ಚಾಮರಾಜನಗರ: ಜಗತ್ತಿನಲ್ಲಿ ನೆಮ್ಮದಿಯ ಬದುಕಿಗೆ ಬುದ್ಧನ ಮಾರ್ಗವೇ ಸನ್ಮಾರ್ಗವಾಗಿದೆ. ಭಗವಾನ್ ಗೌತಮ ಬುದ್ಧರು ಜಗತ್ತಿಗೆ ಜ್ಞಾನದ ಬೆಳಕನ್ನು ಬೋಧಿಸಿದ ದಿನವೇ ಧಮ್ಮ ಚಕ್ಕ ಪವತ್ತನಾ ಸುತ್ತ ದಿನವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.ನಗರದ ಸಾರಾನಾಥ ಬೌದ್ಧ ವಿಹಾರದಲ್ಲಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ ವತಿಯಿಂದ ನಡೆದ ಧಮ್ಮ ಚಕ್ಕ ಪವತ್ತನಾ ಸುತ್ತ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವದ ನಾನಾ ಬೌದ್ಧ ರಾಷ್ಟ್ರಗಳು ಮತ್ತು ಭಾರತ ದೇಶದ ಬೌದ್ಧ ವಿಹಾರಗಳಲ್ಲಿ ಧಮ್ಮ ಚಕ್ಕ ಪವತ್ತನಾ ಸುತ್ತ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಧಮ್ಮ ಚಿಂತಕರಾದ ಮಹದೇವು ಕಲ್ಲಾರೆಪುರೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ ಅಧ್ಯಕ್ಷ ಆರ್.ಬಸವರಾಜು, ಬೌದ್ಧ ಬಂಧುಗಳು ಭಾಗವಹಿಸಿದ್ದರು.