ಕೊಪ್ಪಳ:
ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕುಕನೂರು, ಕಾರಟಗಿ ಸೇರಿದಂತೆ ತಾಲೂಕು ಕೇಂದ್ರ ಹಾಗೂ ಹೋಬಳಿಗಳಲ್ಲಿಯೂ ಬಸ್‌ಗಳು ಕಾರ್ಯಾಚರಣೆ ನಡೆಸಲಿಲ್ಲ. ಜಿಲ್ಲೆಯಲ್ಲಿ 474 ಬಸ್ ಕಾರ್ಯಾಚರಣೆ ನಡೆಸಬೇಕಿದ್ದರೂ ನಾಲ್ಕಾರು ಬಸ್‌ಗಳು ಮಾತ್ರ ರಸ್ತೆಗಿಳಿದವು. ಉಳಿದ ಬಸ್‌ಗಳು ಡಿಪೋದಲ್ಲಿಯೇ ಇದ್ದವು.
ಬೇಡಿಕೆ ಈಡೇರಿಸುವ ವರೆಗೂ ನಾವು ಕರ್ತವ್ಯಕ್ಕೆ ಹಾಜರಾಗುವುದಿಲ್ಲವೆಂದು ಪಟ್ಟು ಹಿಡಿದಿದ್ದ ಸಿಬ್ಬಂದಿಯನ್ನು ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಿದರೂ ಕರ್ತವ್ಯಕ್ಕೆ ಬರಲಿಲ್ಲ. ಖಾಸಗಿ ಚಾಲಕರನ್ನು ಇಟ್ಟುಕೊಂಡು ಬಸ್ ಓಡಿಸಲು ಅಧಿಕಾರಿಗಳು ನಡೆಸಿದ ಪ್ರಯತ್ನವು ಫಲ ಕೊಡಲಿಲ್ಲ. ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಪ್ರವೇಶಕ್ಕೆ ಅನುಮತಿ ನೀಡಿದ್ದರಿಂದ ಬಳಗೆ ಬಂದ ವಾಹನಗಳು ಪ್ರಯಾಣಿಕರನ್ನು ಕರೆದುಕೊಂಡು ಹೋದವು. ಆದರೆ, ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ವಾಹನಗಳು ಇಲ್ಲದ ಪರಿಣಾಮ ಪರದಾಡಬೇಕಾಯಿತು.ಪರೀಕ್ಷೆ ಮುಂದೂಡಿಕೆ:
ತನ್ನ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಿತು. ಇದರಿಂದ ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿಗಳು ಮರಳಿ ಹೋಗಲು ಸಹ ಸಮಸ್ಯೆಯಾಯಿತು.
ಕರ್ತವ್ಯಕ್ಕೆ ಹಾಜರಾಗದೆ ಬಸ್ ನಿಲ್ದಾಣದಲ್ಲಿ ಓಡಾಡುತ್ತಿದ್ದ ಸಿಬ್ಬಂದಿಯನ್ನು ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಿದರು ಸ್ಪಂದಿಸಲಿಲ್ಲ. ನಮ್ಮ ಸಂಘಟನೆ ರಾಜ್ಯ ಪದಾಧಿಕಾರಿಗಳ ಮಾಹಿತಿ ಬರುವವರೆಗೂ ನಾವು ಕರ್ತವ್ಯಕ್ಕೆ ಬರುವುದಿಲ್ಲ ಎಂದು ಹೇಳಿದರು. ನಿತ್ಯ ಸಿಬ್ಬಂದಿಯನ್ನು ಸತಾಯಿಸುತ್ತಿದ್ದ ಅಧಿಕಾರಿಗಳಿಗೆ ಮಂಗಳವಾರ ಚಳ್ಳೇಹಣ್ಣು ತಿನ್ನಿಸಿದರು.ನಮಗೆ ಅನ್ಯಾಯ: