ಸೆಪ್ಟೆಂಬರ್‌ 23 ರಂದು ಗುಂಡ್ಲುಪೇಟೆಯಲ್ಲಿ ರೈತರಿಂದ ಎತ್ತಿನಗಾಡಿ, ಟ್ರ್ಯಾಕ್ಟರ್‌ ಮೆರವಣಿಗೆ

KannadaprabhaNewsNetwork |  
Published : Sep 23, 2024, 01:22 AM IST
ರೈತರ ಅಹೋರಾತ್ರಿ ಪ್ರತಿಭಟನೆ ಜಿಲ್ಲಾಡಳಿತ ಮೌನ ಖಂಡಿಸಿ ಇಂದು ಎತ್ತಿನಗಾಡಿ,ಟ್ರ್ಯಾಕ್ಟರ್‌ ಮೆರವಣಿಗೆ | Kannada Prabha

ಸಾರಾಂಶ

ಕಳೆದ ೧೦ ದಿನದಿಂದ ರೈತ ಸಂಘ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಶನಿವಾರಕ್ಕೆ ೧೧ ದಿನಕ್ಕೇ ಕಾಲಿಟ್ಟಿದ್ದು, ಸೆ.23ರ ಸೋಮವಾರ ಗುಂಡ್ಲುಪೇಟೆಯಲ್ಲಿ ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ ಚಳವಳಿ ನಡೆಸಲು ಜಿಲ್ಲಾ ರೈತ ಸಂಘ ನಿರ್ಧರಿಸಿದೆ.

೧೦ನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮುಂಗಾರು ಮಳೆ, ಗಾಳಿಗೆ ಬೆಳೆ ನಷ್ಟ ತುಂಬಿಲ್ಲ, ಬೆಳೆ ವಿಮೆ ಹಣ ರೈತರ ಖಾತೆಗೆ ಜಮಾ ಮಾಡದಿರುವುದನ್ನು ಖಂಡಿಸಿ ಕಳೆದ ೧೦ ದಿನದಿಂದ ರೈತ ಸಂಘ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಶನಿವಾರಕ್ಕೆ ೧೧ ದಿನಕ್ಕೇ ಕಾಲಿಟ್ಟಿದ್ದು, ಸೆ.23ರ ಸೋಮವಾರ ಪಟ್ಟಣದಲ್ಲಿ ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ ಚಳವಳಿ ನಡೆಸಲು ಜಿಲ್ಲಾ ರೈತ ಸಂಘ ನಿರ್ಧರಿಸಿದೆ.

ಕಳೆದ ೯ ದಿನಗಳಿಂದಲೂ ಪಟ್ಟಣದ ಪ್ರಜಾ ಸೌಧದ ಆವರಣದಲ್ಲಿ ರೈತ ಸಂಘ ಅಹೋರಾತ್ರಿ ಧರಣಿ ನಡೆಸುತ್ತಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಕ್ಷೇತ್ರದ ಶಾಸಕರು ಮೌನ ವಹಿಸಿರುವುದನ್ನು ಖಂಡಿಸಿ ಸೆ.೨೩ ಸೋಮವಾರ ರೈತರು ಬೀದಿಗಿಳಿದು ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ ಮೆರವಣಿಗೆ ನಡೆಸಲು ರೈತರು ತೀರ್ಮಾನಿಸಿದ್ದಾರೆ ಎಂದು ಪ್ರತಿಭಟನಾ ಸ್ಥಳದಲ್ಲಿ ಜಿಲ್ಲಾಡಳಿತ ವಿರುದ್ಧ ರೈತ ಸಂಘ ಆಕ್ರೋಶ ಹೊರಹಾಕಿದೆ.

ರೈತರೇನು ಸಂವಿಧಾನದಡಿಯಲ್ಲಿ ಹಕ್ಕುಗಳ ಕೇಳಲು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಜಿಲ್ಲಾಡಳಿತ ರೈತರ ಪಾಲಿಗೆ ಇದ್ದು ಇಲ್ಲದಂತಾಗಿದೆ. ರೈತರ ಸಮಸ್ಯೆಗೆ ಸ್ಪಂದಿಸಬೇಕಾದ ಶಾಸಕರು,ಸಂಸದರೂ ಕೂಡ ಚಕಾರ ಎತ್ತದೆ ಮೌನ ವಹಿಸಿರುವುದನ್ನು ಖಂಡಿಸಿ ರೈತರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ ಎಂದರು. ರೈತ ಸಂಘದ ಹಂಗಳ ದಿಲೀಪ್‌, ಮಾಧು, ಭರತ್‌ ಸೇರಿದಂತೆ ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ