ಕಿಕ್ಕೇರಿ ಸಮೀಪದ ಮಾಕವಳ್ಳಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಪೂಜೆ

KannadaprabhaNewsNetwork |  
Published : Jun 10, 2025, 12:05 PM IST
9ಕೆಎಂಎನ್ ಡಿ28 | Kannada Prabha

ಸಾರಾಂಶ

ವಾರ್ಷಿಕ 8.5 ಲಕ್ಷ ಟನ್‌ ಕಬ್ಬುನುರಿಯುವ ಗುರಿ ಇದೆ. ಕಾರ್ಖಾನೆ ವ್ಯಾಪ್ತಿಯಲ್ಲಿ 11 ಸಾವಿರ ಎಕರೆಯಲ್ಲಿ ಕಬ್ಬು ಬೆಳೆ ಇದೆ. 5 ಲಕ್ಷ ಟನ್‌ಕಬ್ಬು ಮಾತ್ರ ಲಭ್ಯವಿದೆ. ಉಳಿಕೆ 3.5ಲಕ್ಷ ಟನ್‌ಕಬ್ಬಿನ ಕೊರತೆ ನೀಗಿಸಲು ಮತ್ತಷ್ಟು ರೈತರು ಸುಧಾರಿತ ಕಬ್ಬು ಬೆಳೆ ಬೆಳೆಯಬೇಕು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ರೈತರು ಹೆಚ್ಚು ಕಬ್ಬು ಬೆಳೆದು ಕಾರ್ಖಾನೆಗೆ ಸರಬರಾಜು ಮಾಡಿ ಸಹಕರಿಸಿ ಎಂದು ಮಾಕವಳ್ಳಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ವಿ.ಜೆ. ರವಿ ಹೇಳಿದರು.

ಕಾರ್ಖಾನೆ ಬಾಯ್ಲರ್‌ ಯಂತ್ರಕ್ಕೆ ಸೋಮವಾರ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಇದೇ ಜು.26 ರಂದು ವಿಧ್ಯುಕ್ತವಾಗಿ ಕಬ್ಬು ನುರಿಯುವಿಕೆ ಆರಂಭವಾಗಲಿದೆ. ಕಾರ್ಖಾನೆಯಲ್ಲಿ ನಿತ್ಯ 4.5 ಸಾವಿರ ಟನ್‌ಕಬ್ಬು ನುರಿಯಬಹುದಾಗಿದೆ ಎಂದರು.

ವಾರ್ಷಿಕ 8.5 ಲಕ್ಷ ಟನ್‌ ಕಬ್ಬುನುರಿಯುವ ಗುರಿ ಇದೆ. ಕಾರ್ಖಾನೆ ವ್ಯಾಪ್ತಿಯಲ್ಲಿ 11 ಸಾವಿರ ಎಕರೆಯಲ್ಲಿ ಕಬ್ಬು ಬೆಳೆ ಇದೆ. 5 ಲಕ್ಷ ಟನ್‌ಕಬ್ಬು ಮಾತ್ರ ಲಭ್ಯವಿದೆ. ಉಳಿಕೆ 3.5ಲಕ್ಷ ಟನ್‌ಕಬ್ಬಿನ ಕೊರತೆ ನೀಗಿಸಲು ಮತ್ತಷ್ಟು ರೈತರು ಸುಧಾರಿತ ಕಬ್ಬು ಬೆಳೆ ಬೆಳೆಯಬೇಕು ಎಂದರು.

ಕಳೆದ ಸಾಲಿನಲ್ಲಿ ಸರ್ಕಾರದ ಎಫ್‌ಆರ್‌ಪಿ ದರದಂತೆ ಟನ್‌ ಕಬ್ಬಿಗೆ 3154 ರು.ಸಕಾಲದಲ್ಲಿ ಎಲ್ಲ ಕಬ್ಬು ಬೆಳೆಗಾರರಿಗೆ ನೀಡಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರ ನಿಗದಿ ಪಡಿಸುವ ದರದಂತೆ ಹಣ ನೀಡಲಾಗುವುದು. ಕಬ್ಬುಕಟಾವಿಗೆ ಹೊರ ಹಾಗೂ ಸ್ಥಳೀಯ ಕಬ್ಬು ಕಟಾವು ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದರು.

ಈ ವೇಳೆ ಶೃಂಗೇರಿ ಶಾರದಾ ಪೀಠದ ವಿದ್ಯಾಶಂಕರಶರ್ಮ, ಪರಿವಾರದವರು ಮಹಾಗಣಪತಿ ಹೋಮ ಮತ್ತಿತರ ಪೂಜಾ ವಿಧಿ ವಿಧಾನವನ್ನು ನೆರವೇರಿಸಿದರು. ಕಾರ್ಖಾನೆ ಅಧಿಕಾರಿಗಳಾದ ಪಿ.ಎಸ್.ಮೇಯನ್, ಬಾಬುರಾಜ್, ಅಶೋಕ್‌ಕುಮಾರ್, ಆರ್.ಇ.ಕುಮಾರ್, ಕೆ.ಜಿ. ಮೋಹನ್, ರವಿಚಂದ್ರನ್‌ ಭಾಗವಹಿಸಿದ್ದರು.

ಇಂದು ಉಚಿತ ದಂತ ತಪಾಸಣೆ

ಮಂಡ್ಯ:

ಕಸ್ತೂರಿ ಸಿರಿಗನ್ನಡ ವೇದಿಕೆಯಿಂದ ಜೂ.೧೦ರಂದು ಬೆಳಗ್ಗೆ ೧೦.೩೦ಕ್ಕೆ ಹಳೇನಗರದ ಮೌಲಾನ ಅಜಾದ್ ಪ್ರೌಢಶಾಲೆ ಆವರಣದಲ್ಲಿ ಶಾಲಾ ಮಕ್ಕಳಿಗೆ ಉಚಿತ ದಂತ ಚಿಕಿತ್ಸಾ ತಪಾಸಣಾ ಶಿಬಿರ ನಡೆಯಲಿದೆ. ರಾಷ್ಟ್ರೀಯ ಬಸವದಳ ಜಿಲ್ಲಾಧ್ಯಕ್ಷ ಎಂ. ಗುರುಪ್ರಸಾದ್ ಸಮಾರಂಭ ಉದ್ಘಾಟಿಸುವರು. ಮುಖ್ಯಶಿಕ್ಷಕ ಡಿ.ಕೆ. ನಾಗರಾಜು ಅಧ್ಯಕ್ಷತೆ ವಹಿಸುವರು. ಕಸಿವೇ ರಾಜ್ಯಾಧ್ಯಕ್ಷ ಪೋತೇರ ಮಹದೇವು ಪ್ರಾಸ್ತಾವಿಕವಾಗಿ ಮಾತನಾಡುವರು. ದಂತ ವೈದ್ಯರಾದ ಡಾ. ನಿಸರ್ಗ ಅರುಣಾನಂದ ತಪಾಸಣೆ ನಡೆಸುವರು. ಕಾರಾಗೃಹ ಇಲಾಖೆಯ ಆರ್. ತಿಪ್ಪಣ್ಣ, ಎಚ್.ಆರ್.ಸುಮಅವರಿಗೆ ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಿವೇಕ್, ಸಮಾಜ ಸೇವಕಿ ಸುಧಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌