ಹುಣಸಗಿ: ತಾಲೂಕಿನ ಗೆದ್ದಮರಿ ಗ್ರಾಮದಿಂದ ಹುಣಸಗಿ ಮುಖಾಂತರ ವಿಜಯಪುರಕ್ಕೆ ಬಸ್ ಆರಂಭಿಸಿದ್ದು, ಗೆದ್ದಲಮರಿ ಗ್ರಾಮಸ್ಥರು ಬಸ್ ಗೆ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಕರವೇ ತಾಲೂಕು ಗೌರವಾಧ್ಯಕ್ಷ ಶಿವರಾಜ ಹೊಕ್ರಾಣಿ ಮಾತನಾಡಿ, ಈ ಕುರಿತು ಸುರಪುರ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಭೇಟಿ ಮಾಡಿ ಬಸ್ ಸೌಲಭ್ಯಕ್ಕೆ ಮನವಿ ಮಾಡಲಾಗಿತ್ತು. ಆದರೆ, ಸರಿಯಾಗಿ ಸ್ಪಂದನೆ ಸಿಗಲಿಲ್ಲ. ಬಳಿಕ ವಿಜಯಪುರ ವಿಭಾಗದ ಸಾರಿಗೆ ಸಂಸ್ಥೆಯ ಅಧಿಕಾರಿ ಶಂಕರಗೌಡ ಬಿರಾದಾರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿಯನ್ನು ಪುರಸ್ಕರಿಸಿ ದಿನದ ಬೆಳಿಗ್ಗೆ 5 ಗಂಟೆಗೆ ಬಸ್ ಆರಂಭಿಸಿದ್ದರಿಂದ ವಿಜಯಪುರಕ್ಕೆ ಆಸ್ಪತ್ರೆ ಸೇರಿದಂತೆ ಇತರ ಕೆಲಸ ಕಾರ್ಯಗಳಿಗೆ ತೆರಳುವ ಜನರಿಗೆ ಅತ್ಯಂತ ಅನುಕೂಲವಾಗಿದೆ. ಸಕಾಲಕ್ಕೆ ಸ್ಪಂದಿಸಿದ ಅಧಿಕಾರಿಗಳ ಕಾರ್ಯ ಜನಮೆಚ್ಚುಗೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮಹಿಪಾಲರಡ್ಡಿ ಸಾಹುಕಾರ, ಅಮರೇಶ ಭೀಮರಡ್ಡಿ ನಿಂಗಣ್ಣ ಬಿರಾದಾರ, ಸೋಮನಗೌಡ ಬಿರಾದಾರ, ರಾಮನಗೌಡ ಬಿರಾದಾರ, ಜೊತೆಪ್ಪ, ಬಂಡೆಪ್ಪ ಪೂಜಾರಿ, ಗುರಣ್ಣ ಬಳಿ, ಗದ್ದೆಪ್ಪ ಪೂಜಾರಿ ಬಸಲಿಂಗಯ್ಯ, ಗೂಳಯ್ಯ ಇದ್ದರು.
ಫೋಟೊಹುಣಸಗಿ ತಾಲೂಕಿನ ಗೆದ್ದಲಮರಿ ಗ್ರಾಮದಿಂದ ವಿಜಯಪುರಕ್ಕೆ ಬಸ್ ಆರಂಭವಾಗಿದ್ದರಿಂದ ಗೆದ್ದಲಮರಿ ಗ್ರಾಮಸ್ಥರು ಬಸ್‌ಗೆ ಪೂಜೆ ಸಲ್ಲಿಸಿದರು.