ಜ್ಞಾನ ಪ್ರಕಾಶ ಭವನದಲ್ಲಿ ನವ ದಶಮಾನೋತ್ಸವ
ಬ್ರಹ್ಮಕುಮಾರಿ ಸಂಸ್ಥೆ ವಿಶ್ವದ ಹಲವು ರಾಷ್ಟ್ರದಲ್ಲಿ ಪರಮಾತ್ಮ ಶಿವನ ಆರಾಧನೆಗೆ ತೆರೆದಿರುವ ಹಲವಾರು ಶಾಖೆಗಳು ಕೋಟ್ಯಂತರ ಜನರ ನೆಮ್ಮದಿಗೆ ಕಾರಣವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಹೇಳಿದರು.
ನಗರದ ಬಸವನಹಳ್ಳಿ ಸಮೀಪ ಜ್ಞಾನ ಪ್ರಕಾಶ ಭವನದಲ್ಲಿ ಭಾನುವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಿದ್ಧ ನವ ದಶಮಾನೋತ್ಸವದಲ್ಲಿ ಮಾತನಾಡಿ ಪುಟ್ಟ ಬಾಲಕನಿಂದ ವಯೋ ವೃದ್ಧರವರೆಗೂ ಬ್ರಹ್ಮಕುಮಾರಿ ಸಂಸ್ಥೆಯಲ್ಲಿ ಒಂದೇ ರೀತಿ ಶಾಂತತೆ ಕಾಪಾಡಲು ಅಲ್ಲಿನ ಆಧ್ಯಾತ್ಮಿಕ ಶಕ್ತಿಯೇ ಮೂಲ ಪ್ರೇರಣೆ. ಮಹಿಳೆಯರು ಸಮಾಜದಲ್ಲಿ ಎಲ್ಲಾ ಕ್ಷೇತ್ರ ಛಾಪುಮೂಡಿಸಿದ್ದು, ವಿಶೇಷವಾಗಿ ಬ್ರಹ್ಮಕುಮಾರಿ ಸಂಸ್ಥೆ ಪ್ರಪಂಚದಲ್ಲಿ ಮಹಿಳೆಯರ ಸಾರಥ್ಯದಲ್ಲಿ ಸಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಆತ್ಮ ಮತ್ತು ಪರಮಾತ್ಮ ಒಂದಾದರೆ ಜ್ಞಾನ ಬೆಳವಣಿಗೆಗೆ ಸಹಕಾರಿಯಾಗಲಿದೆ. ಮನುಷ್ಯನ ಹೃದಯಾಳದಲ್ಲೇ ಪರಮಾತ್ಮ ನೆಲೆಸಿದ್ದಾನೆ. ಅಲ್ಲದೇ ಭಾರತೀಯ ಸಂಸ್ಕೃತಿಯ ಪಂಚಭೂತಗಳಲ್ಲಿ ಭಗವಂತನನ್ನು ಕಾಣುವ ಬಹುದೊಡ್ಡ ಹಿನ್ನೆಲೆಯಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ರಹ್ಮಕುಮಾರಿ ಸಂಸ್ಥೆ ಜಿಲ್ಲಾ ಸಂಚಾಲಕಿ ಬಿ.ಕೆ. ಭಾಗ್ಯಲಕ್ಷ್ಮಿ ಮಹಾ ಶಿವರಾತ್ರಿ ಭಕ್ತಿ ಮಾರ್ಗದ ಒಂದು ಬದ್ಧತೆ ಆಚರಣೆ. ಶಿವರಾತ್ರಿ ಹಬ್ಬದ ಸಂಪೂರ್ಣ ಅರ್ಥ ಮತ್ತು ರಹಸ್ಯ ತಿಳಿದು ಆಚರಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು. ಈ ವೇಳೆ ಬ್ರಹ್ಮಕುಮಾರಿ ಸಂಸ್ಥೆ ಸದಸ್ಯ ನಂದಕುಮಾರ್, ಜಯಣ್ಣ, ಸಹಕಾಯ ಸಂಘದ ನಿಬಂದಕಿ ಡಾ.ತೇಜಸ್ವಿನಿ ಉಪಸ್ಥಿತರಿದ್ದರು.
ಫೋಟೋನಗರದ ಬಸವನಹಳ್ಳಿ ಸಮೀಪ ಜ್ಞಾನ ಪ್ರಕಾಶ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿ ಸಹಯೋಗದಲ್ಲಿ ನಡೆದ ನವ ದಶಮಾನೋತ್ಸವದಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಮಾತನಾಡಿದರು. ಬ್ರಹ್ಮಕುಮಾರಿ ಸಂಸ್ಥೆ ಜಿಲ್ಲಾ ಸಂಚಾಲಕಿ ಬಿ.ಕೆ. ಭಾಗ್ಯಲಕ್ಷ್ಮಿ, ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ನಂದಕುಮಾರ್, ಜಯಣ್ಣ ಮೊದಲಾದವರಿದ್ದರು.