆಂದು ಆಚರಿಸಬೇಕೆಂದು ಆದೇಶ ಮಾಡಿದ್ದರಿಂದ ನಾವು ವಿಭಜನೆ ಖಂಡಿಸಿ ಮೌನ ಪ್ರತಿಭಟನಾ ಮೆರವಣಿಗೆ ಮಾಡುತ್ತಿದ್ದೇವೆ ಎಂದರು.ವಿಭಜನೆ ವಿಭೀಷಣ ಕಾರ್ಯಕ್ರಮದ ನೇತೃತ್ವವನ್ನು ಪ್ರಕೋಷ್ಠಗಳ ಜಿಲ್ಲಾ ಸಂಯೋಜಕ ಬಿ.ಎನ್.ಕೃಷ್ಣೇಗೌಡ ವಹಿಸಿದ್ದರು. ಮಂಡಲದ ಅಧ್ಯಕ್ಷ ಎಂ.ಎನ್.ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ನಾಗೇಶ್, ಕರೀಗೌಡ, ಉಪಾಧ್ಯಕ್ಷ ಎನ್.ಕೆ.ಕುಮಾರ್ ಆನಂದ್ ,ಅಂಜನ್, ಶಕ್ತಿ ಕೇಂದ್ರದ ಅಧ್ಯಕ್ಷ ಮೋದಿ ರವಿ, ರೈತ ಮೋರ್ಚ ಶಶಿಕುಮಾರ್, ಅಭಿಜಿತ್, ಕಿಶೋರ್, ಶಿವಲಿಂಗಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ರಾಗಿ ಪೈರಿನಲ್ಲಿ ಮೂಡಿದ ಭಾರತದ ನಕ್ಷೆಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಮೊತ್ತಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕೃಷಿ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಮೊತ್ತಹಳ್ಳಿ ಗ್ರಾಮದ ಹಿರಿಯ ವಿದ್ಯಾರ್ಥಿಗಳು ಸೇರಿ ಕಳೆದ ೧೦ ದಿನಗಳ ಹಿಂದೆ ರಾಗಿಯಲ್ಲಿ ಭಾರತದ ನಕ್ಷೆ ಬರೆದು ಸಸಿಮಡಿ ತಯಾರಿ ನಡೆಸಿದರು. ಆ ನಕ್ಷೆಯು ಸ್ವಾತಂತ್ರ್ಯ ದಿನಾಚರಣೆಯ ದಿನಕ್ಕೆ ಕೃಷಿ ಪ್ರಧಾನ ದೇಶವಾದ ಭಾರತ ಅಚ್ಚ ಹಸಿರಿನಿಂದ ಕಂಗೊಳಿಸಲಿ ಎಂದು ರಾಗಿ ಪೈರಿನಲ್ಲಿ ನಕ್ಷೆ ಬಿಡಿಸಲಾಯಿತು.