ಹರಿಹರ: ನಗರದ ಹೊರವಲಯದ ಗುತ್ತೂರು ಸಮೀಪ ರಸ್ತೆ ಬದಿಯ ಕಂದಕಕ್ಕೆ ಶನಿವಾರ ಮಧ್ಯರಾತ್ರಿ ಸಾರಿಗೆ ಸಂಸ್ಥೆ ಬಸ್ಸೊಂದು ಉರುಳಿಬಿದ್ದು, ನಾಲ್ಕು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
ಬಸ್‍ನಲ್ಲಿ 42 ಪ್ರಯಾಣಿಕರಿದ್ದರು. ಘಟನೆಯಲ್ಲಿ ನಾಲ್ವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಉಳಿದ ಪ್ರಯಾಣಿಕರಿಗೆ ಬೇರೆ ಬಸ್‍ಗಳಲ್ಲಿ ಮುಂದಿನ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ ಎಂದು ಸಾರಿಗೆ ಸಂಸ್ಥೆ ಮೂಲಗಳು ತಿಳಿಸಿವೆ.
ಘಟನೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಗ್ರಾಮಾಂತರ ಪೊಲೀಸ್ ಠಾಣೆಗೆ ಸಾರಿಗೆ ಸಂಸ್ಥೆಯಿಂದ ದೂರು ಸಲ್ಲಿಸಲಾಗಿದೆ.- - - (ಸಾಂದರ್ಭಿಕ ಚಿತ್ರ)