ಮೆಟ್ರೋ ಹಸಿರು, ನೇರಳೆ ಮಾರ್ಗದಲ್ಲಿ ಪ್ಲಾಟ್‌ಫಾರ್ಮ್‌ ಪಿಎಸ್‌ಡಿ ಅಳವಡಿಕೆಗೆ ₹ 500 ಕೋಟಿ ವೆಚ್ಚ

KannadaprabhaNewsNetwork |  
Published : Aug 23, 2024, 01:10 AM ISTUpdated : Aug 23, 2024, 07:55 AM IST
ಮೆಟ್ರೋ ಪ್ಲಾಟ್‌ಫಾರ್ಮ್‌ | Kannada Prabha

ಸಾರಾಂಶ

‘ನಮ್ಮ ಮೆಟ್ರೋ’ಗೆ ಹಸಿರು, ನೇರಳೆ ಮಾರ್ಗದಲ್ಲಿ ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಡೋರ್‌ (ಪಿಎಸ್‌ಡಿ) ಅಳವಡಿಕೆಗೆ ಒತ್ತಾಯ ಹೆಚ್ಚಾಗಿದ್ದು, ಇದರ ಅಳವಡಿಕೆಗೆ ಸುಮಾರು ₹ 450 - ₹ 500 ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಹೇಳಿದೆ.

ಬೆಂಗಳೂರು: ಆತ್ಮಹತ್ಯೆ, ಆಯತಪ್ಪಿ ಬೀಳುವ ಪ್ರಕರಣ ಹೆಚ್ಚಿದ ಬೆನ್ನಲ್ಲೆ ‘ನಮ್ಮ ಮೆಟ್ರೋ’ಗೆ ಹಸಿರು, ನೇರಳೆ ಮಾರ್ಗದಲ್ಲಿ ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಡೋರ್‌ (ಪಿಎಸ್‌ಡಿ) ಅಳವಡಿಕೆಗೆ ಒತ್ತಾಯ ಹೆಚ್ಚಾಗಿದ್ದು, ಇದರ ಅಳವಡಿಕೆಗೆ ಸುಮಾರು ₹ 450 - ₹ 500 ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಹೇಳಿದೆ.

ಮುಂಬರುವ ಕಾಳೇನ ಅಗ್ರಹಾರ-ನಾಗವಾರ ನಡುವಿನ ಗುಲಾಬಿ ಮಾರ್ಗಕ್ಕೆ ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಡೋರ್‌ ಅಳವಡಿಕೆ ಆಗಲಿದೆ. ಆದರೆ, ಈಗಿನ ಹಸಿರು, ನೇರಳೆ ಮಾರ್ಗದಲ್ಲಿ ಈ ವ್ಯವಸ್ಥೆ ಇಲ್ಲದಿರುವ ಕಾರಣ ಹಳಿಗೆ ಬೀಳುವ ಪ್ರಕರಣ ಹೆಚ್ಚಾಗಿದೆ. ನಗರದಲ್ಲಿನ ಒಟ್ಟು 65 ಮೆಟ್ರೋ ನಿಲ್ದಾಣಗಳಿದ್ದು, ಪ್ರತಿ ನಿಲ್ದಾಣಕ್ಕೆ ಪಿಎಸ್‌ಡಿ ಅಳವಡಿಸಲು 7 ಕೋಟಿ ರು. ವೆಚ್ಚ ಅಂದಾಜಿಸಲಾಗಿದೆ. ಕೆಂಪೇಗೌಡ ನಿಲ್ದಾಣದಲ್ಲಿ ಒಟ್ಟು 4 ಪ್ಲಾಟ್ ಫಾರ್ಮ್‌ಗಳಿದ್ದು, ಇಲ್ಲಿ ಹೆಚ್ಚು ವೆಚ್ಚವಾಗಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ರೈಲುಗಳ ಕಾರ್ಯಾಚರಣೆ ವೇಳೆ ಪಿಎಸ್‌ಡಿ ಅಳವಡಿಕೆ ಕಷ್ಟವಾಗಲಿದೆ. ಜೊತೆಗೆ ಈ ವೆಚ್ಚವನ್ನು ಬಿಎಂಆರ್‌ಸಿಎಲ್‌ ಭರಿಸುವುದು ಕಷ್ಟ. ಹೀಗಾಗಿ ಸಾಮಾಜಿಕ ಜವಾಬ್ದಾರಿ ನಿಧಿಯಡಿ ಕೈಗೊಳ್ಳುವ ಬಗ್ಗೆ ಸರ್ಕಾರ ಯೋಚಿಸಬೇಕಿದೆ ಎಂದು ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆ ತವರಿಂದ ಇಂದು ದಳ ‘ರೈತ ಸ್ವಾಭಿಮಾನಿ ಯಾತ್ರೆ’
ಸಂಪುಟ ಚರ್ಚೆಗೆ ಇಂದು ಡಿಕೆಶಿ, ಸಿದ್ದು, ಬಿಕೆ ದಿಲ್ಲಿಗೆ