ರಾಮನಗರ: ಬೆಂಗಳೂರು ಶಿಕ್ಷಣ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎ.ಪಿ.ರಂಗನಾಥ್ ಅವರು ವಕೀಲರಾಗಿದ್ದರೂ, ಶಿಕ್ಷಕರ ಮೇಲೆ ಅಪಾರಗೌರವ ಇಟ್ಟುಕೊಂಡಿದ್ದಾರೆ. ಇದೇ ಕ್ಷೇತ್ರದಿಂದ ಎರಡು ಬಾರಿ ಸೋತಿರುವ ಅವರಿಗೆ ಈ ಬಾರಿ ಮತದಾರರು ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡಲು ಆಶೀರ್ವಾದ ಮಾಡುತ್ತಾರೆಂಬ ನಂಬಿಕೆ ಇದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ನಮ್ಮ ಬ್ಯಾಂಡ್ ಬಂದ್ ಮಾಡ್ತಾರೆ:
ನಮ್ಮ ಪಕ್ಷದ ಕಾರ್ಯಕರ್ತರು ಮತದಾರ ಶಿಕ್ಷಕರ ಮನೆಗೆ ಬಾಗಿಲಿಗೆ ಹೋಗಿ ನಮ್ಮ ಅಭ್ಯರ್ಥಿ ಪರ ಕೈ ಮುಗಿದು ಮತಯಾಚಿಸಬೇಕು. ಬ್ಯಾಂಡ್ ಸೆಟ್ ಹೊಡೆದುಕೊಂಡು ಹೋದರೆ, ನಮ್ಮ ಬ್ಯಾಂಡ್ ಸೆಟ್ ಬಡಿದು ಬಿಡುತ್ತಾರೆ. ಹಾಗಾಗಿ ಕಾರ್ಯಕರ್ತರು ಕೈ ಮುಗಿದು ಮತದಾರರಲ್ಲಿ ಮನವಿ ಮಾಡಬೇಕು ಎಂದು ಕಿವಿಮಾತು ಹೇಳಿದರು.2 ಕೋಟಿ ಬಾಂಗ್ಲಾ ನಿವಾಸಿಗಳು :
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪಾಪರ್ ಆಗಿದ್ದು, ಸರ್ಕಾರಿ ನೌಕರರಿಗೆ ವೇತನ ಕೊಡಲು ಕಷ್ಟ ಪಡುತ್ತಿದೆ. ಜೊತೆಗೆ ಕಳೆದ ಆರು ತಿಂಗಳಿನಿಂದ ಮಾಶಾಸನ ಸಹ ನೀಡಿಲ್ಲ. ಸಿಎಂ ಡಿ.ಕೆ.ಶಿವಕುಮಾರ್ ಹೃದಯ ಕಲ್ಲು ಬಂಡೆಯಾಗಿದೆ. ರಿಯಲ್ ಎಸ್ಟೆಟ್‌ನಿಂದ ಬಂದಿರುವ ಅವರಿಗೆ ಬಡವರ ಕಷ್ಟ ಕಾಣಿಸುತ್ತಿಲ್ಲ. ಅವರಿಗೆ ಕಾಣಿಸಿಸುವುದು ಕೇವಲ ರಿಯಲ್ ಎಸ್ಟೇಟ್ ವ್ಯವಹಾರ ಮಾತ್ರ ಎಂದು ಹರಿಹಾಯ್ದರು.
ಸಂಸದ ಮಂಜುನಾಥ್ ಮಾತನಾಡಿ, ಕಳೆದ ಎರಡು ಚುನಾವಣೆಯಲ್ಲಿ ಸೋತಿರುವ ಎ.ಪಿ.ರಂಗನಾಥ್ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳುವುದು ನಮ್ಮ ಎರಡೂ ಪಕ್ಷದ ಜವಾಬ್ದಾರಿ. ಅದಕ್ಕಾಗಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ದುಡಿಯಬೇಕು. ಇತಿಹಾಸ ಬದಲಾಯಿಸುವ ಶಕ್ತಿ ಶಿಕ್ಷಕರಿಗಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಅಗತ್ಯವಿದೆ. ಆದರೆ, ರಾಜ್ಯ ಸರ್ಕಾರ ಈ ಎರಡು ಕಣ್ಣುಗಳನ್ನು ಮರೆತಂತೆ ಕಾಣುತ್ತಿದೆ. ಸರ್ಕಾರ ಈ ಎರಡು ಕ್ಷೇತ್ರಕ್ಕೆ ಅನುದಾನವೂ ನೀಡುತ್ತಿಲ್ಲ. ಅನುಷ್ಠಾನವೂ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಮಾಜಿ ಶಾಸಕ ಎ.ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಅ.ದೇವೇಗೌಡ, ಮೈತ್ರಿ ಪಕ್ಷದ ಮುಖಂಡರಾದ ಜಯಮುತ್ತು, ಆನಂದ್ ಸ್ವಾಮಿ, ಗೌತಮ್ ಗೌಡ, ಪ್ರಸಾದ್ ಗೌಡ, ಸಬ್ಬಕೆರೆ ಶಿವಲಿಂಗಯ್ಯ, ನಾಗರಾಜು (ಚಿಕ್ಕಪ್ಪ), ಹಾಪ್ ಕಾಮ್ಸ್ ದೇವರಾಜು, ಗೋವಿಂದಳ್ಳಿ ನಾಗರಾಜು, ಹಾರೋಹಳ್ಳಿ ರಾಮು, ಚೇತನ್ ಕುಮಾರ್, ವಕೀಲರಾದ ಮಂಜೇಶ್ ಗೌಡ, ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಪರಿಷತ್ ಚುನಾವಣೆ 2028ರ ಚುನಾವಣೆಗೆ ದಿಕ್ಸೂಚಿ
ರಾಮನಗರ: ರಾಜ್ಯದಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆ 2028ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಈ ಚುನಾವಣೆಯನ್ನು ಎನ್‌ಡಿಎ ಪಕ್ಷಗಳು ಸವಾಲಾಗಿ ಸ್ವೀಕರಿಸಿದ್ದು, ಅಭ್ಯರ್ಥಿಗಳ ಗೆಲುವಿಗಾಗಿ 15ರಿಂದ 20 ಮತದಾರರಿಗೆ ಉಸ್ತುವಾರಿಗಳ ನೇಮಕ ಮಾಡಲಾಗುತ್ತಿದೆ ಎಂದು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ರಂಗನಾಥ್ ಅವರು ಕಳೆದ ಚುನಾವಣೆಯಲ್ಲಿ 1200 ಮತಗಳಿಂದ ಸೋತಿದ್ದಾರೆ. ಆದರೂ, ಎದೆಗುಂದದೆ ಈ ಬಾರಿಯು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ವಕೀಲರಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಿ ರಂಗನಾಥ್ ಗೆಲುವಿಗೆ ಶ್ರಮಿಸಬೇಕು ಎಂದರು.
ನ್ಯಾಚುರಲ್ ಅಲೆಯನ್ಸ್:ಜೆಡಿಎಸ್ - ಬಿಜೆಪಿ ಮೈತ್ರಿ ನ್ಯಾಚುರಲ್ ಆಗಿದೆ. ಆದರೆ, ಕಾಂಗ್ರೆಸ್ ಜೊತೆಗಿನ ಮೈತ್ರಿ ಅನ್ ನ್ಯಾಚುರಲ್ ಆಗಿತ್ತು. ಈ ಮೈತ್ರಿ ಹೋಬಳಿ, ಗ್ರಾಮ, ನಗರ ಮಟ್ಟದಲ್ಲಿಯು ಮುಂದುವರೆಯಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯಿಂದಾಗಿ ಹೆಚ್ಚಿನ ಸಂಸದರು ಗೆಲುವು ಸಾಧಿಸಿದರು. ಉಪ ಚುನಾವಣೆಯಲ್ಲಿನ ಸೋಲಿನ ಕಹಿ ಅನುಭವವನ್ನು ಮರೆಯಲು ಪರಿಷತ್ ಚುನಾವಣೆ ಒಳ್ಳೆಯ ಅವಕಾಶ ಎಂದು ನಿಖಿಲ್ ಹೇಳಿದರು.
ಕೋಟ್................ಕಳೆದ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಪಕ್ಷಗಳ ಹೊಂದಾಣಿಕೆ ಕೊರತೆಯಿಂದ ಸೋತವೊ. ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಆಗಲ್ಲವೆಂದು ಕಾಂಗ್ರೆಸ್ ವ್ಯಂಗ್ಯವಾಡುತ್ತಿದ್ದರು. ಆದರೆ, ಪ್ರಬುದ್ಧ ಮತದಾರರು ಆಮಿಷಗಳಿಗೆ ಬಲಿಯಾಗದೆ ಡಾ.ಸಿ.ಎನ್.ಮಂಜುನಾಥ್ ಅವರನ್ನು ಗೆಲ್ಲಿಸಿದರು. ಬದಲಾವಣೆ ತರುವ ಭಾವನೆ ಶಿಕ್ಷಕ ಮತದಾರರಲ್ಲಿದೆ. ಅದಕ್ಕಾಗಿ ಕಾರ್ಯಕರ್ತರು ಶ್ರಮಿಸಿಬೇಕಿದೆ.
-ಎ.ಮಂಜುನಾಥ್, ಮಾಜಿ ಶಾಸಕಕೋಟ್.................
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಅಕ್ಟೋಬರ್ 5ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಎಲ್ಲರೂ ದಯಮಾಡಿ ಆಗಮಿಸಿ ಆಶೀರ್ವದಿಸಬೇಕು. ಬಿಡದಿ ಹೋರಾಟ ರಾಜ್ಯದಲ್ಲಿ ಸದ್ದು ಮಾಡುತ್ತಿದ್ದು, ಮೈತ್ರಿ ಪಕ್ಷಗಳಿಗೆ ಹೊಸ ಚೈತನ್ಯ ತಂದುಕೊಟ್ಟಿದೆ. ನನ್ನ ಗೆಲುವಿಗೆ ಎಲ್ಲರೂ ಸಹಕಾರ ಮಾಡಬೇಕು.- ಎ.ಪಿ.ರಂಗನಾಥ್, ಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ
1ಕೆಆರ್ ಎಂಎನ್ 3.ಜೆಪಿಜಿರಾಮನಗರದಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ ಸಂಬಂಧ ಜಿಲ್ಲಾ ಎನ್‌ಡಿಎ ಮೈತ್ರಿಕೂಟದ ಪ್ರಮುಖರ ಸಮನ್ವಯ ಸಭೆ ನಡೆಯಿತು.