ಬಸ್ ಟಿಕೆಟ್ ದರ ದುಬಾರಿ, ಪ್ರಯಾಣಿಕರ ಜೇಬಿಗೆ ಕತ್ತರಿ

KannadaprabhaNewsNetwork |  
Published : Nov 05, 2026, 02:30 AM IST
ಎನ್‌. ರೂಪೇಶ್‌ ಕುಮಾರ್‌, ಅಧ್ಯಕ್ಷರು, ನಗರಸಭೆ- ಹೊಸಪೇಟೆ. (4ಎಚ್‌ಪಿಟಿ4 ಎನ್‌. ರೂಪೇಶ್‌ ಕುಮಾರ್‌ ಅವರ ಭಾವಚಿತ್ರ | Kannada Prabha

ಸಾರಾಂಶ

ನ.5 ರಿಂದ ಜಾರಿಗೆ ಬರುವ ಬಸ್‌ ಪ್ರಯಾಣ ದರ ಏರಿಕೆ ಸರ್ಕಾರ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದ್ದು, ಸಾರಿಗೆ ಬಸ್ ದರದಲ್ಲಿ ಭಾರೀ ಏರಿಕೆ ಮಾಡಲಾಗಿದೆ.

ಸಿ.ಕೆ. ನಾಗರಾಜ ಹೊಸಪೇಟೆ

ರಾಜ್ಯ ಸರ್ಕಾರ ಹಾಲು, ಮೊಸರಿನ ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ ಸಾರಿಗೆ ಬಸ್ ಪ್ರಯಾಣ ದರ ಸಹ ಹೆಚ್ಚಳ ಮಾಡಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ.

ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಇನ್ನಿತರ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಈಗ ಎದುರಾಗಿದೆ.

ನ.5 ರಿಂದ ಜಾರಿಗೆ ಬರುವ ಬಸ್‌ ಪ್ರಯಾಣ ದರ ಏರಿಕೆ ಸರ್ಕಾರ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದ್ದು, ಸಾರಿಗೆ ಬಸ್ ದರದಲ್ಲಿ ಭಾರೀ ಏರಿಕೆ ಮಾಡಲಾಗಿದೆ. ಇದು ಪ್ರಯಾಣಿಕರಿಗೆ ಹೊರೆ ಎನಿಸಿದೆ. ದಿನನಿತ್ಯ ಕೆಲಸ, ಉದ್ಯೋಗ, ಶಿಕ್ಷಣ ಹಾಗೂ ವಿವಿಧ ಕಾರ್ಯಗಳಿಗಾಗಿ ಬಸ್‌ಗಳನ್ನೇ ಅವಲಂಬಿಸಿರುವ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಸಾರಿಗೆ ಬಸ್‌ಗಳ ಟಿಕೆಟ್ ದರ ಹೆಚ್ಚಳದಿಂದ ಸಾಮಾನ್ಯ ಪ್ರಯಾಣಿಕರ ಜೇಬಿಗೆ ನೇರವಾಗಿ ಕತ್ತರಿ ಬಿದ್ದಂತಾಗಿದೆ. ವಿಶೇಷವಾಗಿ ಪ್ರತಿದಿನ ಕೆಲಸಕ್ಕೆ ಹೋಗುವ ಕಾರ್ಮಿಕರು, ಖಾಸಗಿ ಸಂಸ್ಥೆಗಳ ನೌಕರರು, ಸಣ್ಣ ವ್ಯಾಪಾರಿಗಳು ಹಾಗೂ ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ಸಂಚರಿಸುವ ಜನರು ಹೆಚ್ಚುವರಿ ಹಣ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಈಗಾಗಲೇ ಮನೆ ಬಾಡಿಗೆ, ದಿನಸಿ ಸಾಮಗ್ರಿ, ವಿದ್ಯುತ್ ಬಿಲ್, ಮಕ್ಕಳ ಶಿಕ್ಷಣ ಸೇರಿದಂತೆ ವಿವಿಧ ಖರ್ಚು ನಿಭಾಯಿಸಲು ಪರದಾಡುತ್ತಿರುವ ಮಧ್ಯಮ ವರ್ಗದ ಕುಟುಂಬಗಳಿಗೆ ಸಾರಿಗೆ ವೆಚ್ಚದ ಹೆಚ್ಚಳ ಆರ್ಥಿಕ ಸಂಕಷ್ಟ ಹೆಚ್ಚಿಸುವ ಆತಂಕ ಮೂಡಿಸಿದೆ.

ಬಸ್ ಟಿಕೆಟ್ ದರ ಏರಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಗ್ಯಾರಂಟಿ ಯೋಜನೆ ನಮಗೆ ಫ್ರೀ ಬೇಡವೇ ಬೇಡ.ಇದರಲ್ಲಿ ಬದಲು ಮಕ್ಕಳ ಶಿಕ್ಷಣಕ್ಕೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಿ ಎಂದು ಜನರು ಒತ್ತಾಯಿಸುತ್ತಿದ್ದಾರೆ.

ಪ್ರಮುಖ ಸ್ಥಳಗಳು ಪ್ರಸ್ತುತ ದರ ಪರಿಷ್ಕೃತ ದರ

ಬಳ್ಳಾರಿ - 75 - 93

ಬೆಂಗಳೂರು - 401 - 493

ಮೈಸೂರು - 490 - 603

ಹುಬ್ಬಳ್ಳಿ - 196 - 242

ವಿಜಯಪುರ - 276 - 340

ದಾವಣಗೇರೆ - 167 - 206

ಶಿವಮೊಗ್ಗ - 250 - 308

ಕೂಡ್ಲಿಗಿ - 58 - 72

ಹಗರಿಬೊಮ್ಮನಹಳ್ಳಿ - 52 - 64

ಹೂವಿನಹಡಗಲಿ - 104 - 128

ಹರಪನಹಳ್ಳಿ - 104 - 128

ಕೊಟ್ಟೂರು - 76 - 93

ಬಸ್ ಪ್ರಯಾಣ ಸಾಮಾನ್ಯ ಜನರ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸರ್ಕಾರ ಹಾಲು, ಮೊಸರು ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಈಗ ಬಸ್‌ ಪ್ರಯಾಣ ದರ ಏರಿಸಿ ಜನರ ಮೇಲೆ ಹೊರೆ ಹಾಕುತ್ತಿರುವುದು ಸರಿಯಲ್ಲ. ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ಹೊಸಪೇಟೆ ನಗರಸಭೆ ಅಧ್ಯಕ್ಷ ಎನ್‌. ರೂಪೇಶ್‌ ಕುಮಾರ್‌ ತಿಳಿಸಿದ್ದಾರೆ.

ಮೊನ್ನೆಯಷ್ಟೇ ಹಾಲಿನ ದರ ಹೆಚ್ಚಳ ಮಾಡಿ ಜನರಿಗೆ ಶಾಕ್ ನೀಡಿದ್ದ ಸರ್ಕಾರ, ಈಗ ಮತ್ತೆ ಬಸ್‌ ಪ್ರಯಾಣ ದರ ಹೆಚ್ಚಳ ಮಾಡಿ ಜನರಿಗೆ ಮತ್ತೊಂದು ಶಾಕ್ ನೀಡಿದೆ. ಇದೀಗ ಬಸ್ ಪ್ರಯಾಣ ದರ ಏರಿಕೆ ಮಾಡಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿರುವುದು ಸರಿಯಲ್ಲ ಎಂದು ಮರಿಯಮ್ಮನಹಳ್ಳಿ ರಂಗಕಲಾವಿದ ಎಚ್‌.ರಸೂಲ್ ಸಾಹೇಬ್‌ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ