ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಿನಕುರಳಿ ಗ್ರಾಮದ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ವಿಭಾಗವು ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಘಟಕದಿಂದ ನಡೆದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಓದಿರುವ ನಮ್ಮ ಮಕ್ಕಳು ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನಂತಹ ದೊಡ್ಡ ಪಟ್ಟಣಗಳಲ್ಲಿ ಉತ್ತಮ ಸಂಬಳ ಪಡೆದು ಕೆಲಸ ನಿರ್ವಹಿಸುತ್ತಿರುವುದನ್ನು ಸ್ವತಃ ಅವರ ಬಾಯಿಂದಲೇ ಕೇಳಿದಾಗ ಆಗುವ ಸಂತಸ ಮತ್ಯಾವುದೂ ಇಲ್ಲ ಎಂದರು.ನಮ್ಮ ಕಾಲೇಜಿನಲ್ಲಿ ಓದು ಮುಗಿಸಿ ಹೋದ ಮೇಲು ನಿಮ್ಮ ಮುಂದಿನ ಭವಿಷ್ಯದ ಬದುಕಿಗೆ ನಮ್ಮ ನೆರವು ನಿರಂತರವಾಗಿರುತ್ತದೆ ಎಂದರು.
ಸಂಸ್ಥೆ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸಿ.ಪಿ.ಶಿವರಾಜು ಅವರಿಗೆ ಕೃತಜ್ಞತೆ ಅರ್ಪಿಸಿದರು.
ವಿಧಾನ ಪರಿಷತ್‌ಗೆ ನಾರಾಯಣ ನಾಮನಿರ್ದೇಶನಕ್ಕೆ ಒತ್ತಾಯ
ಚಾಮರಾಜನಗರ ವಿಧಾನ ಸಭಾ ಕ್ಷೇತ್ರದಿಂದ ಸಫಾಯಿ ಕರ್ಮಚಾರಿ ಸಮುದಾಯದ ಸಾಲಪ್ಪ ಅವರು ೧೯೭೦-೮೦ರ ದಶಕದಲ್ಲಿ ಶಾಸಕರಾಗಿದ್ದರು. ನಂತರ ರಾಜ್ಯವನ್ನಾಳಿದ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಗಳು ಈ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ನೀಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.ರಾಜ್ಯದ ಸರ್ಕಾರಿ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ೭೦ ಸಾವಿರಕ್ಕೂ ಹೆಚ್ಚು ಮಂದಿ ಹಾಗೂ ೩ ಲಕ್ಷಕ್ಕೂ ಹೆಚ್ಚು ಮಂದಿ ಖಾಸಗಿ ವಲಯಗಳಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಾರೆ. ಇವರ ಸಮಸ್ಯೆಗಳ ಬಗ್ಗೆ ದನಿಯಾಗಿ ಯಾರೂ ರಾಜಕೀಯ ವಲಯದಲ್ಲಿ ಇಲ್ಲ. ಆದ್ದರಿಂದ ನಾರಾಯಣ ಅವರನ್ನು ಕಾಂಗ್ರೆಸ್ ಸರ್ಕಾರ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕೆಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಜಿಲಾಧ್ಯಕ್ಷ ರಂಗಸ್ವಾಮಿ, ಎಂ.ಗಣೇಶ್, ಶಂಕರ್, ಲಕ್ಷ್ಮಣಮೂರ್ತಿ ಇದ್ದರು.