ಯೋಗ-ಧ್ಯಾನದಿಂದ ಸುಂದರ ಸಮಾಜ ನಿರ್ಮಾಣ

KannadaprabhaNewsNetwork |  
Published : Jun 22, 2025, 01:18 AM IST
ಅದಸ್ಸರಗಹಬತಗಹನತ | Kannada Prabha

ಸಾರಾಂಶ

ಯೋಗವು ನಮ್ಮ ದುಃಖವನ್ನು ನಾಶ ಮಾಡಿ ಹಲವು ಕಾಯಿಲೆ ನಿವಾರಿಸುತ್ತದೆ. ಯೋಗ ಮತ್ತು ಧ್ಯಾನದಿಂದ ಸುಂದರ ಸಮಾಜ ನಿರ್ಮಾಣವಾಗುತ್ತದೆ.

ಹನುಮಸಾಗರ:

ಯೋಗಿ ಫಲಾಪೇಕ್ಷೆ ಇಲ್ಲದೆ ಯೋಗ ಕಲಿಸಬೇಕು ಎಂದು ಜ್ಞಾನದಾಯಿನಿ ಸಂಸ್ಕೃತ ಶಾಲೆಯ ಪಂ. ಪ್ರಹ್ಲಾದಾಚಾರ್ಯ ಪೂಜಾರ ಹೇಳಿದರು.

ಗ್ರಾಮದ ಸರ್ಕಾರಿ ಪಬ್ಲಿಕ್ ಶಾಲಾ ಆವರಣದಲ್ಲಿ ಆದಿತ್ಯ ಯೋಗ ಮತ್ತು ಸಂಸ್ಕೃತಿ ಸಂಸ್ಥೆ ವತಿಯಿಂದ ನಡೆದ ಅಂತಾರಾಷ್ಟ್ರೀಯ ವಿಶ್ವ ಯೋಗಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಗವು ನಮ್ಮ ದುಃಖವನ್ನು ನಾಶ ಮಾಡಿ ಹಲವು ಕಾಯಿಲೆ ನಿವಾರಿಸುತ್ತದೆ. ಯೋಗ ಮತ್ತು ಧ್ಯಾನದಿಂದ ಸುಂದರ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಶಿವಕುಮಾರ ದೇವರು, ವಿಶ್ವಕ್ಕೆ ಯೋಗ ಪರಿಚಯಿಸಿದ್ದು ಭಾರತ ಎಂಬುದು ಹೆಮ್ಮೆಯ ವಿಷಯ ಎಂದರು.

ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಯೋಗ ಗುರು ಶಿವಶಂಕರ ಮೆದಿಕೇರಿ, ಆದಿತ್ಯ ಯೋಗ ಮತ್ತು ಸಂಸ್ಕೃತಿ ಸಂಸ್ಥೆ ಅಧ್ಯಕ್ಷ ಸತೀಶ ಜಮಖಂಡಿಕರ, ಬಸವರಾಜ ಹಳ್ಳೂರ, ಸೂಚಪ್ಪ ದೇವರಮನಿ, ನಿವೃತ್ತ ಶಿಕ್ಷಕ ಅಬ್ದುಲಕರಿಂ ಒಂಟೆಳ್ಳಿ, ಆನಂದ ಕಾಟ್ವಾ, ನಿಸರ್ಗ ಸಂಗೀತ ಶಾಲೆಯ ಅಧ್ಯಕ್ಷ ಮಲ್ಲಯ್ಯ ಕೋಮಾರಿ, ಮಹಾತಯ್ಯ ಕೋಮಾರಿ, ಈರಣ್ಣ ಹುನಗುಂಡಿ, ಬಸವರಾಜ ಸಿನ್ನೂರ, ಹೂವಪ್ಪ, ದೈಹಿಕ ಶಿಕ್ಷಕ ತಿಪ್ಪಣ್ಣ ಪಾಲಕರ, ಬಸವರಾಜ ಬಂಡಿವಡ್ಡರ, ಡಾ. ಶಂಕರ ಹುಲಮನಿ ಇದ್ದರು.

ಮಿಯ್ಯಾಪುರ ಶಾಲೆ:

ಯೋಗವು ಮನಸ್ಸು, ದೇಹ ಮತ್ತು ಆತ್ಮವನ್ನು ಒಟ್ಟಿಗೆ ತರಲು ಪ್ರಯತ್ನಿಸುವ ಪ್ರಕ್ರಿಯೆಯಾಗಿದೆ ಎಂದು ಯೋಗ ತರಬೇತುದಾರ ಏಕನಾಥ ಮೇದಿಕೇರಿ ಹೇಳಿದರು.

ಸಮೀಪದ ಮಿಯ್ಯಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಯೋಗ ಎಂದರೆ ಒಗ್ಗೂಡಿಸುವುದು. ದೇಹ ಮತ್ತು ಮನಸ್ಸು ಏಕತೆಯ ಪ್ರಜ್ಞೆಯೊಂದಿಗೆ ದೇಹದ ಅಂತಿಮ ಒಕ್ಕೂಟವನ್ನು ಸೂಚಿಸುವುದು. ಇದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಮುಖ್ಯ ಶಿಕ್ಷಕ ಖಾಜಾಹುಸೇನ ಒಂಟೆಳಿ, ಯೋಗವು ತಕ್ಷಣದ ಮಾನಸಿಕ ಪ್ರಯೋಜನ ಹೊಂದಿದೆ. ಆತಂಕ ಮತ್ತು ಒತ್ತಡ ಕಡಿಮೆ ಮಾಡುತ್ತದೆ ಎಂದರು.

ಹಿರಿಯ ಶಿಕ್ಷಕ ನಾಗನಗೌಡ ಪೊಲೀಸ್‌ಪಾಟೀಲ, ಶಾಂತಬಾಯಿ ಪಟ್ಟಣಶೆಟ್ಟಿ, ಪರಶುರಾಮಪ್ಪ ನಾಗಣ್ಣನವರ, ಲಕ್ಷ್ಮಿ ವಾಲಿಕಾರ, ಸಂಗಮ್ಮ ಮಣ್ಣೇರಿ, ಲಕ್ಷ್ಮಿ ಮಾಲಿಪಾಟೀಲ, ಸಿದ್ದಮ್ಮ ರಾಮವಾಡಗಿ ಉಪಸ್ಥಿತರಿದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ