ಮಣಬೂರು ಗ್ರಾಮದಲ್ಲಿ ನೂತನ ಟವರ್ ವೀಕ್ಷಿಸಿದ ಸಂಸದಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಚಿಕ್ಕಮಗಳೂರು ಜಿಲ್ಲೆ ವಿವಿಧೆಡೆಗಳಲ್ಲಿ ಈಗಾಗಲೇ ಸಾಕಷ್ಟು ಬಿಎಸ್‌ಎನ್‌ಎಲ್ ಟವರ್ ನಿರ್ಮಾಣ ಮಾಡಿದ್ದು, ಹಲವು ಕಡೆಗಳಲ್ಲಿ ಈಗಾಗಲೇ ಕಾರ್ಯಾರಂಭಗೊಳಿಸಲಾಗಿದೆ. ಅಗತ್ಯವಿರುವೆಡೆ ಇನ್ನಷ್ಟು ಟವರ್ ನಿರ್ಮಿಸಲಾಗುವುದು. ಕ್ಷೇತ್ರದಲ್ಲಿ ಕೇವಲ ಬಿಎಸ್ ಎನ್‌ಎಲ್ ಟವರ್‌ಗಳ ನಿರ್ಮಾಣ ಮಾತ್ರವಲ್ಲದೇ ಗ್ರಾಮೀಣ ರಸ್ತೆಗಳು, ಹಲವಾರು ಮುಖ್ಯರಸ್ತೆ ಅಭಿವೃದ್ಧಿ ಗಾಗಿ ಕೋಟ್ಯಂತರ ಅನುದಾನ ತರಲಾಗಿದೆ. ವಿವಿಧ ನೂತನ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ. ಅವುಗಳ ಕಾಮಗಾರಿ ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಶಿವಮೊಗ್ಗ-ಶೃಂಗೇರಿ-ಮಂಗಳೂರು ನೂತನ ರೈಲ್ವೇ ಮಾರ್ಗಕ್ಕೆ ಈಗಾಗಲೇ ಕಾರ್ಯ ಆರಂಭಗೊಂಡಿದೆ. ಕ್ಷೇತ್ರದ ಸಾರ್ವಜನಿಕರು ಎನ್.ಆರ್.ಪುರ-ಶೃಂಗೇರಿ ಮಾರ್ಗವಾಗಿ ಮಾರ್ಗ ರೂಪಿಸುವಂತೆ ಕೋರಿದ್ದಾರೆ. ಈ ಬಗ್ಗೆ ರೇಲ್ವೇ ಸಚಿವ ಸೋಮಣ್ಣ ಅವರಿಗೆ ಮನವಿ ಮಾಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಂಸದರಿಗೆ ಪ್ರಮುಖವಾಗಿ ಹುಯಿಗೆರೆ ಪಿಎಸಿಎಸ್‌ಗೆ ಜಾಗ ಮಂಜೂರಿಗೆ, ಮಾವಿನಕಟ್ಟೆ-ಮಣಬೂರು-ಬಿಕ್ಕರಣೆ-ಸಾರಗೋಡು ಮಾರ್ಗವಾಗಿ 15 ಕಿಮೀ ರಸ್ತೆಗೆ ಮನವಿ ಸಲ್ಲಿಸಿದರು. ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯ ವಿನೋದ್ ಬೊಗಸೆ, ಪಿಎಂ ವಿಶ್ವಕರ್ಮ ಯೋಜನೆ ಜಿಲ್ಲಾ ಸಮಿತಿ ಸದಸ್ಯ ಭಾಸ್ಕರ್ ವೆನಿಲ್ಲಾ, ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ, ಪ್ರಮುಖರಾದ ದೀಪಕ್ ದೊಡ್ಡಯ್ಯ, ಅರುಣ್‌ಕುಮಾರ್, ಮಣಬೂರು ರಾಜು, ಎಂ.ಆರ್.ಸುರೇಂದ್ರ, ಎಂ.ಆರ್.ಮಹೇಶ್, ಬಿ.ಎಚ್.ಶಂಕರ್, ಸುರೇಶ್, ಎಂ.ಎಂ.ಸಂದೀಪ್, ವಾಸು ಹುಯಿಗೆರೆ, ಪ್ರಭಾಕರ್ ಪ್ರಣಸ್ವಿ ಮತ್ತಿತರರು ಹಾಜರಿದ್ದರು.೦೨ಬಿಹೆಚ್‌ಆರ್ ೫:ಬಾಳೆಹೊನ್ನೂರು ಸಮೀಪದ ಹುಯಿಗೆರೆ ಗ್ರಾಪಂ ವ್ಯಾಪ್ತಿಯ ಮಣಬೂರು ಗ್ರಾಮಕ್ಕೆ ನೂತನ ಬಿಎಸ್‌ಎನ್‌ಎಲ್ ಟವರ್ ಮಂಜೂರು ಮಾಡಿದ ಸಂಸದ ಕೋಟಾ ಶ್ರೀನಿವಾಸಪೂಜಾರಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ವಿನೋದ್, ಭಾಸ್ಕರ್ ವೆನಿಲ್ಲಾ, ಮಣಿಕಂಠನ್, ದೀಪಕ್, ಅರುಣ್‌ಕುಮಾರ್, ವಾಸು ಮತ್ತಿತರರು ಇದ್ದರು.