ಯಾಣಿಕರು ಪಾವಗಡದಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ ತಡೆದು ಸಾರಿಗೆ ಅಧಿಕಾರಿಗಳು ವಿರುದ್ಧ ಹಿಡಿಶಾಪ ಹಾಕಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಕಳೆದ ಆರು ತಿಂಗಳಿಂದ ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೇ ನಿರಂತರ ಸಮಸ್ಯೆಗೆ ಬೇಸೆತ್ತ ಪ್ರಯಾಣಿಕರು ಪಾವಗಡದಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ ತಡೆದು ಸಾರಿಗೆ ಅಧಿಕಾರಿಗಳು ವಿರುದ್ಧ ಹಿಡಿಶಾಪ ಹಾಕಿದರು.ಪಾವಗಡದಿಂದ ಬೆಂಗಳೂರು, ಗೌರಿಬಿದನೂರಿನಿಂದ ತುಮಕೂರು ಮಾರ್ಗವಾಗಿ ಸಂಚಾರ ಮಾಡುವ ಸಾರಿಗೆ ಬಸ್‌ಗಳು ಸಮಯಕ್ಕೆ ಸರಿಯಾಗಿ ಬಾರದೆ ತಮ್ಮ ದಿನನಿತ್ಯ ಕೆಲಸ ಕಾರ್ಯಗಳಿಗೆ ತೊಂದರೆ ಉಂಟಾಗುತ್ತಿದೆ. ಅನೇಕ ಬಾರಿ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಎಂದು ದೂರಿಗೆ ಪ್ರಯಾಣಿಕರು ರಸ್ತೆ ತಡೆದು ಒಂದು ಗಂಟೆಗೂ ಹೆಚ್ಚು ಸಮಯ ಪ್ರತಿಭಟನೆ ನಡೆಸಿದರು. ಗೃಹ ಸಚಿವರ ಕ್ಷೇತ್ರದಲ್ಲಿಯೇ ಬಸ್‌ಗಾಗಿ ಪ್ರಯಾಣಿಕರು ಪರದಾಡುವಂತ ಅನಿವಾರ್ಯತೆ ಎದುರಾಗಿದೆ. ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಖಾಸಗಿ ಬಸ್ ನಿಲ್ದಾಣದಲ್ಲಿ ಸೋಮವಾರ ಬೆ.೪ರಿಂದ ೬ ಗಂಟೆವರೆಗೂ ಯಾವುದೇ ಸಾರಿಗೆ ಬಸ್ ಬಂದಿಲ್ಲ. ಬಸ್ ಬಂದರೂ ನಿಲ್ಲಿಸಲ್ಲ, ಕೆಲವು ಬಸ್‌ಗಳು ನಗರಕ್ಕೆ ಬರದೇ ಬೈಪಾಸ್ ಮೂಲಕ ಹೋಗುತ್ತಿದೆ. ಇದು ಕೇವಲ ಒಂದು ದಿನದ ಸಮಸ್ಯೆಯಲ್ಲಾ ಪ್ರತಿನಿತ್ಯದ ಸಮಸ್ಯೆ ಎಂದು ಪ್ರಯಾಣಿಕರು ಅಧಿಕಾರಿಗಳ ವಿರುದ್ಧ ಎಂದು ಸಾರ್ವಜನಿಕರು ದೂರಿದರು. ಸ್ಥಳಕ್ಕೆ ಬಾರದ ಸಾರಿಗೆ ಅಧಿಕಾರಿಗಳುಬಸ್ ತಡೆದು ಆಕ್ರೋಶ ಹೊರಹಾಕುತ್ತಿರುವ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೋಲಿಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಪ್ರಯಾಣಿಕರ ಸಮಸ್ಯೆಯನ್ನು ಆಲಿಸಿ ತುಮಕೂರು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದರೂ ಯಾವೊಬ್ಬ ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ. ಪ್ರಯಾಣಿಕರ ಡಿಪೋ ಡಿಸಿ ಸ್ಥಳಕ್ಕೆ ಬರುವಂತೆ ಒತ್ತಾಯ ಮಾಡಿದರು. ಆದರೂ ಯಾರು ಸ್ಥಳಕ್ಕೆ ಬರಲಿಲ್ಲ.
ಕೋಟ್:
ಪಾವಗಡ, ಮಧುಗಿರಿ ಕಡೆಯಿಂದ ಬರುತ್ತಿದ್ದ ಬಸ್‌ಗಳಲ್ಲಿ ಪ್ರಯಾಣಿಕರ ಭರ್ತಿಯಿಂದ ಬೈಪಾಸ್ ಮೂಲಕ ಬೆಂಗಳೂರಿಗೆ ಹೋಗುತ್ತಿವೆ. ಪ್ರತಿನಿತ್ಯ ಆಸ್ಪತ್ರೆಗಳಿಗೆ, ಶಾಲೆಗಳಿಗೆ, ಕೆಲಸಗಳಿಗೆ ಹೋಗುವವರ ಪಾಡೇನು. ಅಧಿಕಾರಿಗಳ ಗಮನಕ್ಕೆ ಬಂದರೂ ಯಾವುದೇ ಕ್ರಮವಹಿಸಿದೆ ಬೇಜವಾಬ್ದಾರಿ ವಹಿಸಿದ್ದಾರೆ. ನಾಗೇಶ್, ಸ್ಥಳೀಯರು
ಬೆಂಗಳೂರಿಗೆ ಹೋಗಲು ಬೆ.೪:೩೦ಕ್ಕೆ ಬಸ್ಟಾಂಡ್‌ಗೆ ಬಂದರು ಬಸ್‌ಗಳು ನಿಲ್ಲಿಸುತ್ತಿಲ್ಲ, ಬಸ್‌ಗೆ ಅಡ್ಡ ಹೋದ ಪ್ರಯಾಣಿಕರ ಮೇಲೆಯೇ ಬಸ್ ಬಿಡಲು ಹೋಗುತ್ತಾರೆ. ಬಸ್‌ನ ಅನಾನುಕೂಲದಿಂದ ಕೆಲಸಗಳಿಗೆ ಹೋಗಲು ಆಗುತ್ತಿಲ್ಲ, ಹಾಸನ ಸೇರಿ ಇತರೆ ಭಾಗದ ಬಸ್‌ಗಳು ಖಾಲಿ ಖಾಲಿ ಇರುತ್ತವೆ. ನಿರಂತರ ಸಮಸ್ಯೆಗೆ ಬೇಸತ್ತು ಬಸ್ ತಡೆದು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಕೋಮಲ, ಪ್ರಯಾಣಿಕರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.