ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಅಹಿಲ್ಯಾಬಾಯಿ ಹೋಳ್ಕರ್ ವೃತ್ತದಲ್ಲಿ ಭಾನುವಾರ ರಾಜಮಾತಾ ಅಹಿಲ್ಯಾಬಾಯಿ ಹೋಳ್ಕರ್ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ ನಗರದಲ್ಲಿ ಮಹಾರಾಷ್ಟ್ರಕ್ಕೆ ಸೀಮಿತವಾಗಿದ್ದ ಹಿಂದೂ ಧರ್ಮ ರಕ್ಷಕಿ ಅಹಿಲ್ಯಾಬಾಯಿ ಹೋಳ್ಕರ್ ಅವರ ಇತಿಹಾಸ ರಾಜ್ಯದಲ್ಲಿಯೂ ಪ್ರಚುರಪಡಿಸಲು ಅವರ ವೃತ್ತ ಸೇರಿದಂತೆ ಅನೇಕ ಮಹಾಪುರುಷರ, ಸ್ವಾತಂತ್ರ್ಯ ಹೋರಾಟಗಾರರ, ನಾಡಿಗಾಗಿ ಸೇವೆ ಸಲ್ಲಿಸಿದ ಮಹನೀಯರ ವೃತ್ತಗಳ ಸ್ಥಾಪನೆ, ರಸ್ತೆಗಳಿಗೆ ಹೆಸರು ನಾಮಕರಣ ಮಾಡಲಾಗಿದೆ. ರಾಯಣ್ಣನವರ ಮೂರ್ತಿ ಬಾಕಿಯಿದ್ದು, 2027ರ ಅಗಸ್ಟ್ 15 ರಂದು ಅದನ್ನೂ ಮಾಡುವುದಾಗಿ ತಿಳಿಸಿದರು.
ಭಾರತದ ಇತಿಹಾಸದಲ್ಲಿ ರಾಜಮಾತಾ ಅಹಿಲ್ಯಾಬಾಯಿ ಹೋಳ್ಕರ್ ಅವರು ನಡೆಸಿದ 35 ವರ್ಷಗಳ ಸುಧೀರ್ಘ ಆಡಳಿತ ಕಾಲವನ್ನು ಸುವರ್ಣ ಯುಗ ಎಂದು ಕರೆಯಲಾಗುತ್ತದೆ. ಅಹಿಲ್ಯಾಬಾಯಿ ಅವರು ಸಮರ್ಥ ಆಡಳಿತಗಾರರಾಗಿದ್ದರು. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ, ಮಹಿಳಾ ಸೈನ್ಯವನ್ನು ಕಟ್ಟಿದರು. ಕೃಷಿ, ವ್ಯಾಪಾರ ಮತ್ತು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದರು. ಉತ್ತಮ ಆಡಳಿತ, ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಸಾಮಾಜಿಕ ಕಾರ್ಯಗಳಿಗೆ ಪ್ರಸಿದ್ಧರಾಗಿದ್ದರು. ಅವರ ಜನಪರ ಹಾಗೂ ದೈವಿಕ ಕಾರ್ಯಗಳನ್ನು ಪರಿಗಣಿಸಿ ಲೋಕಮಾತಾ ಎಂದು ಗೌರವದಿಂದ ಕರೆಯಲಾಗುತ್ತದೆ ಎಂದರು.ಇದೇ ವೇಳೆ ಸಮುದಾಯದ ಮುಖಂಡರನ್ನು ಸನ್ಮಾನಿಸಲಾಯಿತು. ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಕುರಿ ನೇತೃತ್ವ ವಹಿಸಿದ್ದರು. ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ, ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಜವಾಹರ ಗೋಸಾವಿ, ರಾಹುಲ ಜಾಧವ, ಮುಖಂಡರಾದ ಅಶೋಕ ಬೆಲ್ಲದ, ರಮೇಶ ಪಡಸಲಗಿ, ರಮೇಶ ವೀರಕರ, ಸೋಮು ರಣದೇವಿ, ರಾಜಶೇಖರ ಭಜಂತ್ರಿ, ನಾಗರಾಜ ಮುಳವಾಡ, ಶಂಕರ ಬಾಡಗಂಡಿ, ಮಾಂತೇಶ ಒಣರೊಟ್ಟಿ, ಗಿರೀಶ ಕೆಳಗಡೆ ಸೇರಿದಂತೆ ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಅಹಿಲ್ಯಾಬಾಯಿ ಹೋಳ್ಕರ್ ಮಹಿಳೆಯರು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಮಂತ್ಲಿ ಫಿಕ್ಸ್ ಮಾಡಿಯೂ ಸಚಿವ ಸ್ಥಾನ ಕೊಡಬಹುದು
ಡಿ.ಕೆ.ಶಿವಕುಮಾರ ಸಿಎಂ ಆಗುತ್ತಿರುವ ಸಂತೋಷ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಇದೆ. ಡಿಕೆಶಿ ಮೊದಲ ಫೋನ್ ಹೋಗಿದ್ದೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ. ತಂದೆ ಫ್ರೆಂಡ್ ಹೋದ್ರು, ನನ್ನ ಪಾಟ್ನರ್ ಬಂದ್ರು, ಡಿಕೆಶಿ ಸಿಎಂ ಆಗಿದ್ದಕ್ಕೆ ಮುಸ್ಲಿಂರು ಸಂಭ್ರಮಿಸಿದ್ದಾರೆ. ಸಿದ್ದರಾಮಯ್ಯ ಮುಸ್ಲಿಂರಿಗೆ ಬಹಳ ಮಾಡಿದ್ದಾರೆ. ಒಬ್ಬ ಮುಸ್ಲಿಂ ವಿರೋಧಿಸಲಿಲ್ಲ, ಹಿಂದೂಗಳು ಹೀನಾಯವಾಗಿ ಸಿದ್ದರಾಮಯ್ಯ ಬಗ್ಗೆ ಮಾತನಾಡಲ್ಲ. ನಾನು ಸಿದ್ದರಾಮಯ್ಯ ವಿರುದ್ಧ ಮಾತನಾಡಲ್ಲ. ನಮ್ಮ ಫೈಲ್ ಗಳಿದ್ದರೂ ಯತ್ನಾಳ ಫೈಲ್ ತೆಗೆದುಕೊಂಡು ಬನ್ನಿ ಎನ್ನುತ್ತಿದ್ರು. ಈಗ ಬೇರೆಯವರ ಫೈಲ್‌ಗಳು ಓಪನ್ ಆಗ್ತಾವೆ ಹುಷಾರ್ ಎಂದು ಯತ್ನಾಳ ಹೇಳಿದರು.