ಕನ್ನಡಪ್ರಭ ವಾರ್ತೆ ಮಂಗಳೂರು
ಭಾಷಾ ಅಲ್ಪ ಸಂಖ್ಯಾತ ಪ್ರದೇಶವಾದ ಗಡಿನಾಡಿನಲ್ಲಿ ಕನ್ನಡಿಗರು ಅನುಭವಿಸುವ ಸಮಸ್ಯೆಯನ್ನು ಸರ್ಕಾರದ ಮುಂದಿಟ್ಟುಕೊಂಡು ಕರ್ನಾಟಕ ಸಮಿತಿ ಮತ್ತು ವಿವಿಧ ಕನ್ನಡಪರ ಸಂಘ ಸಂಸ್ಥೆ ಹಾಗೂ ಪ್ರಮುಖರ ಸಹಭಾಗಿತ್ವದಲ್ಲಿ ಕಾಸರಗೋಡು ಕನ್ನಡಿಗರ ಹಕ್ಕೊತ್ತಾಯ ದಿನವನ್ನಾಗಿ ಶನಿವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆಸಲಾಯಿತು.ಕನ್ನಡದ ಅಸ್ಮಿತೆಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಈ ಬೃಹತ್ ಕಾರ್ಯಕ್ರಮದಲ್ಲಿ ಗಡಿನಾಡಿನ ಕನ್ನಡಿಗರು ಜಾತಿ,ಮತ, ಪ್ರಾಯ ಬೇಧ ಮರೆತು ಭಾಗವಹಿಸಿದರು.
ಕರ್ನಾಟಕ ಸಮಿತಿ ಅಧ್ಯಕ್ಷ ನ್ಯಾಯವಾದಿ ಕೆ.ಮುರಳಿಧರ ಬಳ್ಳಕುರಾಯರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಉದ್ಘಾಟಿಸಿದರು.ಕ.ಸಾ.ಪ.ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿದರು. ಗಮಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ಶಂಕರ ನಾರಾಯಣ ಭಟ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ್ ಅಡಪ,ರವೀಶ ತಂತ್ರಿ ಕುಂಟಾರು, ನ್ಯಾಯವಾದಿ ಶ್ರೀಕಾಂತ್ ಕಾಸರಗೋಡು, ಎಂ.ಸಂಜೀವ ಶೆಟ್ಟಿ ಮೊಟ್ಟಕುಂಜ, ಡಾ.ವೆಂಕಟರಮಣ ಹೊಳ್ಳ ಕಾಸರಗೋಡು, ವಿಶಾಲಾಕ್ಷ ಪುತ್ರಕಳ, ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು, ಗೋವಿಂದ ಪೈ ಸ್ಮಾರಕ ಕೇಂದ್ರದ ಉಮೇಶ್ ಸಾಲಿಯಾನ್, ಗಣೇಶ ಪ್ರಸಾದ್ ಪಾಣೂರು, ಬೇ.ಸಿ.ಗೋಪಾಲಕೃಷ್ಣ ಭಟ್,ಎನ್.ಕೆ.ಮೋಹನ್ ದಾಸ್,ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಸುಕೇಶ ಎ,ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಹಾಗೂ ವಿದ್ಯಾರ್ಥಿ ಸಂಘಟನೆಗಳು, ರಾಮನಾಥ ಸಾಂಸ್ಕೃತಿಕ ಭವನದ ಗುರುಪ್ರಸಾದ್ ಕೋಟೆಕ್ಕಣಿ, ನಗರ ಸಭಾ ಸದಸ್ಯೆ ಸವಿತಾ ಟೀಚರ್, ಬೊಲ್ಪು ಸಂಘಟನೆಯ ಸುಂದರ ಬಾರಡ್ಕ, ಕಾಸರಗೋಡು ಕನ್ನಡಿಗರು ಬಳಗದ ಜಯನಾರಾಯಣ ತಾಯನ್ನೂರು ಮತ್ತಿತರರು ಇದ್ದರು.
ಪತ್ರಕರ್ತ ವಿಜೀ ಕಾಸರಗೋಡು ನಿರೂಪಿಸಿದರು.ಬಳಿಕ ಜಿಲ್ಲಾಧಿಕಾರಿಯವರ ಕಚೇರಿಗೆ ತೆರಳಿ ಕೇರಳ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಭಾಷಾ ಅಲ್ಪ ಸಂಖ್ಯಾತ ಪ್ರದೇಶದ ಸಮಸ್ಯೆಗಳ ಪರಿಹಾರ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.