- ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ಪ್ರಾಧ್ಯಾಪಕಿ ಡಾ. ಜಿ.ಎಸ್. ಲತಾ ಮಾಹಿತಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಗುರುವಾರ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ "ಸ್ತನ್ಯಪಾನದ ಅಂತರವನ್ನು ಕಡಿಮೆಗೊಳಿಸಿ, ಎದೆ ಹಾಲುಣಿಸಲು ತಾಯಂದಿರನ್ನು ಪ್ರೋತ್ಸಾಹಿಸಿ " ವಿಷಯ ಕುರಿತು ಅವರು ಮಾತನಾಡಿದರು.
ಸ್ತನ್ಯಪಾನ ಮಗುವಿನ ಉತ್ತಮ ಆರೋಗ್ಯಕ್ಕೆ ಸೋಪಾನ ಮಾತ್ರವಲ್ಲ, ಹೆರಿಗೆ ನಂತರ ಹಾಲುಣಿಸುವುದರಿಂದ ತಾಯಂದಿರಲ್ಲಿ ರಕ್ತಸ್ರಾವ ಕಡಿಮೆ ಮಾಡಿ, ತಾಯಂದಿರ ಮರಣವನ್ನು ತಪ್ಪಿಸಲು ಸಹಾಯಕವಾಗಲಿದೆ. ತಾಯಿ ಹಾಲಿನಲ್ಲಿರುವ ಸಾಕಷ್ಟು ಪೌಷ್ಠಿಕಾಂಶಗಳು ಮಗುವಿನ ಬೆಳವಣಿಗೆಗೆ ಸಹಕರಿಸುತ್ತವೆ. ಮಗುವಿನ ಆರೋಗ್ಯವನ್ನು ಕಾಪಾಡುತ್ತದೆ. ಹಸುವಿನ ಹಾಲಿಗಿಂತ ಬೇಗ ತಾಯಿಯ ಹಾಲು ಜೀರ್ಣ ಆಗುವುದರಿಂದ ಮಗುವಿಗೆ ತಾಯಿಯ ಹಾಲು ಉತ್ತಮ ಎಂದು ಹೇಳಿದರು.ಎದೆಹಾಲು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮ್ಕಕಳ ಅತಿಸಾರ, ಶೀತ, ಕಫ ಮತ್ತು ಇತರೆ ಬ್ಯಾಕ್ಟಿರೀಯಾ, ವೈರಸ್ ದಾಳಿಯಿಂದ ಕಾಪಾಡುತ್ತದೆ. ಇತರೆ ಸಾಂಕ್ರಾಮಿಕ ರೋಗಗಳಿಂದ ಕೂಡ ರಕ್ಷಣೆ ಸಿಗುತ್ತದೆ. ಮುಂದೆ ಸಕ್ಕರೆ, ರಕ್ತದೊತ್ತಡ ಕಾಯಿಲೆಗಳು ಕಡಿಮೆ ಪ್ರಮಾಣದಲ್ಲಿ ಇರುವುದು ಕಂಡುಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರದ ನಿರ್ದೇಶಕ ಡಾ. ಜಿ.ಗುರುಪ್ರಸಾದ್, ಡಾ.ಸುರೇಶ್ ಬಾಬು, ಡಾ.ಕೌಜಲಗಿ, ಡಾ. ಎ.ಎಸ್. ಮೃತ್ಯುಂಜಯ, ಡಾ.ಮೂಗನಗೌಡ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಅಂಜಲಿ ಇತರರು ಇದ್ದರು.
ಕೋಟ್ ಆ.1ರಿಂದ 7ರವರೆಗೆ ಸ್ತನ್ಯಪಾನ ಸಪ್ತಾಹ ಜಾಗತಿಕವಾಗಿ ಆಚರಿಸಲಾಗುವುದು. ಸಪ್ತಾಹದಲ್ಲಿ ತಾಯಂದಿರು ಶಿಶುಗಳಿಗೆ ಸ್ತನ್ಯಪಾನವನ್ನು ಮಾಡಿಸಲು ಪ್ರೇರೇಪಿಸುವುದು, ತಾಯಿ ಹಾಲಿನ ಮಹತ್ವ ತಿಳಿಸುವುದು ಹಾಗೂ ಸ್ತನ್ಯ ಪಾನ ಕುರಿತಾದ ಜಾಗೃತಿ ಮೂಡಿಸುವುದ ಮುಖ್ಯ ಉದ್ದೇಶ
- ಡಾ. ಜಿ.ಎಸ್. ಲತಾ, ಪ್ರಾಧ್ಯಾಪಕಿ- - --6ಕೆಡಿವಿಜಿ42, 43ಃ: